Uncategorized

4ನೇ ರಾಜ್ಯ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳಗಾವಿಯ ಸ್ಕೇಟರ್ ಗಳು

Share

ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್‌ನ ಸ್ಕೇಟರ್‌ಗಳು 4 ನೇ ಕರ್ನಾಟಕ ರ್ಯಾಂಕಿಂಗ್ ಓಪನ್ ಸ್ಟೇಟ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ 2023 ರಲ್ಲಿ ಭಾಗವಹಿಸಿದ್ದಾರೆ. 2023 ರ ಅಕ್ಟೋಬರ್ 2 ರಿಂದ 5 ರವರೆಗೆ ಮೈಸೂರಿನಲ್ಲಿ ಪಂದ್ಯಾವಳಿ ಜರುಗಿತು.

ಸ್ಟೇಟ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ನಲ್ಲಿ 13 ಜಿಲ್ಲೆಗಳಿಂದ 400 ಸ್ಕೇಟರ್‌ಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಬೆಳಗಾವಿಯ ಸ್ಕೇಟರ್‌ಗಳು 2 ಚಿನ್ನ, 5 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 9 ಪದಕಗಳನ್ನು ಗೆದ್ದಿದ್ದಾರೆ.
ಸ್ಪೀಡ್ ಸ್ಕೇಟಿಂಗ್: ಸೌರಭ್ ಸಲೋಖೆ 2 ಚಿನ್ನ 1 ಬೆಳ್ಳಿ, ಜಾನ್ವಿ ತೆಂಡೂಲ್ಕರ್ 2 ಬೆಳ್ಳಿ, ದೂರ್ವಾ ಪಾಟೀಲ್ 2 ಬೆಳ್ಳಿ, ಸಾನ್ವಿ ಎಟ್ಗಿಕರ್ 2 ಕಂಚು. ಗೆದ್ದಿದ್ದಾರೆ
ಈ ಎಲ್ಲ ಸ್ಕೇಟರ್‌ಗಳು ಕೆಎಲ್‌ಇ ಸ್ಕೇಟಿಂಗ್‌ ರಿಂಕ್‌ ಮತ್ತು ಗುಡ್‌ ಶೆಫರ್ಡ್‌ ಸ್ಕೇಟಿಂಗ್‌ ರಿಂಕ್‌ನಲ್ಲಿ ಸ್ಕೇಟಿಂಗ್‌ ತರಬೇತುದಾರರಾದ ಸೂರ್ಯಕಾಂತ ಹಿಂಡಲಗೇಕರ, ಯೋಗೀಶ್‌ ಕುಲಕರ್ಣಿ, ವಿಶಾಲ ವೇಸನೆ, ಮಂಜುನಾಥ ಮಂಡೋಳಕರ, ವಿಠ್ಠಲ್‌ ಗಗನೆ, ಅನುಷ್ಕಾ ಶಂಕರಗೌಡ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರಭಾಕರ ಕೋರೆ, ಮಾಜಿ ಶಾಸಕ ಶಾಮ್ ಘಾಟಗೆ, ರಾಜ್ ಘಾಟ್ಗೆ, ಉಮೇಶ ಕಲ್ಘಟಗಿ, ಪ್ರಸಾದ್ ತೆಂಡೋಲ್ಕರ್, ಕೆಆರ್ ಎಸ್ ಎ ಪ್ರಧಾನ ಕಾರ್ಯದರ್ಶಿ ಇಂದೂಧರ್ ಸೀತಾರಾಮ್ ಪ್ರೋತ್ಸಾಹ ಸಿಗುತ್ತಿದೆ.

Tags:

Belgaum skaters at the 4th State Skating Championship