Uncategorized

ಮಹಾತ್ಮಾ ಪುಲೆ ಆರೋಗ್ಯ ವಿಮೆ ನಮ್ಮ ರಾಜ್ಯದಲ್ಲಿ ಜಾರಿ ಮಾಡುವುದು ಕಾನೂನು ಬಾಹಿರ:ಡಿಎಚ್ಓ ಮಹೇಶ್ ಕೋಣಿ

Share

ಮಹಾರಾಷ್ಟ್ರದ ಮಹಾತ್ಮಾ ಪುಲೆ ಆರೋಗ್ಯ ವಿಮೆ ಜಾರಿ ವಿಚಾರವಾಗಿ ನಾಲ್ಕು ಸೇವಾ ಕೇಂದ್ರಗಳಿಗೂ ಡಿಎಚ್ಓ ಮಹೇಶ್ ಕೋಣಿ ನೇತೃತ್ವದಲ್ಲಿ ಸೇವಾ ಕೇಂದ್ರದ ಮೇಲೆ ದಾಳಿ ನಡೆಸಿ ಬೀಗ ಜಡಿದಿದ್ದಾರೆ

ಕರ್ನಾಟಕದಲ್ಲಿ ಮಹಾರಾಷ್ಟ್ರದ ಮಹಾತ್ಮಾ ಪುಲೆ ಆರೋಗ್ಯ ವಿಮೆ ಜಾರಿ ವಿಚಾರವಾಗಿ ಬೆಳಗಾವಿಯಲ್ಲಿ ತೆರೆದಿದ್ದ ಐದು ಸೇವಾ ಕೇಂದ್ರಗಳಿಗೆ ನೋಟಿಸ್ ನೀಡಿದ್ದ ಡಿಎಚ್ಓ. ಗೋವಾವೇಸ್ ವೃತ್ತದಲ್ಲಿನ ಸಿದ್ದಿವಿನಾಯಕ ಸೇವಾಕೇಂದ್ರಕ್ಕೆ ಡಿಎಚ್ಓ ಮಹೇಶ್ ಕೋಣಿ ನೇತೃತ್ವದಲ್ಲಿ ಸೇವಾ ಕೇಂದ್ರದ ಮೇಲೆ ದಾಳಿ ನಡೆಸಿ ನಾಲ್ಕು ಸೇವಾ ಕೇಂದ್ರಗಳಿಗೂ ಬೀಗ ಜಡಿಡಿದ್ದಾರೆ ಶಹಾಪೂರದ ಗೋವಾವೇಸ್ ಡಾಕ ಬಂಗಲಾದಲ್ಲಿರುವ ನೋಂದಣಿ ಕೇಂದ್ರ ಬಂದಆಗಿದೆ ಬೆಳಗಾವಿಯಲ್ಲಿನ ಒಟ್ಟು ಐದು ಕೇಂದ್ರಗಳನ್ನ ಪರಿಶೀಲಿಸಿ ನಾಲ್ಕು ಕೇಂದ್ರಗಳಿಗೆ ಬೀಗ್ ಹಾಕಲಾಗಿದೆ ಕಾರ್ಯಾಚರಣೆಯಲ್ಲಿ ಪಾಲಿಕೆ ಟಿಎಚ್ಓ ಸಂಜಯ ಡುಮ್ಮಗೋಳ ಹಾಗು ಪೋಲಿಸರ ಸಮ್ಮುಖದಲ್ಲಿ ಸಿಎಸ್ ಸಿ ಕೇಂದ್ರಗಳಿಗೆ ಬೀಗ ಹಾಕಲಾಗಿದೆ

ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಡಿಎಚ್ಓ ಮಹೇಶ್ ಕೋಣಿ ಕರ್ನಾಟಕದಲ್ಲಿ ಮಹಾರಾಷ್ಟ್ರದ ಮಹಾತ್ಮಾ ಪುಲೆ ಆರೋಗ್ಯ ವಿಮೆ ಜಾರಿ ವಿಚಾರವಾಗಿ ನಾವು ನಾಲ್ಕು ಸೇವಾ ಕೇಂದ್ರಗಳಿಗೆ ನೋಟಿಸ್ ಕಳಿಸಿ ಬೀಗ ಹಾಕಿದ್ದೇವೆ ನಮಗೆ ಮುಂಚೆ ಐದು ಸೇವಾ ಕೇಂದ್ರಗಳಲ್ಲಿ ಮಹಾತ್ಮಾ ಪುಲೆ ಆರೋಗ್ಯ ವಿಮೆ ನೋಂದಣಿ ಆಗುತ್ತಿವೆ ಎಂದು ದೂರು ಬಂದಿದ್ದವು ಅದರ ಆಧಾರದ ಮೇಲೆ ನಾವು ದಾಳಿ ಮಾಡಿದ್ದೇವೆ ಪೊಲೀಸ ಇಲಾಖೆ ಕಂದಾಯ ಇಲಾಖೆ ಹಾಗು ಸೇವಾ ಕೇಂದ್ರದ ಇಲಾಖೆಯವರು ನಮ್ಮ ಜೊತೆಗೆ ಸಾಥ್ ನೀಡಿದ್ದಾರೆ ೨೪ ಗಂಟೆ ಒಳಗಾಗಿ ನೋಂದಣಿಯಾದ ಫಲಾನುಭವಿಗಳ ಲಿಸ್ಟ್ ಕೊಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದೇವೆ ನಮ್ಮ ಜಿಲ್ಲೆಯ ೨೦೦ ಕೇಂದ್ರಗಳಲ್ಲಿ ನೋಂದಣಿ ಯಾಗುತ್ತಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಮಹಾರಾಷ್ಟ್ರದ ಆರೋಗ್ಯ ವಿಮೆ ನಮ್ಮ ರಾಜ್ಯದ ಜನರಿಗೆ ನೀಡುವುದು ಕಾನೂನು ಬಾಹಿರ ಇವರ ಮೇಲೆ ಕಠಿಣ ಕ್ರಮ ಕೈಗೂಳ್ಳುತ್ತೇವೆ ನಮ್ಮ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ನಿರ್ದೇಶನದಂತೆ ನಾವು ಕಾರ್ಯ ನಿರ್ವಹಿಸಿ ಕ್ರಮಕ್ಕೆ ಮುಂದಾಗುತ್ತೇವೆ ಎಂದರು .

 

Tags: