Uncategorized

ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಶತಾಯ್ ಗತಾಯ ಕಾಂಗ್ರೆಸ ಪಕ್ಷ ಗೆಲ್ಲಬೇಕು ಪಕ್ಷ ನನಗೆ ಟಿಕೆಟ್ ಕೊಟ್ರೆ ಸ್ವಾಗತ್ ಮಾಡ್ತೇನೆ :ಮೃಣಾಲ್ ಹೆಬ್ಬಾಳಕರ್

Share

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ೨೦೦೦ ಮತಗಳಿಂದ ಸತೀಶ ಜಾರಕಿಹೊಳಿ ಪರಾಭವ ಗೊಂಡಿದ್ದರು ಬೆಳಗಾವಿಯಲ್ಲಿ ಶತಾಯ್ ಗತಾಯ ಕಾಂಗ್ರೆಸ ಪಕ್ಷ ಗೆಲ್ಲಬೇಕು ಪಕ್ಷ ನನಗೆ ಟಿಕೆಟ್ ಕೊಟ್ರೆ ಸ್ವಾಗತ್ ಮಾಡ್ತೇನೆ ಎಂದು ಮೃಣಾಲ್ ಹೆಬ್ಬಾಳಕರ್ ಹೇಳಿದರು.

ಲೋಕಸಭೆ ಚುನಾವಣೆ ಸಮೀಪಿಸುತಿದ್ದಂತೆ ಟಿಕೆಟ್ ಗಾಗಿ ಘಟಾನುಘಟಿಗಳು ತಮ್ಮ ತಮ್ಮ ಪಕ್ಷದ ಹೈಕಮಾಂಡ್ ಅಂಗಳಕ್ಕೆ ಪ್ರದಕ್ಷಿಣೆ ಹೊಡೆಯುತ್ತಿದ್ದಾರೆ ರಾಜ್ಯದ ನಾಯಕರ ಸಹಾಯದಿಂದ ಕ್ಷೇತ್ರದ ಜನತೆಯ ಬೆಂಬಲದಿಂದ ಟಿಕೆಟಗಾಗಿ ಪೈಪೋಟಿ ಮಾಡುತ್ತಿದ್ದಾರೆ ಬೆಳಗಾವಿ ರಾಜಕಾರಣದಲ್ಲಿ ಯಾವ ಸಮಯದಲ್ಲಿ ರಾಜಕೀಯ ಬಿರುಗಾಳಿ ಎಳ್ಳುತ್ತೆ ಎಂಬುದು ಊಹಿಸಲು ಸಾಧ್ಯವಿಲ್ಲ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಮ್ಮ ಪುತ್ರನಿಗೆ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪುತ್ರ ಮೃಣಾಲ್ ಹೆಬ್ಬಾಳ್ಕರಗೆ ಟಿಕೆಟ್ ತರುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾತುಗಳು ಕೇಳಿ ಬರುತ್ತಿವೆ

ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ ಮಾಧ್ಯಮದ ಜೊತೆ ಮಾತನಾಡುತ್ತಾ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ೨೦೦೦ ಮತಗಳಿಂದ ಸಚಿವ ಸತೀಶ ಜಾರಕಿಹೊಳಿ ಪರಾಭವ ಗೊಂಡಿದ್ದರು ಬೆಳಗಾವಿಯಲ್ಲಿ ಶತಾಯ್ ಗತಾಯ ಕಾಂಗ್ರೆಸ ಪಕ್ಷ ಗೆಲ್ಲಬೇಕು ಪಕ್ಷ ನನಗೆ ಟಿಕೆಟ್ ಕೊಟ್ರೆ ಸ್ವಾಗತ್ ಮಾಡ್ತೇನೆ
ಹೈಕಮಾಂಡ್ ಹಾಗು ನಮ್ಮ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಯಾವ ರೀತಿ ನಿರ್ಧಾರ ತೆಗೆದು ಕೊಳ್ಳುತ್ತಾರೆ ಅದಕ್ಕೆ ನಾವು ಬದ್ದ ಕಾಂಗ್ರೆಸ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶ ಕೊಟ್ಟರು ಕೂಡಾ ನಮ್ಮ ಕ್ಷೇತ್ರದಿಂದ ಪ್ರಚಂಡ ಬಹುಮತ ನೀಡುವ ಗುರಿಯನ್ನ ಹೊಂದಿದ್ದೇವೆ ,ಕ್ಷೇತ್ರದ ಮುಖಂಡರು ಹಾಗು ಮಠಾದಿಶರಿಗೆ ಭೇಟಿ ಮಾಡುವ ಉದ್ದೇಶವೆಂದರೆ ಈ ಭಾರಿ ಬೆಳಗಾವಿಯಲ್ಲಿ ನಮ್ಮ ಪಕ್ಷದ ಬಾವುಟ ನೆಡಬೇಕು ಆ ನಿಟ್ಟಿನಲ್ಲಿ ನಾವು ಪ್ರವಾಸ ಮಾಡುತ್ತಿದ್ದೇವೆ ಕಳೆದ ೫ ಬಾರಿ ಚುನಾವಣೆ ನಡೆದಾಗ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ೨೦೦೦ ಮತಗಳಿಂದ ಸತೀಶ ಜಾರಕಿಹೊಳಿ ಪರಾಭವ ಗೊಂಡಿದ್ದರು ನಾನು ಇಷ್ಟು ವರ್ಷ ಪಕ್ಷದಲ್ಲಿ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಅವರ ಬಾಯಲ್ಲಿ ನನಗೆ ಟಿಕೆಟ್ ನೀಡಬೇಕೆಂಬ ಮಾತು ಬರುತ್ತಿದೆ ಇದು ನನಗೆ ಅತೀವ ಸಂತಸ ತಂದಿದೆ ಎಂದರು .

ಒಟ್ಟಿನಲ್ಲಿ ಕಾಂಗ್ರೆಸ ಪಕ್ಷದ ಅಭ್ಯರ್ಥಿಯಾಗಿ ನನಗೆ ಅವಕಾಶ ಕೊಟ್ಟರೆ ನಾನು ಸಂತೋಷದಿಂದ ಚುನಾವಣೆಯಲ್ಲಿ ಸ್ಪರ್ದಿಸಿ ವಿಜಯಶಾಲಿ ಯಾಗುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪುತ್ರ ಮೃಣಾಲ್ ಹೆಬ್ಬಾಳ್ಕರ ಹೇಳುವ ಮೂಲಕ ತಮ್ಮ ಇಚ್ಛೇ ವ್ಯಕ್ತಪಡಿಸಿದ್ದಾರೆ

Tags: