ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್, ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಹಾಗೂ ವಿಹಾನ್ ಫೌಂಡೇಶನ್ ವತಿಯಿಂದ ರೋಲರ್ ಸ್ಕೇಟಿಂಗ್ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು
ಬೆಳಗಾವಿಯ ಗಣೇಶಪುರದಲ್ಲಿರುವ ಗುಡ್ ಶೆಫರ್ಡ್ಸ್ ಆಂಗ್ಲ ಪ್ರೌಢಶಾಲೆಯ ಸ್ಕೇಟಿಂಗ್ ಮೈದಾನದಲ್ಲಿ ರೋಲರ್ ಸ್ಕೇಟಿಂಗ್ ಸ್ಪರ್ಧೆ ಹಾಗೂ ಗಣ್ಯರ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಸರಳಾ ಹೆರೇಕರ್ ವಿಹಾನ್ ಫೌಂಡೇಶನ್ ದವರು ಮೊದಲಿಂದಲೂ ಸಾಮಜಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ ಸೋಮನಾಥ ಕಣಗಲಿ ಅವರ ಮಕ್ಕಳು ರಾಜ್ಯ ಮಟ್ಟದಿಂದ ಆಯ್ಕೆಯಾಗಿ ಹೊರ ದೇಶಕ್ಕೆ ಕರಾಟೆ ಆಡಲು ಹೋಗುತ್ತಿದ್ದಾರೆ ಅವರ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್, ಸಾಮಾಜಿಕ ಕಾರ್ಯಕರ್ತೆ ಸರಳಾ ಹೆರೇಕರ್, ವಿಹಾನ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಆಯೋಜಕ ಸೋಮಶೇಖರ್ ಕಂಗಳಿ, ತರಬೇತುದಾರ ಸೂರ್ಯಕಾಂತ ಹಿಂಡಲಗೇಕರ ಉಪಸ್ಥಿತರಿದ್ದರು.
ಭಾರತವನ್ನು ಪ್ರತಿನಿಧಿಸಲು ಮುಂದಿನ ತಿಂಗಳು ಚೀನಾಕ್ಕೆ ತೆರಳಲಿರುವ.ಅಂತರರಾಷ್ಟ್ರೀಯ ಸ್ಕೇಟಿಂಗ್ ಫುಟ್‌ಬಾಲ್‌ಗೆ ಆಯ್ಕೆಯಾದ ಮಂಜುನಾಥ್ ಮತ್ತು ಯಶ್ ಪಾಲ್ ಅವರನ್ನು ಎಸ್‌ಪಿ ಗುಳೇಡ್ ಸನ್ಮಾನಿಸಿದರು ಅದೇ ರೀತಿ ಸರ್ಪಮಿತ್ರ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್ ದಡ್ಡಿಕರ್ ಮತ್ತಿತರರನ್ನು ಸನ್ಮಾನಿಸಲಾಯಿತು.