Uncategorized

ವೀರಸೌಧ ಭವನದಲ್ಲಿ ಗಾಂಧಿ ಜಯಂತಿ ಆಯೋಜನೆ

Share

ಬೆಳಗಾವಿಯ ಕಾಂಗ್ರೇಸ ರಸ್ತೆಯಲ್ಲಿರುವ ವೀರಸೌಧದಲ್ಲಿ ಮಹಾತ್ಮಾ ಗಾಂಧೀಜಿ ಅವರ ಜಯಂತಿ ಆಯೋಜನೆಮಾಡಲಾಗಿತ್ತು ಕಾರ್ಯಕ್ರಮವನ್ನು ಎಂ ಎಲ್ ಸಿ ನಾಗರಾಜ ಜಾಧವ ಅವರು ಉದ್ಘಾಟಿಸಿದರು.

ಜಿಲ್ಲಾಡಳಿತ, ಜಿಲ್ಲಾ‌ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಟಿಳಕವಾಡಿಯ ವೀರಸೌಧದಲ್ಲಿ ನಡೆದ ಮಹಾತ್ಮ ಗಾಂಧೀಜಿ‌ ಜಯಂತಿ ಆಯೋಜನೆ ಮಾಡಲಾಗಿತ್ತು
ಮಹಾತ್ಮಾ ಗಾಂಧೀಜಿ ಅವರು ಅಹಿಂಸೆಯಿಂದ ನಮ್ಮ ದೇಶಕ್ಕೆ ಸ್ವತಂತ್ರ ತಂದು ಕೊಟ್ಟವರು ಅವರ ಸರಳತೆಯ ಜೀವನ ನಮಗೆಲ್ಲಾ ಆದರ್ಶ ಎಂದು ವೀರಸೌಧದಲ್ಲಿ ಮಹಾತ್ಮಾ ಗಾಂಧೀಜಿ ಅವರ ಜಯಂತಿಯಲ್ಲಿ ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ನಾವೆಲ್ಲ ಗಾಂಧೀಜಿ ಅವರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಕೊಡಿ ಎಂದವರು ಅವರು ಅನೇಕ ರೀತಿಯ ಸತ್ಯಾಗ್ರಹಕ್ಕೆ ಕರೆ ನೀಡಿದ್ದರು ಅಹಿಂಸೆ ಪರಮೋದ್ಧರ್ಮ ಎಂದು ಹೇಳಿದ್ದು ಮಹಾತ್ಮ ಗಾಂಧಿ ಅವರ ಚಿಂತನೆಯಿಂದ ಅಧರ್ಮ ವಿರುದ್ಧ ಗಾಂಧೀಜಿ ಮಾತನಾಡುತ್ತಿದ್ದರು ಮನುಷ್ಯ ಕುಲಕ್ಕೆ ಶಾಂತಿ, ಸಹಬಾಳ್ವೆ ತೋರಿಸಿಕೊಟ್ಟಿದು ಮಹಾತ್ಮ ಗಾಂಧೀಜಿ. ಅವರ ಅಹಿಂಸಾ ತತ್ವ, ವಿಚಾರ, ಸರಳತೆ ನಡೆ ಇಡೀ ಪ್ರಪಂಚ ಮೆಚ್ಚುವಂತದ್ದು. ಗಾಂಧೀಜಿಯವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ನಾವೆಲ್ಲರೂ ತಿಳಿದುಕೊಳ್ಳಬೇಕು. ಗಾಂಧೀ ತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಅವರ ಆಶಯದಂತೆ ರಾಮರಾಜ್ಯ ಕಟ್ಟಲು ಸಾಧ್ಯ ಅಂತಹ ಮಹಾನ ನಾಯಕನ ಜನ್ಮ ದಿನದ ನಿಮಿತ್ಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಖುಷಿಯ ವಿಚಾರ ಎಂದರು.
.
ಭಾರತೀಯ ಸೇವಾ ದಳ ಹಾಗೂ ಶಾಲಾ ಮಕ್ಕಳಿಂದ ಗಾಂಧೀಜಿಯವರ ಭಜನಾ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸಿ, ಗೌರವಿಸಲಾಯಿತು ಮತ್ತು ನಾಡಗೀತೆ ವಿನಾಯಕ ಮೊರೆ ಹಾಗೂ ತಂಡದಿಂದ ಪ್ರಸ್ತುತ ಪಡಿಸಲಾಯಿತು.

ಉಪ ಮಹಾಪೌರರಾದ ರೇಷ್ಮಾ ಪಾಟೀಲ, ಡಿಸಿಪಿ ರೋಹನ್, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಅಧೀಕ್ಷಕ ಎಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ ಹಾಗೂ ಮಹಾನಗರ ಪಾಲಿಕೆಯ ಸದಸ್ಯರು, ಆಹಾರ ಇಲಾಖೆ ಜಂಟಿ ನಿರ್ದೇಶಕರ ಶ್ರೀಶೈಲ ಕಂಕಣವಾಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಲಕ್ಷ್ಮಣ ಬಬಲಿ, ಬಿಮ್ಸ್ ಆಡಳಿತಾಧಿಕಾರಿ ಸಯ್ಯದಾ ಬಳ್ಳಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಹಾಗೂ ಡಿಎಸ್.ಎಸ್ ಮುಖಂಡರಾದ ಮಲ್ಲೇಶ ಚೌಗಲಾ ಮತ್ತು ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸ್ವಾಗತ ಕೋರಿದರು, ಸರ್ವಮಂಗಳಾ ಅರಳಿಮಟ್ಟಿ ಅವರು ನಿರೂಪಿಸಿ, ವಂದಿಸಿದರು.

Tags: