ಬೆಳಗಾವಿಯಲ್ಲಿ ಅಂತರ ಶಾಲಾ – ಕಾಲೇಜುಗಳ ಹಾಕಿ ಕ್ರೀಡಾಕೂಟಕ್ಕೆ ಸೋನಾಲಿ ಸರ್ನೋಬತ್ ಚಾಲನೆ ನೀಡಿದರು
ಬೆಳಗಾವಿಯಲ್ಲಿ ಹಾಕಿ ಕರ್ನಾಟಕ ಮತ್ತು ಹಾಕಿ ಇಂಡಿಯಾ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಆಯೋಜಿಸಲಾಗಿದ ಅಂತರ ಶಾಲೆ ಮತ್ತು ಅಂತರ ಕಾಲೇಜು ಬಾಲಕ ಮತ್ತು ಬಾಲಕಿಯರ ಹಾಕಿ ಪಂದ್ಯಾವಳಿಗೆ ಡಾ. ಸೋನಾಲಿ ಸರ್ನೋಬತ್ ರವರು ಚಾಲನೆ ನೀಡಿದ್ದರು
ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಡಾ. ಸೋನಾಲಿ ಸರ್ನೋಬತ್ ಕ್ರೀಡೆ ಮತ್ತು ಶಿಕ್ಷಣದ ಮಹತ್ವವನ್ನು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಅವರು ಆರೋಗ್ಯ ಮತ್ತು ನೈರ್ಮಲ್ಯ ಮತ್ತು ಕ್ರೀಡಾಪಟುಗಳು ಫಿಟ್ ನೆಸ್‌ಗಾಗಿ ತೆಗೆದುಕೊಳ್ಳಬೇಕಾದ ಆಹಾರದ ಪ್ರಕಾರದ ಬಗ್ಗೆ ಮಾತನಾಡಿದರು. ಮುಂದಿನ ದಿನಗಳಲ್ಲಿ ಅವರು ಆರೋಗ್ಯದ ಬಗ್ಗೆ ಸಂಕ್ಷಿಪ್ತವಾಗಿ ತಿಳುವಳಿಕೆಯನ್ನು ನೀಡಲು ಮತ್ತು ಸಂಪೂರ್ಣ ಡಯಟ್ ಪ್ಲಾನ್ ಸಲಹೆಗಳನ್ನು ನೀಡಿದ್ದರು
ಶ್ರೀ ಘೂಳಪ್ಪ ಬಿ ಹೊಸಮನಿ ಹಾಕಿ ಬೆಳಗಾವಿ ಅಧ್ಯಕ್ಷರು ವಿನೋದ ಪುಂಡಲೀಕ ಪಾಟೀಲ, ಶ್ರೀ ಸುಧಾಕರ ಚಲ್ಕೆ – ಉತ್ತಮ ಶಿಂಧೆ -, ಶ್ರೀ ನಾಮದೇವ್ ಸಾವಂತ್ , ರಾಜೇಂದ್ರ ಪಾಟೀಲ್ .ಮುಖ್ಯ ಅತಿಥಿಗಳು ಡಾ ಸೋನಾಲಿ ಸರ್ನೋಬತ್ – ಶಂಕರ ಗೌಡ ಪಾಟೀಲ್ , ಶ್ರೀ ಆನಂದ್ ಚೌಹಾಣ್ – ಕಾರ್ಪೋರೇಟರ್ ವಾರ್ಡ್ 44 , ಶ್ರೀ ಸಂತೋಷ್ ದಾರೇಕರ್ – ಫೇಸ್ಬುಕ್ ಫ್ರೆಂಡ್ಸ್, ನಿಲ್ಕಂತ್ ಮಾಸ್ತಮರ್ಡಿ. ಉಪಸ್ಥಿತರಿದ್ದರು