
ಎಂ.ಕೆ.ಹುಬ್ಬಳ್ಳಿಯಲ್ಲಿ ಕೋಮು ಗಲಭೆ ಇಲ್ಲವೇ ಇಲ್ಲ. ಅದನ್ನು ಕೆಣಕುವ ಪ್ರಯತ್ನ ಮಾಡಬಾರದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷಗಳ ವಿಷಯವನ್ನು ಕೆಲವರು ಈಗ ಕೆಣಕುತ್ತಿದ್ದಾರೆ. ಎಂ.ಕೆ.ಹುಬ್ಬಳ್ಳಿ ಈಗ ಶಾಂತವಾಗಿದೆ. ಅದನ್ನು ಮತ್ತೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥದನ್ನು ಮಾಡಬಾರದು. ಕೆಲವರು ವಿನಾಕಾರಣ ಎಂ.ಕೆ.ಹುಬ್ಬಳ್ಳಿ ಚಲೋ ಕರೆ ನೀಡುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದರು.

