Uncategorized

ಮರಾಠಾ ಮಂಡಲ ವಿದ್ಯಾರ್ಥಿಗಳಿಗೆ ರಾಯಗಡ, ಪ್ರತಾಪಗಡಕ್ಕೆ ಶೈಕ್ಷಣಿಕ ಪ್ರವಾಸ

Share

ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಮತ್ತು ಯಾವ ಕೋಟೆಯಲ್ಲಿ ಯಾವ ಶೌರ್ಯವನ್ನು ಮಾಡಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ತಿಳಿಸಬೇಕು ಅವರು ಮಾಡಿರುವ ಸಾಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಮರಾಠಾ ಮಂಡಲ ಸೆಂಟ್ರಲ್ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮಹಾರಾಜರ ಇತಿಹಾಸ ಅರಿಯಲು ಸಜ್ಜನಗಡ, ರಾಯಗಡ, ಪ್ರತಾಪಗಡಕ್ಕೆ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗಿತ್ತು

ಈ ಸಂದರ್ಭದಲ್ಲಿ ಭಗವೇ ವಾದಳ ಯುವಕ ಮಂಡಲದ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಕೋಟೆಗಳ ಸಂಪೂರ್ಣ ಇತಿಹಾಸ ವಿವರಿಸಿದರು.
ಹಾಗೆಯೇ ಯಾವ ಶತಮಾನದಲ್ಲಿ ಯಾವ ಕೋಟೆಯನ್ನು ಕಟ್ಟಲಾಗಿದೆ. ಕೋಟೆಯ ಮೇಲೆ ಕೆಲವೆಡೆ ಇರುವ ದೇವಾಲಯಗಳು, ಕೊಳಗಳು, ಧಾನ್ಯಗಳು, ಆಯುಧಗಳ ಸಂಗ್ರಹದ ಮಾಹಿತಿಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವರಿಸಿದರು. ವಿದ್ಯಾರ್ಥಿಗಳು ಸಹ ಮಹಾರಾಜರ ಇತಿಹಾಸವನ್ನು ಅರಿತು ಸಜ್ಜನಗಡ, ರಾಯಗಡ, ಪ್ರತಾಪಗಡದ ಇತಿಹಾಸವನ್ನು ತಿಳಿದುಕೊಂಡರು ಈ ಶೈಕ್ಷಣಿಕ ಪ್ರವಾಸದಲ್ಲಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Tags: