Uncategorized

ನರೇಂದ್ರ ಮೋದಿ ಅವರ ಕಾಲದಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ನಮ್ಮ ಭಾಗ್ಯ:ಸಂಸದೆ ಮಂಗಲಾ ಅಂಗಡಿ

Share

ರಾಮ ಮಂದಿರವು ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾಲದಲ್ಲಿ ಉದ್ಘಾಟನೆ ಆಗುತ್ತಿರುವುದು ನಮ್ಮ ಭಾಗ್ಯ ರಾಮ ಮಂದಿರದ ಉದ್ಘಾಟನೆಯಂದು ನಾವೆಲ್ಲರೂ ದೀಪಾವಳಿ ಆಚರಣೆ ಮಾಡುವಂತೆ ಮನೆಯಲ್ಲಿ ದೀಪಾರಾಧನೆ ಮಾಡಿ ದೀಪವನ್ನು ಹಚ್ಚಿ ರಾಮನ ನಾಮ ಜಪಿಸೋಣಾ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು

ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮೀಣ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿತ್ತು ಯುವಕರು ವಾಹನ ಚಾಲನೆ ಮಾಡುವಾಗ ತಪ್ಪದೆ ಹೆಲ್ಮೆಟ್ ಧರಿಸುವಂತೆ ಬಿಜೆಪಿ ನಾಯಕರು ಜಾಗೃತಿ ಮುಟ್ಟಿಸಿ ಕಾರ್ಯಕರ್ತರಿಗೆ ಹೆಲ್ಮೆಟ್ ವಿತರಿಸಿದರು.

ಈ ಸಂದರ್ಭದಲ್ಲಿ ಸಂಸದೆ ಮಂಗಲಾ ಅಂಗಡಿ ಮಾತನಾಡುತ್ತಾ ರಾಮ ಮಂದಿರವು ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾಲದಲ್ಲಿ ಉದ್ಘಾಟನೆ ಆಗುತ್ತಿರುವುದು ನಮಗೆ ಅತೀವ ಸಂತೋಷ ತಂದಿದೆ ನಾವೆಲ್ಲರೂ ದೀಪಾವಳಿ ಆಚರಣೆ ಮಾಡುವಂತೆ ಮನೆಯಲ್ಲಿ ದೀಪಾರಾಧನೆ ಮಾಡಿ ದೀಪವನ್ನು ಹಚ್ಚಿ ರಾಮನ ನಾಮ ಜಪಿಸೋಣಾ ನಗರದಲ್ಲಿರುವ ಸುತ್ತಮುತ್ತಲಿನ ದೇವಾಲಯಗಳನ್ನು ಸ್ವಚ್ಛತೆ ಮಾಡೋನಾ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರು ಒಗ್ಗೂಡಿ ನರೇಂದ್ರ ಮೋದಿ ಅವರ ಯೋಜನೆ ಬಗ್ಗೆ ಜನರಿಗೆ ತಿಳಿಸೋಣಾ ಎಂದರು.

ಶಾಸಕ ಅಭಯ ಪಾಟೀಲ ಮಾತನಾಡುತ್ತಾ ಅಯೋದ್ಯೆಯಲ್ಲಿ ಪ್ರಭು ಶ್ರೀರಾಮ ಉದ್ಘಾಟನೆ ನೋಡುತ್ತಿರುವುದು ನಮ್ಮ ತಂದೆ ತಾಯಿಗಳು ನಮಗೆ ನೀಡಿರುವ ದೊಡ್ಡ ಅವಕಾಶ ಇಂತಹ ರಾಮನ ಕುರಿತು ವಿರೋಧ ಮಾಡುತ್ತಿರುವ ಕಾಂಗ್ರೆಸ ಸರ್ಕಾರದ ನಡೆ ಖಂಡನೀಯ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ ಶಾಸಕರು ಸಚಿವರು ರಾಮ ಮಂದಿರದ ಉದ್ಘಾಟನೆಗೆ ಹೋಗುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಅವರ ಕೆಲವೇ ತಿಂಗಳಲ್ಲೇ ಮನೆಗೆ ಹೋಗುತ್ತಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮೇಲೆ ಕಿಡಿಕಾರಿದರು .ನರೇಂದ್ರ ಮೋದಿ ಅವರಂತ ನಾಯಕರು ಸಿಕ್ಕಿದ್ದು ನಮ್ಮ ಭಾಗ್ಯ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನ ಪ್ರಧಾನ ಮಂತ್ರಿಗಳನ್ನಾಗಿ ಮಾಡೋಣ ಎಂದರು .

ಮಾಜಿ ಶಾಸಕ ಹಾಗೂ ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ ಮಾತನಾಡುತ್ತಾ ಕಳೆದ ಕೆಲವು ದಿನಗಳಿಂದ ಈ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಕೇಸರಿ, ಕೇಸರಿಮಯ ವಾತಾವರಣ ನಿರ್ಮಾಣವಾಗಿದೆ. ಕಳೆದ 500 ವರ್ಷಗಳ ಹಂಬಲ, ಇದಕ್ಕಾಗಿ ಅನೇಕ, ಕರಸೇವಕರು ಜೀವವನ್ನು ತ್ಯಾಗ ಮಾಡಿದರು. ಹಿಂದಿನ ತಲೆಮಾರಿನವರು ತಮ್ಮ ಕಾಲದಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ಬಯಸಿದ್ದರು. ಆದರೆ ನಮ್ಮ ಕಾಲದಲ್ಲೇ ಈ ದೇವಾಲಯ ನಿರ್ಮಾಣವಾಗಿರುವುದು ನಮ್ಮ ಅದೃಷ್ಟ. ಅದರ ಶ್ರೇಯಸ್ಸು ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಅನೇಕರು ಅದನ್ನು ವಿರೋಧಿಸಿದರು. ಈ ರಾಮ ಮಂದಿರದ ಉದ್ಘಾಟನೆಯನ್ನು ಜಾತಿ, ಭಾಷಾ ಭೇದವಿಲ್ಲದೆ ಎಲ್ಲರೂ ಆಚರಿಸಬೇಕು ಎಂಬ ಆಶಯವಿದೆ. ಜನರು ತಮ್ಮ ಮನೆಗಳಲ್ಲಿ ದೀಪಗಳನ್ನು ಹಚ್ಚಿ, ಬೀದಿ ಬೀದಿಗಳನ್ನು ಕೇಸರಿ ಪರಿಸರವನ್ನಾಗಿ ಮಾಡಿ, ವ್ಯಸನದಿಂದ ದೂರವಿರಿ ಎಂದು ಮೋದಿ ಮನವಿ ಮಾಡಿದ್ದಾರೆ. ಕನಿಷ್ಠ ಎರಡು ದಿನಗಳ ಕಾಲ ಯಾರೂ ಮಾಂಸಾಹಾರ ಸೇವಿಸಬಾರದು, ಮದ್ಯ ಸೇವಿಸಬಾರದು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡುತ್ತಾ ನಮ್ಮ ದೇಶ ವಿವಿಧತೆ ಏಕತೆ ಕಾಣುವ ದೇಶ ರಾಮ ಮಂದಿರ ನಿರ್ಮಿಸಲು ಸಾಕಸ್ಟು ಕರ ಸೇವಕರು ತಮ್ಮ ಜೀವವನ್ನು ತ್ಯಜಿಸಿದ್ದಾರೆ ರಾಮನ ಮಂದಿರ ೨೨ ರಂದು ಉದ್ಘಾಟನೆ ಗೊಳ್ಳುತ್ತಿರುವುದು ನಮ್ಮ ಭಾಗ್ಯ ನರೇಂದ್ರ ಮೋದಿ ಅವರಂತ ವಿಶ್ವ ನಾಯಕ ನಮಗೆ ಸಿಕ್ಕಿದ್ದು ಪುಣ್ಯ ಎಲ್ಲರು ರಾಮನ ಮಂದಿರದ ಲೋಕಾರ್ಪಣೆ ದಿನದಂದು ಹಬ್ಬವನ್ನು ಆಚರಿಸೋಣಾ ಎಲ್ಲರು ಸೇರಿ ಜವಾಬ್ದಾರಿಯಿಂದ ಕಾರ್ಯ ಮಾಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು .

ಈ ಸಂದರ್ಭದಲ್ಲಿ ಜಿಜೆಪಿ ಹಿರಿಯ ಮುಖಂಡರಾದ ಎಂ ಬಿ ಜಿರಲಿ ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಗೇಂದ್ರಗೌಡ ಪಾಟೀಲ , ಶಂಕರಗೌಡಾ ಪಾಟೀಲ , ಉಜ್ವಲಾ ಬಡವನ್ನಾಚೆ ,ಮೇಯರ ಶೋಭಾ ಶೋಭಾ ಸೊಮನಾಚೆ ,ಉಪಮೇಯರ ರೇಶ್ಮಾ ಪಾಟೀಲ ,ಆರ್ ಎಸ ಮುತಾಲಿ ,ರಾಜೇಂದ್ರ ಹರಕುಣಿ ,ಸುಭಾಷ ಪಾಟೀಲ ,ಸಂದೀಪ ದೇಶಪಾಂಡೆ ,ದಾದಾಗೌಡಾ ಪಾಟೀಲ ,ಮಲ್ಲಿಕಾರ್ಜುನ ಮಾದಮ್ಮನವರ ,ಸಂಜಯ ಪಾಟೀಲ ,ಸುಭಾಷ ಪಾಟೀಲ ,ಎಫ್ ಎಸ ಸಿದ್ದನಗೌಡರ ,ಶರದ ಪಾಟೀಲ ಸೇರಿದಂತೆ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮೀಣ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು

Tags: