Uncategorized

24ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ

Share

ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರ, ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಅವರ 24ನೇ ಹುಟ್ಟುಹಬ್ಬವನ್ನು ಇಂದು ಕಾಕತಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಮಠಗಳ ಮಠಾಧೀಶರು, ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ರಾಹುಲ್ ಜಾರಕಿಹೊಳಿ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರ 24ನೇ ಹುಟ್ಟುಹಬ್ಬವನ್ನು ಇಂದು ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಮಠಗಳ ಮಠಾಧೀಶರು, ಸ್ವಾಮೀಜಿ,
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ರಾಹುಲ್ ಜಾರಕಿಹೊಳಿ ಅವರ ಭವಿಷ್ಯಕ್ಕೆ ಶುಭ ಹಾರೈಸಿದರು. ಸಾವಿರಾರು ಕಾರ್ಯಕರ್ತರು ರಾಹುಲ್ ಜಾರಕಿಹೊಳಿ ಅವರಿಗೆ ಶಾಲು, ಹೂಮಾಲೆ, ಹೂಗುಚ್ಛ, ಉಡುಗೊರೆ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ವೇಳೆ ಯುವಕರು ರಾಹುಲ್ ಜೊತೆ ಸೆಲ್ಫಿ ತೆಗೆದುಕೊಂಡರು

ಕಡೋಲಿ ದುರದುಂಡೇಶ್ವರ ಮಠದ ಗುರುಬಸಲಿಂಗ ಸ್ವಾಮೀಜಿ ರಾಹುಲ್‌ಗೆ ಶುಭ ಹಾರೈಸಿ ಮಾತನಾಡಿ, ಹುಟ್ಟಿದ ನಂತರ ಪ್ರತಿಯೊಬ್ಬರು ತಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಲು ಸಮಾಜಕ್ಕೆ ಏನಾದರೂ ಮಾಡಬೇಕು. ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಬುದ್ಧ, ಬಸವಣ್ಣ ಮುಂತಾದ ಮಹಾಪುರುಷರು ಈ ಕೆಲಸ ಮಾಡಿದರು. ಆದ್ದರಿಂದ ಅವರು ಮರಣದ ನಂತರವೂ ಸಾಧಕರಾದರು ಅವರ ಕಾರ್ಯದ ಸಂಪ್ರದಾಯವನ್ನು ಸಚಿವ ಸತೀಶ ಜಾರಕಿಹೊಳಿ ಮತ್ತು ಅವರ ಕುಟುಂಬದವರು ಮುಂದುವರಿಸಿದ್ದಾರೆ. ರಾಹುಲ್ ಜಾರಕಿಹೊಳಿ ಕೂಡ ಅದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಸಮಾಜಮುಖಿ ಕೆಲಸವನ್ನು ಮುಂದುವರೆಸಿದ್ದಾರೆ. ಅವರ ಸಾಮಾಜಿಕ ಮತ್ತು ರಾಜಕೀಯ ಪ್ರಗತಿಗೆ ನಾನು ಶುಭ ಹಾರೈಸುತ್ತೇನೆ ಎಂದು ಹೇಳಿದರು. ಬೈಟ್.

ರಾಹುಲ್ ಜಾರಕಿಹೊಳಿ ಅವರನ್ನು ಯಮಕನಮರಡಿ ರಾಚೋಟಿ ಮಠದ ರಾಚಯ್ಯ ಸ್ವಾಮೀಜಿ ಹಾಡಿ ಹೋಗಿಳಿ, ಆಶೀರ್ವಚನ ನೀಡಿದರು.
ಭೂತರಾಮನಹಟ್ಟಿಯ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ತಂದೆ ಸತೀಶ್ ಜಾರಕಿಹೊಳಿ ಕುಟುಂಬದ ಜನಸೇವೆಯ ಪರಂಪರೆಯನ್ನು ರಾಹುಲ್ ಅತ್ಯಂತ ಕಿರಿಯ ವಯಸ್ಸಿನಲ್ಲೇ ಮುಂದುವರಿಸಿಕೊಂಡು ಸಮಾಜ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದವರು. ಅವರ ಜನ್ಮದಿನವು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದಂದು ಬಂದಿರುವುದು ವಿಶೇಷ ಕಾಕತಾಳೀಯವಾಗಿದೆ. ಅವರಂತೆ ರಾಹುಲ್ ಕೂಡ ಸಮಾಜದ ಹಿತಕ್ಕಾಗಿ ಉತ್ತಮ ಚಿಂತನೆಯೊಂದಿಗೆ ಸಾಗಬೇಕು. ಅವರ ಮುಂದಿನ ಪ್ರಯತ್ನಗಳು ಯಶಸ್ವಿಯಾಗಲಿ ಎಂದರು .

ರಾಹುಲ್ ಜಾರಕಿಹೊಳಿ ಮಾತನಾಡುತ್ತಾ ನನ್ನ ತಂದೆ ಸಚಿವ ಸತೀಶ ಜಾರಕಿಹೊಳಿ ಅವರ ಸಲಹೆ ಮತ್ತು ಮಾರ್ಗದರ್ಶನದಂತೆ ಸಾಮಾಜಿಕ ಮತ್ತು ರಾಜಕೀಯ ಕೆಲಸ ಮಾಡುತ್ತಿದ್ದೇನೆ. ಸಮಾಜದಲ್ಲಿ ಬಡವರು, ನೊಂದವರು, ಹಿಂದುಳಿದವರಿಗೆ ಸಹಾಯ ಮಾಡುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ. ತಂದೆ ಸತೀಶ ಜಾರಕಿಹೊಳಿ ಅವರು ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಾ ಬಂದಿದ್ದು, ಮುಂದೆಯೂ ಮಾಡಲಿದ್ದಾರೆ. ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ ದೇಹದಾರ್ಢ್ಯ ಸ್ಪರ್ಧೆ, ಕ್ರಿಕೆಟ್ ಸ್ಪರ್ಧೆ, ಪುಸ್ತಕ ವಿತರಣೆ, ಉದ್ಯೋಗ ಮೇಳ, ಸೇನೆಗೆ ತರಬೇತಿ ಶಿಬಿರ, ಪೊಲೀಸ್ ನೇಮಕಾತಿ ಮುಂತಾದ ಚಟುವಟಿಕೆಗಳನ್ನು ಸ್ವಂತ ಖರ್ಚಿನಲ್ಲಿ ಅನುಷ್ಠಾನಗೊಳಿಸುತ್ತಿದ್ದಾರೆ. ಇತ್ತೀಚಿಗೆ ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದಿಂದ ಯಾವುದೇ ನೆರವು ಪಡೆಯದೇ ಸತೀಶ್ ಶುಗರ್ಸ್ ಮೂಲಕ ಮೋಡಬಿತ್ತನೆ ಮಾಡಲಾಗಿದೆ ಹಾಗಾಗಿ ಬೆಳಗಾವಿ, ಗೋಕಾಕ, ಖಾನಾಪುರ ತಾಲೂಕಿನಲ್ಲಿ ಮಳೆ ಆಗುತ್ತಿದೆ . ಅವರ ಕೆಲಸದಲ್ಲಿ ನಾನು ಸ್ವಲ್ಪ ಭಾಗ ವಹಿಸಿದ್ದೇನೆ. ಮುಂದೆ ಅವರ ಮಾರ್ಗದರ್ಶನದಂತೆ ನಿಮ್ಮ ಸಹಕಾರದಿಂದ ಸಮಾಜ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಭಾಗಿಯಾದವರನ್ನು ರಾಹುಲ್ ಜಾರಕಿಹೊಳಿ ಸನ್ಮಾನಿಸಿದರು ರಾಹುಲ್ ಜಾರಕಿಹೊಳಿ ಅವರನ್ನು ಸ್ವಾಮೀಜಿ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಸ್ಮರಣಿಕೆ ನೀಡಿ ಗೌರವಿಸಿದರು. ಯುವ ಕಾರ್ಯಕರ್ತರ ಪರವಾಗಿ ಗುಲಾಬಿ ಹೂವಿನ ಹಾರ, ಶಾಲು, ಬೆಳ್ಳಿ ಗದೆ ನೀಡಿ ಅಭಿನಂದಿಸಲಾಯಿತು. ಇದಲ್ಲದೇ ಯಮಕನಮರಡಿ ವಿಧಾನಸಭಾ ಕ್ಷೇತ್ರದ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಹುಲ್ ಜಾರಕಿಹೊಳಿ ಅವರನ್ನು ಸನ್ಮಾನಿಸಿ ಜನ್ಮದಿನದ ಶುಭಾಶಯ ಕೋರಿದರು.

ಸಮಾರಂಭಕ್ಕೂ ಮುನ್ನ ಕಾಕತಿ ಗ್ರಾಮಸ್ಥರು ರಾಹುಲ್ ಅವರಿಗೆ ಭವ್ಯ ಸ್ವಾಗತ ಕೋರಿದರು. ಬಳಿಕ ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕೆಗೆ ಬರಮಾಡಿಕೊಳ್ಳಲಾಯಿತು . ಇದೇ ವೇಳೆ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ರಾಣಿ ಚನ್ನಮ್ಮ ಅವರ ಪ್ರತಿಮೆಗೆ ರಾಹುಲ್ ಜಾರಕಿಹೊಳಿ ನಮನ ಸಲ್ಲಿಸಿದರು. ಅದೇ ರೀತಿ ಕಾಕತಿ ಗ್ರಾಮ ದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಹುಲ್ ಹುಟ್ಟುಹಬ್ಬದ ನಿಮಿತ್ತ ದೇವಸ್ಥಾನದ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಅನೇಕ ಯುವಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಿದರು
ಈ ಸಂದರ್ಭದಲ್ಲಿ ರಾಹುಲ್ ಜಾರಕಿಹೊಳಿ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

BGM YOUTH LEADER RAHUL JARAKIHOLI BIRTHDAY AT KAKAT