Uncategorized

ನಾಗನೂರು ಶಿವಬಸವ ಸ್ವಾಮೀಜಿ ೧೩೪ ನೇ ಜಯಂತಿ ನಿಮಿತ್ಯ ಜನಜಾಗೃತಿ ಪಾದಯಾತ್ರೆ

Share

ಕಾಯಕಯೋಗಿ ಪಹಾಪ್ರಸಾದಿ ಪರಮಪೂಜ್ಯ ಶ್ರೀ ಡಾ ಶಿವಬಸವ ಮಹಸ್ವಾಮಿಗಳ ೧೩೪ ನೇ ಜಯಂತಿ ಮಹೋತ್ಸವ ನಿಮಿತ್ಯ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು

ಬೆಳಗಾವಿಯ ಅಗಸಗಿ ಕಲ್ಮೇಶ್ವರ ದೇವಸ್ಥಾನದಲ್ಲಿ ಸಮಾವೇಶ ಹಾಗು ರುದ್ರಾಕ್ಷಿಧಾರಣೆ ಪರಮ ಪೂಜ್ಯ ಡಾ ಅಲ್ಲಮಪ್ರಭು ಸ್ವಾಮೀಜಿಗಳು ದಿವ್ಯ ನೇತೃತ್ವದಲ್ಲಿ ಜರುಗಿತು
ಅಗಸಗಿ ಗ್ರಾಮದಲ್ಲಿ ನೂರಾರು ಭಕ್ತರ ಉಪಸ್ಥಿತಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು ಊರಿನ ಮುಖಂಡರು ಮಹಿಳೆಯರು ಯುವಕರು ಭಕ್ತಿಯಿಂದ ಭಾಗಿಯಾಗಿದ್ದು ವಿಶೇಷವಾಗಿತ್ತು .


ಈ ಸಂದರ್ಭದಲ್ಲಿ ಮುದಗಲ್ಲದ ಶ್ರೀ ಮಹಾಂತ ಸ್ವಾಮಿಗಳು ,ಧಾರವಾಡದ ಶಿವಬಸವ ದೇವರು ,ಕಿತ್ತೂರಿ ಕಲ್ಲೋಳಿಯ ಶ್ರೀ ಶ್ರೀ ಓಂಕಾರ ಗುರೂಜಿ ,ಶ್ರೀ ಚಂದ್ರಶೇಖರ ಸ್ವಾಮೀಜಿ ,ಜಾಗತಿಕ ಮಹಾಸಭೆಯ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ ,ಕಾರ್ಯದರ್ಶಿಗಳಾದ ಅಶೋಕ ಮುಳಗಲಿ ,ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ ,ಅಮೃತ ಮುಡಗಣ್ಣವರ ,ಅಪ್ಪಾಜಿಗೌಡಾ ಪಾಟೀಲ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು

Tags: