Uncategorized

ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಮರು ಕಾಮಗಾರಿಗೆ ಪ್ಲಾನ್, ಮಹೇಶ ಕುಮಠಳ್ಳಿ ಆಕ್ರೋಶ

Share

ನಾನು ಮಾಡಿದ ಕಾರ್ಯಕ್ಕೆ ಸವದಿ ಫ್ಲ್ಯಾನ್ ಮಾಡಿ ಕಾಮಗಾರಿ ಮರು ಭೂಮಿ ಪೂಜೆ ಮಾಡುತ್ತಿದ್ದಾರೆ. ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಮಗಾರಿ ಪ್ರಾರಂಭ ಮಾಡದೇ ಮತ್ತೆ ಭೂಮಿ ಪೂಜೆ ಎಂದರೆ ಏನು ಅರ್ಥ? ಇಲ್ಲಿ ಅಥಣಿ ಶಾಸಕ ಲಕ್ಷ್ಮಣ್ ಸವದಿ ಹಾಗೂ ಕಾಂಗ್ರೆಸ್ ನಾಯಕರು ನಾಟಕ ಮಾಡುತ್ತಿದ್ದಾರೆ. ಏನಾದ್ರೂ ಕಾಮಗಾರಿಗೆ ಮರು ಭೂಮಿ ಪೂಜೆ ನೆರವೇರಿಸಿದರೆ ಬಿಜೆಪಿ ಪಕ್ಷದಿಂದ ಹೋರಾಟ ಮಾಡಲಾಗುವುದು. ಮೊದಲನೇ ಹಂತದ ಕಾಮಗಾರಿ ನಡೆದಿಲ್ಲ. ಆದಷ್ಟು ಬೇಗನೆ ಈ ಕಾಮಗಾರಿ ಪ್ರಾರಂಭ ಮಾಡಬೇಕು.

ಕಳೆದ ಹದಿನೈದು ವರ್ಷಗಳಿಂದ ಅಮ್ಮಾಜೇಶ್ವರಿ ಏತ ನೀರಾವರಿ ಬಗ್ಗೆ ವಿಚಾರ ಎತ್ತದ ಸವದಿ ಚುನಾವಣೆ ಸಮೀಪಿಸುತ್ತಿದ್ದಂತೆ ಈ ರೀತಿ ಮಾಡುತ್ತಿದ್ದಾರೆ ಶಾಸಕ ಲಕ್ಷ್ಮಣ್ ಸವದಿ ಪ್ಲಾನ್ ಮಾಡಿದ್ದಾರೆ. ಅಮ್ಮಾಜೇಶ್ವರಿ ಏತ ನೀರಾವರಿ ಶ್ರೇಯಸ್ಸು ಬಿಜೆಪಿ ಪಕ್ಷಕ್ಕೆ ಸಲ್ಲತಕ್ಕದ್ದು. ನಾನು ಮಾಡಿದ ಕಾರ್ಯಕ್ಕೆ ಸವದಿ ಫ್ಲ್ಯಾನ್ ಮಾಡಿ ಕಾಮಗಾರಿ ಮರು ಭೂಮಿ ಪೂಜೆ ಮಾಡುತ್ತಿದ್ದಾರೆ. ಈ ರೀತಿ ಏನಾದರೂ ಮಾಡಿದರೆ ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಹಕ್ಕು ಚ್ಯುತಿ ಆಗುತ್ತದೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದ್ದಾರೆ.

ಶಾಸಕರಿಗೆ 2004 ರಿಂದ ಇಲ್ಲಿಯವರೆಗೆ ಈ ಯೋಜನೆಯ ಕನಸು ಬಿದ್ದೀಲ್ಲವೆ ಎಂದು ಪ್ರಶ್ನಿಸಬೇಕಾಗುತ್ತದೆ. 1600 ಕೃಷಿ ಹೊಂಡ ಸುಮಾರು 21 ಕೆರೆ ತುಂಬುವ ಯೋಜನೆ ಡಿಪಿಆರ್ ಮಾಡಿದ್ದು ಆಗ ವಿಧಾನಪರಿಷತ್ ಸದಸ್ಯರು ಆಗಿದ್ದ ಸವದಿ ವೈಯಕ್ತಿಕ ವಾಗಿ ಡಿಪಿಆರ್ ಮಾಡಲು ಮುಂದಾಗಿದ್ದು ಅನಿವಾರ್ಯವಾಗಿ ಆಗ ಡಿಪಿಆರ್ ಮತ್ತೆ ಮಾಡಲು ವಿಳಂಬವಾಯಿತು.ನಾನು ಕೂಡ ರೈತನಿದ್ದು ತೆಲಸಂಗದಲ್ಲಿ ನನ್ನ ಜಮೀನುಗಳಿದ್ದು ನಮಗೂ ರೈತರ ಬಗ್ಗೆ ಕಾಳಜಿ ಇದೆ.ಅಮ್ಮಾಜೇಶ್ವರಿ ಯೋಜನೆಯ ಶಂಕು ಸ್ಥಾಪನೆ ನಾಟಕ ಅವರ ಘನತೆಗೆ ಶೋಭೆ ತರುವದಿಲ್ಲ ಎಂದರು .

Tags: