Uncategorized

ಬಸವನ ಕುಡಚಿ ದುರ್ಗಾಮಾತಾ ದೌಡಿಗೆ ಅಭೂತಪೂರ್ವ ಚಾಲನೆ

Share

ಬಸವನ ಕುಡಚಿ ಗ್ರಾಮದ ಕಲ್ಮೇಶ್ವರ ಬಸವನ ದೇವಸ್ಥಾನದಿಂದ ಆರಂಭವಾದ ದುರ್ಗಾಮಾತಾ ದೌಡ ನಿಲಜಿ ಗ್ರಾಮದ ಲಕ್ಷ್ಮೀ ದೇವಸ್ಥಾನದವರೆಗೆ ನಡೆಯಿತು.

ಬಸವನ ಕುಡಚಿ ದುರ್ಗಾಮಾತಾ ದೌಡಿಗೆ 19ನೇ ವರ್ಷ.”ಶಿವಪ್ರತಿಷ್ಠಾನ ಹಿಂದೂಸ್ಥಾನ” ಆಯೋಜಿಸಿದ ನವರಾತ್ರಿ-ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ದುರ್ಗಾಮಾತಾ ದೌಡ” ಮಹಾರಾಷ್ಟ್ರದಾದ್ಯಂತ ಮತ್ತು ಅನೇಕ ಗ್ರಾಮಗಳಲ್ಲಿ ಅಗಾಧ ರೂಪವನ್ನು ಪಡೆದುಕೊಂಡಿದೆ ಮತ್ತು ಲಕ್ಷಾಂತರ ಯುವಕ-ಯುವತಿಯರು ತಮ್ಮ ತಲೆಯ ಮೇಲೆ ಕೇಸರಿ ಪೇಟವನ್ನು ಧರಿಸಿ, ಕೇಸರಿ ಧ್ವಜವನ್ನು ಹಿಡಿದು, ಬಿಳಿ ಕುರ್ತಾವನ್ನು ಧರಿಸುತ್ತಾರೆ. ಖಡ್ಗಗಳನ್ನು ಹಿಡಿದು, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಮೆರವಣಿಗೆ ಮಾಡಿ ರಂಗೋಲಿಗಳನ್ನು ಬೀದಿಗಳಲ್ಲಿ ಹಾಕಿ ನಾಗರಿಕರು ಹೂವಿನ ಹಾದಿಯಲ್ಲಿ ದುರ್ಗಾಮಾತಾ ದೌಡ ಸ್ವಾಗತಿಸುತ್ತಾರೆ ಭಾಗಿಯಾದ ಯುವಕ ಯುವತಿಯರು ದಣಿವರಿಯಿಲ್ಲದೆ ಓಡುತ್ತಾರೆ, ಮತ್ತು ಉತ್ಸಾಹದಿಂದ ಭಾಗಿಯಾಗುತ್ತಾರೆ

Tags: