Uncategorized

ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಿ ಬಸವಣ್ಣವರ ಘೋಷಣೆ: ಬೆಳಗಾವಿಯಲ್ಲಿ ಸಂಭ್ರಮಾಚರಣೆ

Share

ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಬಸವಣ್ಣ ಅವರ ಹೆಸರನ್ನು ಘೋಷಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನು ಕೈಗೊಂಡಿದೆ ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಸೇರಿದಂತೆ ಲಿಂಗಾಯತ ಸಂಘಟನೆ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು

ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಣರ್ಯಗಳನ್ನು ಕೈಗೊಳ್ಳಲಾಗಿದೆ. ವಿಶ್ವಗುರು ಬಸವಣ್ಣ ಕರ್ನಾಟಕ ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ. ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಜಾಪ್ರಭುತ್ವ ಪರಿಕಲ್ಪನೆ ತಂದು ಕೊಟ್ಟಿದ್ದು ಬಸವೇಶ್ವರರು, ಎಲ್ಲ ಮಠಾಧಿಶರ ಬೇಡಿಕೆ ಕೂಡ ಇತ್ತು. ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆ ಅನುಮೋದನೆ ಸಿಕ್ಕಿದೆ ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಸೇರಿದಂತೆ ಲಿಂಗಾಯತ ಸಂಘಟನೆ ಕಾರ್ಯಕರ್ತರು ಬೆಳಗಾವಿಯ ವಿಶ್ವಗುರು ಮಂಟಪದ ಪ್ರಭುಲಿಂಗ ಸ್ವಾಮೀಜಿ ಬಸವಣ್ಣನವರ ಭಾವಚಿತ್ರೆ ಹಿಡಿದು ನಗರದ ಚನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು .

ಬಸವ ಮಂಟಪದ ಸಂಚಾಲಕ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ ವಿಶ್ವಗುರು ಬಸವಣ್ಣನನ್ನು ಕರ್ನಾಟಕ ಸಂಸ್ಕೃತಿಕ ರಾಯಭಾರಿ ಎಂದು ಘೋಷಿಸಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಪ್ರಜಾಪ್ರಭುತ್ವ ಪರಿಕಲ್ಪನೆ ತಂದು ಕೊಟ್ಟಿದ್ದು ಬಸವೇಶ್ವರರು, ಎಲ್ಲ ಮಠಾಧಿಶರ ಬೇಡಿಕೆ ಕೂಡ ಇತ್ತು. ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆ ಅದರಂತೆ ಅನುಮೋದನೆ ಸಿಕ್ಕಿದೆ ಬಸವಣ್ಣನವರು ಜನ ಬದುಕಲಿ ಜಗ ಬದುಕಲಿ ಎಂಬಂತೆ ಬದಕಿದವರು ಅಸ್ಪೃಶ್ಯತೆ ,ಮೂಢನಂಬಿಕೆ ಹೋಗಲಾಡಿಸಿದ್ದಾರೆ ಅಂತಹ ಒಬ್ಬ ಮಹಾ ನಾಯಕನಿಗೆ ಸರ್ಕಾರ ಮತ್ತಷ್ಟು ಗೌರವ ನೀಡಿದ್ದು ಸ್ವಾಗತಾರ್ಹ ಎಂದರು .

ಶಂಕರ ಗುಡಸ ಮಾತನಾಡಿ ವಿಶ್ವಗುರು ಬಸವಣ್ಣನನ್ನು ಕರ್ನಾಟಕ ಸಂಸ್ಕೃತಿಕ ರಾಯಭಾರಿ ಎಂದು ಘೋಷಿಸಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಬಸವಣ್ಣನವರು ಸಾಮಾಜಿಕ ವಾಗಿ ಹೋರಾಡಿ ಸಮಾನತೆ ಬರಲು ಶ್ರಮಿಸಿದ್ದಾರೆ ನಮ್ಮೆಲ್ಲ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಇದು ಎಲ್ಲಾ ಲಿಂಗಾಯತರಿಗೆ ಅತೀವ ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಅಶೋಕ ಬೆಂಡಿಗೇರಿ, ಆನಂದ ಗುಡಸ, ಕೆ.ಶರಣಪ್ರಸಾದ, ದೀಪಕ ಗುಡಗನಟ್ಟಿ, ಶಿವಾನಂದ ತಂಬಾಕಿ, ಮಹಾಂತೇಶ ಗುಡಸ ಸೇರಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಸೇರಿದಂತೆ ಲಿಂಗಾಯತ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು

Tags: