ಕಾಯಿಪಲ್ಲೆ ಮಾರಾಟಗಾರಿಂದ ಹಾಗು ತಳ್ಳುವ ಗಾಡಿ ವ್ಯಾಪರಿಸ್ಥರಿಂದ ಬೇಕಾ ಬಿಟ್ಟಿ ಹಣ ವಸೂಲುಮಾಡುತ್ತಿರುವ ಗ್ರೌಂಡ ರೆಂಟ್ ಕಲೆಕ್ಷನ್ ಕಾಂಟ್ರಾಕ್ಟರ್ಸ್ ವಿರುದ್ಧ ಕಾರ್ಪೊರೇಟರ್ ಶಂಕರ ಪಾಟೀಲ ಅವರು ಆರೋಪ ಮಾಡಿದ್ದಾರೆ
ದಿನನಿತ್ಯದ ಬಡತನದ ಅತಂತ್ರ ಸ್ಥಿತಿಯಲ್ಲಿ ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಿರುವ ಬಡ ಬೀದಿ ಬದಿ ವ್ಯಾಪಾರಿಗಳಿಂದ ಗ್ರೌಂಡ ರೆಂಟ್ ಕಲೆಕ್ಷನ್ ಕಾಂಟ್ರಾಕ್ಟರ್ಸ್ ಹಣ ಸುಲಿಗೆ ಮಾಡುತ್ತಿರುವ ಆರೋಪ ಕೇಳಿಬಂದಿದೆ . ಪ್ಲೊ
ಹೌದು ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುತ್ತದೆ ಸ್ವತಂತ್ರ ಹೋರಾಟಗಾರರು ಹುಟ್ಟಿರುವ ನಾಡಿನಲ್ಲಿ ಸಾಕಷ್ಟು ಅಭಿವೃದ್ಧಿಗಳಾಗಿದ್ದರು ಕೂಡಾ ಅಲ್ಲಲ್ಲಿ ಬಡ ಜನಾ ಕೂಲಿ ನಾಲಿ ಮಾಡಿ ಒಂದೊತ್ತು ಊಟಕ್ಕೂ ಪರದಾಡುತ್ತಿದ್ದಾರೆ .
ಬೆಳಗಾವಿಯ ಕಾಕತಿವೇಸ ,ಗಣಪತಿಗಲ್ಲಿ ,ಸಮಾದೇವಿಗಲ್ಲಿಯ ಬೀದಿ ಬದಿ ವ್ಯಾಪರಸ್ಥರು ತಳ್ಳುವ ಗಾಡಿ ವ್ಯಾಪಾರಸ್ಥರು ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಮಹಾನಗರ ಪಾಲಿಕೆ ಆವರಣದಲ್ಲಿ ಬೀದಿ ಬದಿ ವ್ಯಾಪರಸ್ಥರು ಗ್ರೌಂಡ ರೆಂಟ್ ಕಲೆಕ್ಷನ್ ಕಾಂಟ್ರಾಕ್ಟರ್ಸ್ ಮೇಲೆ ಆರೋಪ ಮಾಡಿದ್ದಾರೆ ಬೀದಿ ಬದಿ ವ್ಯಾಪರಸ್ಥರಿಗೆ ಕಾರ್ಪೊರೇಟರ್ ಶಂಕರ ಪಾಟೀಲ ಸಾಥ್ ನೀಡಿದ್ದಾರೆ .
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಪೊರೇಟರ್ ಶಂಕರ ಪಾಟೀಲ ತೆರಿಗೆ ವಸೂಲಾತಿ ದಾಖಲೆ ಪ್ರಕಾರ ಕಾಯಿಪಲ್ಲೆ ಮಾರಾಟಗಾರರಿಂದ ೧೦ ರೂಪಾಯಿ ,ತಳ್ಳುವ ಗಾಡಿ ವ್ಯಾಪಾರಿಗಳಿಂದ ೫೦ ರೂಪಾಯಿ ತೆರಿಗೆ ಪಡೆಯಬೇಕು ಆದರೆ ಗ್ರೌಂಡ ರೆಂಟ್ ಕಲೆಕ್ಷನ್ ಕಾಂಟ್ರಾಕ್ಟರ್ಸ್ ಅವರಿಗೆ ಮನಬಂದಂತೆ ೫೦ ರೂ ,೧೦೦ ರೂ ,೧೫೦ ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ ಬಡ ಜನಾ ಗಳಿಸುವ ಹಣದಲ್ಲಿ ಅರ್ಧ ಇವರಿಗೆ ದುಡ್ಡನ್ನು ನೀಡುವ ಸ್ಥಿತಿ ನಿರ್ಮಾಣವಾಗಿದೆ ಕೂಡಲೇ ಬಡ ವ್ಯಾಪಾರಿಗಳಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದರು .
ಕಾಯಿಪಲ್ಲೆ ವ್ಯಾಪಾರಿ ಮಾತನಾಡುತ್ತಾ ನಾವು ಮೊದಲಿಂದಲೂ ಸರಿಯಾದ ಸಮಯಕ್ಕೆ ಕಲೆಕ್ಷನ್ ಕಾಂಟ್ರಾಕ್ಟರ್ಸಗಳಿಗೆ ಹಣವನ್ನು ನೀಡುತ್ತೇವೆ ಆದರೆ ಈಗ ಹೊಸದಾಗಿ ಬಂದ ಗ್ರೌಂಡ ರೆಂಟ್ ಕಲೆಕ್ಷನ್ ಕಾಂಟ್ರಾಕ್ಟರ್ಸ್ ಬೇಕಾಬಿಟ್ಟಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಒಬ್ಬರ ಹತ್ತಿರ ೧೦ ಇನ್ನೊಬ್ಬರ ಹತ್ತಿರ ೫೦ ರು ಪಡೆದುಕೊಳ್ಳುತ್ತಿದ್ದಾರೆ ಮತ್ತು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆ ಆವರಣದಲ್ಲಿ ಕಾಯಿಪಲ್ಲೆ ಮಾರಾಟಗಾರು ಹಾಗು ತಳ್ಳುವ ಗಾಡಿ ವ್ಯಾಪರಿಸ್ಥರು ಉಪಸ್ಥಿತರಿದ್ದರು .