Uncategorized

ಕುಂದಾನಗರಿ ಬೆಳಗಾವಿಯಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ

Share

ಕುಂದಾನಗರಿ ಬೆಳಗಾವಿಯಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿದ್ದು ಬೆಳಗಾವಿ ಜನರಲ್ಲಿ ಆತಂಕ ಸೃಷ್ಟಿ ಯಾಗಿದೆ

ಹೌದು
ಇಡೀ ವಿಶ್ವವನ್ನೆ ಕಾಡಿದ್ದ ಕೋವಿಡ್ ಮೊದಲ ಹಾಗೂ ಎರಡನೇ ಹಂತದ ಅಲೆಯನ್ನು ಬೆಳಗಾವಿ ಜಿಲ್ಲೆಯಲ್ಲಿಯೂ ಸಮರ್ಥವಾಗಿ ಎದುರಿಸಲಾಗಿತ್ತು . ಕಳೆದ ಬಾರಿ ಆದ ಘಟನೆಗಳು ಮರುಕಳಿಸದಂತೆ ಜೆಎನ್.1 ಕೋವಿಡ್ ರೂಪಾಂತರಿ ತಳಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಇವತ್ತು ಬೆಳಗಾವಿ ಬಿಮ್ಸ್‌‌ನಲ್ಲಿ ರ್ಯಾಪಿಡ್ ಟೆಸ್ಟ್ ಮಾಡಿಸಿಕೊಂಡ ಸರ್ಕಾರಿ ಅಧಿಕಾರಿಗೆ ಕೋವಿಡ್ ಸೋಂಕು ದೃಢವಾಗಿದೆ ಕಳೆದೊಂದು ವಾರದಿಂದ ಕೆಮ್ಮು, ನೆಗಡಿ ಸಮಸ್ಯೆಯಿಂದ ಬಳಲುತ್ತಿದ್ದ ಅಧಿಕಾರಿಯು ಸದ್ಯ ವೈದ್ಯರ ಸಲಹೆ ಮೇರೆಗೆ ಹೋಮ್ ಐಸೋಲೇಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ .

ಒಟ್ಟಿನಲ್ಲಿ ಈ ಪ್ರಕರಣ ಪತ್ತೆ ಅದ ಮೇಲೆ ಬೆಳಗಾವಿ ಜನತೆ ಆತಂಕದಲ್ಲಿದ್ದಾರೆ ಕೋವಿಡ್ ಸಂಖ್ಯೆ ಹೆಚ್ಚಾಗದಂತೆ ಸಾರ್ವಜನಿಕರು ಮುಂಚಾಗ್ರತೆ ವಹಿಸಿ ಮಾಸ್ಕ ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯದಿಂದ ಇರಬೇಕೆಂಬುದೆ ಇನ್ ನ್ಯೂಸ್ ಆಶಯವಾಗಿದೆ

Tags: