Uncategorized

ಪಂಚಮಸಾಲಿಗಳು ಬಾಯಿಸತ್ತವರು :ಸಚಿವೆ ಲಕ್ಷ್ಮಿ ಹೆಬ್ಬಾಳಕರ

Share

ಪಂಚಮಸಾಲಿ ಸಮಾಜದವರು ಸೇರಿ ಬಹಳಷ್ಟು ಭಾವನೆಗಳನ್ನು ವ್ಯಕ್ತಪಡಿಸಬೇಕಿತ್ತು ಪಂಚಮಸಾಲಿಗಳು ರಾಜ್ಯದಲ್ಲಿ ಬಹುಸಂಖ್ಯಾತರಿದ್ದೇವೆ ಅದೇ ರೀತಿ ಪಂಚಮಸಾಲಿಗಳು ಬಾಯಿಸತ್ತವರು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು

ಬೆಳಗಾವಿ ನಗರದಳ್ಳಿ ಹಮ್ಮಿಕೊಂಡ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಉದ್ದೇಶ ಮೀಸಲಾತಿ ಅಷ್ಟೇ ಕೂಡಲ ಸಂಗಮದಿಂದ ನಮ್ಮ ಪಾದಯಾತ್ರೆ ಆರಂಭವಾಯಿತು ಅಲ್ಲಿಂದ ನಾವೆಲ್ಲ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದೇವೆ ನಮ್ಮ ಹೋರಾಟಕ್ಕೆ ಜಯ ಸ್ವಲ್ಪ ತಡವಾಗಿ ಸಿಗಬಹುದು ಆದರೆ ನಾವು ಒಗ್ಗಟನ್ನ ಬಿಡಬಾರದು ಕಾರಣ ನಮ್ಮ ಮುಂದಿನ ಭವಿಷ್ಯಕ್ಕಾಗಿ ಒಗ್ಗಟ್ಟಿನಿಂದ ಇರಬೇಕು ಎಂದರು .

ಬರುವ ೫ ತಾರೀಕಿಗೆ ಅಧಿವೇಶನವಿದೆ ನಮ್ಮ ಹೋರಾಟವನ್ನು ನಿರಂತರವಾಗಿ ನಡೆಸೋಣಾ ನಾವು ಕೇವಲ ನಮ್ಮ ಸಮಾಜದ ೧೧ ಜನ ಶಾಸಕರನ್ನ ಮಾತ್ರ ಗೆಲ್ಲಿಸಿಲ್ಲ ರಾಜ್ಯದ ಎಲ್ಲಾ ಶಾಸಕರನ್ನ ನಾವು ಗೆಲ್ಲಿಸಿದ್ದೇವೆ ಅವರು ಎಲ್ಲರು ನಮ್ಮ ಹೋರಾಟಕ್ಕೆ ಕೈ ಜೋಡಿಸಬೇಕು ಬಸವಣ್ಣನವರ ಸಮಾಜ ನಮ್ಮದು ನಮಗೆ ಎಲ್ಲಾ ಸಮಾಜದವರ ಬೆಂಬಲ ಬೇಕು ಪಂಚಮಸಾಲಿ ಸಮಾಜದವರು ಎಲ್ಲರಿಗೆ ೪ ತುತ್ತು ತಿನ್ನಿಸಿ ೫ ತುತ್ತನ್ನು ತಿನ್ನವವರು ನಾವು ಯಾರ ತುತ್ತನ್ನ ಕಸಿದುಕೊಳ್ಳಲು ಬಂದಿಲ್ಲ . ಮಾನ್ಯ ಮುಖ್ಯಮಂತ್ರಿಗಳಿಗೆ ,ಉಪಮುಖ್ಯಮಂತ್ರಿಗಳಿಗೆ ನಮ್ಮ ಹೋರಾಟದ ಬಗ್ಗೆ ಮಾಹಿತಿ ಇದೆ ಆದಷ್ಟು ಬೇಗಾ ನಮ್ಮ ಸಮಾಜಕ್ಕೆ ನ್ಯಾಯ ಸಿಗುವ ಭರವಸೆ ನಮಗೆ ಇದೆ ಸರ್ಕಾರ ಒಳ್ಳೆ ಸಮಯದಲ್ಲಿ ನಮ್ಮ ಹೋರಾಟಕ್ಕೆ ಸ್ಪಂದನೆ ನೀಡುತ್ತಾರೆ ಎಂದು ನಂಬಿದ್ದೇವೆ ಸರ್ಕಾರದ ಜೊತೆ ನಾನು ಮಾತುನಾಡುತ್ತೇನೆ ಯಾರು ಕೂಡಾ ಹೋರಾಟದಿಂದ ಹಿಂದೆ ಸರೆಯಬಾರದು ಎಂದು ಕಿವಿಮಾತು ಹೇಳಿದರು .

ಸಭೆಯಲ್ಲಿ ಕೂಡಲ ಸಂಗಮ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು , ಮಾಜಿ ಸಚಿವ ಎ ಬಿ ಪಾಟೀಲ ,ಮಾಜಿ ಸಚಿವ ಶಶಿಕಾಂತ ಪಾಟೀಲ ,ಆರ್ ಕೆ ಪಾಟೀಲ ,ಮಹಾಂತೇಶ ವಕ್ಕುಂದ ,ಶಿವಗೌಡಾ ಪಾಟೀಲ ಸೇರಿದಂತೆ ಪಂಚಮಸಾಲಿ ಮುಖಂಡರು ಭಾಗಿಯಾಗಿದ್ದರು

Tags: