ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವಿಶೇಷ ಸಭೆಯಲ್ಲಿ ವೃತ್ತಿಪರ ನೇಕಾರರ ಹಕ್ಕೋತ್ತಾಯಗಳ ಈಡೇರಿಕೆಗಾಗಿ ಬೆಳಗಾವಿ ಸುವರ್ಣ ಸೌಧ ಚಲೋ ನಿರ್ಣಯ ತೆಗೆದುಕೊಳ್ಳಲಾಯಿತು ಎಂದು ಶಿವಲಿಂಗ ಟಿರಕಿ ಹೇಳಿದರು
ಸಭೆಯಲ್ಲಿ ಮಾತನಾಡಿ ಅವರು ಈಗಾಗಲೇ ರಾಜ್ಯದಲ್ಲಿ 10ಹೆಚ್ ಪಿವರೆಗೆ ಉಚಿತ ವಿದ್ಯುತ್ ಜಾರಿಯಾಗಿದ್ದು ಸಾಕಷ್ಟು ಜನರ ಬಾಕಿ ಬಿಲ್ಗಳು ಉಳಿದಿದ್ದು ಅದನ್ನು ಸರ್ಕಾರ ಬಳಸಿಕೊಳ್ಳಬೇಕೆಂದು ಒತ್ತಾಯಿಸುತ್ತಾ ಕಟ್ಟಡ ಕಾರ್ಮಿಕ ಮಾದರಿಯಲ್ಲಿ ಕಾರ್ಮಿಕ ಸೌಲಭ್ಯಗಳನ್ನು ಜಾರಿ ಮಾಡಿ ಕಾರ್ಮಿಕರ ಕಾರ್ಡುಗಳನ್ನು ಕಟ್ಟಕಡೆಯ ನೇಕಾರನಿಗೂ ಒದಗಿಸಬೇಕೆಂದು ಮಾನ್ಯ ಕಾರ್ಮಿಕ ಸಚಿವರದೊಂದಿಗೆ ಸಭೆ ಮಾಡಿಸಿ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಬರೆದು ಕೊಡಬೇಕೆಂದು ರಾಜ್ಯದಲ್ಲಿ ಸಾಲದ ಹೊರೆಯಿಂದ 46 ಜನರ ಆತ್ಮಹತ್ಯೆಗಳಾಗಿದ್ದು ಅವರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಮತ್ತು ಇಂತಹ ಪ್ರಕರಣಗಳು ಮುಂದೆ ನಡೆಯಬಾರದೆಂದರೆ ಒಂದು ಬಾರಿ ರಾಷ್ಟ್ರೀಕೃತ ಬ್ಯಾಂಕುಗಳನ್ನು ಒಳಗೊಂಡಂತೆ ಸಂಪೂರ್ಣ ಸಾಲಮನ್ನಾ ಜಾರಿ ಮಾಡಬೇಕು ಎರಡು ವರ್ಷಗಳಿಂದ ಅನೇಕ ಸೊಸೈಟಿಗಳಿಗೆ ಬಡ್ಡಿ ಸಹಾಯ ದನಬಾರದೆಂದು ನೇಕಾರರು 16ರಿಂದ 18 ಪ್ರತಿಶತ ಬಡ್ಡಿ ತುಂಬುವ ಪರಿಸ್ಥಿತಿ ನಿರ್ಮಾಣವಾಗಿದೆ ಕೂಡಲೇ ಅದನ್ನು ಬಿಡುಗಡೆ ಮಾಡಬೇಕು ಆಗಸ್ಟ್ ನಲ್ಲಿ ಬರಬೇಕಿದ್ದ ನೇಕಾರ ಸಮ್ಮಾನ ಯೋಜನೆ ಹಣ ಆದಷ್ಟು ಬೇಗನೆ ಸಂದಾಯ ಮಾಡಬೇಕು ಎಂದು ಸಭೆಯ ಮೂಲಕ ಒತ್ತಾಯಿಸಲಾಗಿದೆ
ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾಧಿಕಾರಿಗಳಿಂದ ಸಮರ್ಪಕವಾಗಿ ಸ್ಪಂದನೆ ಇಲ್ಲದ ಕಾರಣ ಯೋಜನೆಗಳ ಮಾಹಿತಿಯನ್ನು ಕೂಡ ಸಮರ್ಪಕವಾಗಿ ನೀಡುವ ಕಾರ್ಯ ನಡೆಯದೇ ಇರುವುದರಿಂದ ಆ ಎಲ್ಲ ಅಧಿಕಾರಿಗಳು 2 ವರ್ಷಗಳಿಂದ ಒಂದೇ ಕಡೆ ಬೇರೂರು ಬೇರೂರು ಅವರನ್ನು ವರ್ಗಾಯಿಸಬೇಕು ಮತ್ತು ಸಮರ್ಪಕವಾದ ಸೇವೆ ಇಲಾಖೆಗಳಿಂದ ಕಟ್ಟಕಡೆಯ ನೇಕಾರನಿಗೆ ಸಿಗುವಂತಾಗಬೇಕು ಅನೇಕ ಯೋಜನೆಗಳು ಈಗಾಗಲೇ ಇದ್ದು ಆ ಯೋಜನೆಗಳನ್ನು ಒದಗಿಸಲು ಹಣಕಾಸಿನ ಕೊರತೆಯಿದ್ದು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಕನಿಷ್ಠ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ತೆಗೆದಿಟ್ಟು ನೇಕಾರರಿಗೆ ಇಲಾಖೆಗಳಿಂದ ಸರಿಯಾದ ಸೇವೆ ಒದಗುವಂತಾಗಬೇಕು ಹಾಗೂ ಕೆ ಹೆಚ್ ಡಿ ಸಿ ನೂರಾರು ಕೋಟಿ ರೂಪಾಯಿ ಸಾಲದ ಹೊರೆಯಿಂದ ನಡೆಯುತ್ತಿದ್ದು ಅದು ಮುಚ್ಚುವ ಹಂತದಲ್ಲಿದೆ ಕಳೆದ ಅಧಿಕಾರ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿಗಳ ಹಗರಣವಾಗಿದ್ದು ಸರ್ಕಾರ ಅದರ ಮೇಲೆ ಸೂಕ್ತ ತನಿಖೆ ಮಾಡಬೇಕು ಒಳಪಡಿಸಬೇಕು ಎಂದರು .
ಕೆ ಹೆಚ್ ಡಿ ಸಿ ಕಾಲನಿಯಲ್ಲಿರುವ ನೇಕಾರರಿಗೆ ನಿವೇಶನಗಳ ಹಂಚಿಕೆಯಾಗಬೇಕು ಸಿ ಟಿ ಎಸ್ ಉತಾರ ಹಾಗೂ ಹಕ್ಕು ಪತ್ರಗಳನ್ನು ಒದಗಿಸಬೇಕು ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಮಾನ್ಯ ಜವಳಿ ಸಚಿವರು ಮುಖ್ಯಮಂತ್ರಿಗಳೊಂದಿಗೆ ಸಭೆ ಮಾಡಿ ಈ ಸಮಸ್ಯೆಗಳನ್ನು ಇಟ್ಟ ವ್ಯಕ್ತಪಡಿಸಬೇಕು ಮುಂಬರುವ ಚಳಿಗಾಲ ಅಧಿವೇಶನದ ಸಮಯದಲ್ಲಿ ಬೃಹತ್ ಹೋರಾಟಕ್ಕೆ ಸಿದ್ಧತೆಯನ್ನು ಕೂಡ ಮಾಡಲಾಗುತ್ತಿದ್ದು ಈಗಾಗಲೇ ಅನೇಕ ಸಭೆಗಳು ಕೂಡ ನಡೆಯುತ್ತಿವೆ ನಿನ್ನೆ ನಡೆದ ಸಭೆಯ ಮೂಲಕ ದಿನಾಂಕ 6.12.2023 ರಂದು ಸುವರ್ಣ ಸೌಧದ ಎದುರಿಗೆ ಹತ್ತಾರು ಸಾವಿರ ಜನ ನೇಕಾರರು ಸೇರಿ ಬೃಹತ್ ಪ್ರತಿಭಟನೆಗೆ ಬೆಳಗಾವಿ ಚಲೋ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುವುದೆಂದು ಈ ಹೋರಾಟದಲ್ಲಿ ವಿಜಯಪುರ ಬಾಗಲಕೋಟೆ ಬೆಳಗಾವಿ ಗದಗ್ ಹುಬ್ಬಳ್ಳಿ ಧಾರವಾಡ ಹಾವೇರಿ ಬೆಂಗಳೂರು ತುಮಕೂರು ದೊಡ್ಡಬಳ್ಳಾಪುರ ಅನೇಕ ಜಿಲ್ಲೆಗಳಿಂದ ನೇಕಾರರು ಭಾಗವಹಿಸಲು ಕರೆ ನೀಡಲಾಗುವುದು ಎಂದರು .
ಸಭೆಯಲ್ಲಿ ರಾಜೇಂದ್ರ ಮಿರ್ಜಿ ಮಲ್ಲಪ್ಪ ಮಿರ್ಜಿ ಸೋಮಶೇಖರ್ ಮರೆಗುದ್ದಿ ಸಂಗಪ್ಪ ಹಳ್ಳೂರ್ ಎಸ್ಎಸ್ ಮಠ ಗೋಪಾಲಪ್ಪ ಮದಿ ರಾಘು ಬೆಳಗಲಿ ರಾಜು ಕುಕ್ಕುಗೋಳ ಗಿರ್ಮಲ್ ಕೈಸೊಲಗಿ ಶ್ರೀಕಾಂತ್ ಜಗದಾಳ್ ಶ್ರೀಶೈಲ್ ಬಿಸಿನಕೊಪ್ಪ ನೂರಾರು ಜನ ವೃತ್ತಿಪರ ನೇಕಾರರು ಉಪಸ್ಥಿತರಿದ್ದರು