Uncategorized

ತಿಗಡಿ ಗ್ರಾಮ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಬಾಸಾಹೇಬ ಪಾಟೀಲ

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೂತನ ಕಟ್ಟಡದ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿ ಯಾವದೇ ಕಳಪೆ ಮಟ್ಟದಲ್ಲಿ ನಡೆದಂತೆ ಗ್ರಾಮಸ್ಥರು ನೋಡಿಕೊಳ್ಳಬೇಕು ಹಾಗೂ ಶಾಲೆಯಲ್ಲಿ ಕಲಿಯುವ ಮಕ್ಕಳ ಒಳ್ಳೆಯ ಶಿಕ್ಷಣ ಪಡೆಯಬೇಕು ನಾನು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಇವತ್ತು ಗ್ರಾಮದ ಯುವಕರು ಗ್ರಾಮಕ್ಕೆ ಒಂದು ಹೊಸದಾದ ಜಿಮ್ ಮತ್ತು ವ್ಯಾಯಾಮ ಕೊಠಡಿ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ ಶೀಘ್ರವೇ ಮಾಡಲಾಗುವುದು ಎಂದರು .

ಈ ಕಾರ್ಯಕ್ರಮದಲ್ಲಿ ವಿ ಎಸ ಹಿರೇಮಠ ಬಿ ಜಿ ಬಾಳೇಕುಂದ್ರಗಿ, ಡಿ ಜಿ ನಾಗನೂರು ಶಾಲೆಯ ಎಸಡಿಎಂಸಿ ಅಧ್ಯಕ್ಷರಾದ ಮಾರುತಿ ಮದ್ದನ್ನವರ ,ಗ್ರಾಮ ಪಂಚಾಯತಿ ಪಿಡಿಒ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಸದ್ಯಸರಾದ,ಉಳವಪ್ಪ ಕುರಬರ ಮಂಜುನಾಥ ಮರಾಠೆ ಹಾಗೂ ಗ್ರಾಮದ ಮುಖಂಡರಾದ ಶಿವಾನಂದ ಜಕಾತಿ,ಬಾಬಾ ಹೊಸಮನಿ,ಬಸವರಾಜ ಜಕಾತಿ,ಬಸಲಿಂಗ ಕಾಳೆ,ಪಕ್ಕಿರಪ್ಪ ಅಸಲನ್ನವರ,ನಾಗಣ್ಣ ಜಕಾತಿ ಹೀಗೆ ಗ್ರಾಮದ ಗುರು ಹಿರಿಯರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags: