ಆಟೋ ಚಾಲಕರು ಎಂದರೇ ಸ್ವಲ್ಪ ದೂರ ಸಂಚಾರ ಮಾಡಲು ಸಾಕಷ್ಟು ದುಡ್ಡು ಕೇಳುತ್ತಾರೆ ಎಂಬುವಂತ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವುದು ಸಹಜ. ಆದರೆ ಖಾಕಿ ತೊಟ್ಟು ಆಟೋ ಚಾಲನೆ ಮಾಡುವ ಚಾಲಕರಲ್ಲಿಯೂ ಒಬ್ಬ ಸಹೃದಯಿ ಸೇವಕ ಇರುತ್ತಾನೆ ಎಂಬುವಂತ ಮಾತು ಅಕ್ಷರಶಃ ಸತ್ಯ.
ಹೌದು.. ಚೆನ್ನಮ್ಮ ವೃತ್ತದಿಂದ ಆಟೋ ಹತ್ತಿದ ಪ್ರಯಾಣಿಕರು ಅರವಿಂದನಗರದಲ್ಲಿ ಇಳಿಯುವಾಗ ತಮ್ಮ ಬ್ಯಾಗವೊಂದನ್ನು ಬಿಟ್ಟು ಹೋಗಿದ್ದರು. ಬ್ಯಾಗಿನಲ್ಲಿ ಲಕ್ಷಾಂತರ ಮೌಲ್ಯದ ಆಭರಣಗಳು ಕೂಡ ಇದ್ದವು. ಇದೇ ವೇಳೆ ಹಿಂದಿನ ಆಸನದಲ್ಲಿದ್ದ ಪ್ರಯಾಣಿಕರ ಬ್ಯಾಗ್ ಗಮನಿಸಿದ ಆಟೋ ಚಾಲಕ ರಾಜು ಬಿಂಗೆ ಪ್ರಾಮಾಣಿಕವಾಗಿ ಬ್ಯಾಗ್ ಜೊತೆಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಆಗ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಶೋಕ ಚವ್ಹಾಣ ನೇತೃತ್ವದಲ್ಲಿ ಪ್ರಯಾಣಿಕರಿಗೆ ಬ್ಯಾಗ್ ಮರಳಿಸುವ ಮೂಲಕ ಆಟೋ ಚಾಲಕ ರಾಜು ಬಿಂಗೆ ಪ್ರಾಮಾಣಿಕತೆ ಮೆರೆದಿದ್ದಾನೆ.
ಇನ್ನೂ ಪ್ರಾಮಾಣಿಕತೆ ತೋರಿದ ಆಟೋ ಚಾಲಕನಿಗೆ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ ಚವ್ಹಾಣ ಹಾಗೂ ಸಿಬ್ಬಂದಿ ಠಾಣೆಯಲ್ಲಿಯೇ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದು, ಆಟೋ ಚಾಲಕನ ಪ್ರಾಮಾಣಿಕತೆ ಮೆಚ್ಚಿ ಅಭಿನಂದನೆ ಸಲ್ಲಿಸಿದ್ದಾರೆ.