Uncategorized

Bigg Boss: ಮಿಡ್‌ ವೀಕ್‌ ಎಲಿಮಿನೇಷನ್‌ನಲ್ಲಿ ಬೆಂಕಿ ತನಿಷಾ ಔಟ್‌

Share

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಮಹಾ ತಿರುವು, ದೊಡ್ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ದೊಡ್ಮನೆ ಆಟದಿಂದ ತನಿಷಾ ಕುಪ್ಪಂಡ (Tanisha Kuppanda) ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ದೊಡ್ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ತನಿಷಾ ಕುಪ್ಪಂಡ ಅವರಿಗೆ ‘ಬಿಗ್ ಬಾಸ್’ ಬಿಗ್ ಶಾಕ್ ಕೊಟ್ಟಿದ್ದಾರೆ. ತನಿಷಾ ಈ ಮನೆಯಲ್ಲಿ ನಿಮ್ಮ ಪಯಣ ಅಂತ್ಯ ಎಂದು ಹೇಳಿ ‘ಬಿಗ್ ಬಾಸ್’ (Bigg Boss) ಅಚ್ಚರಿ ಮೂಡಿಸಿದ್ದಾರೆ.
ಕಳೆದ 60 ದಿನಗಳಿಂದ ಎದುರಾಳಿಗಳಿಗೆ ಠಕ್ಕರ್ ಕೊಡುತ್ತಲೇ ತನಿಷಾ ಆಟ ಆಡುತ್ತಿದ್ದರು. ಟಾಸ್ಕ್‌ವೊಂದರಲ್ಲಿ ತನಿಷಾ ಕಾಲಿಗೆ ಏಟಾದ ಮೇಲೆ ಕೊಂಚ ಡಲ್ ಆದರು
ಬಿಗ್ ಬಾಸ್ ಮನೆಯ ಆಟದಲ್ಲಿ ಕಳೆದ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಸಡನ್ ಆಗಿ ತನಿಷಾ ಅವರ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಈ ಕುರಿತ ವಾಹಿನಿಯ ಪ್ರೋಮೋ ವೈರಲ್ ಆಗುತ್ತಿದೆ.
ಕಳೆದ ವಾರ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೂ ಡೇಂಜರ್ ಝೋನ್‌ನಲ್ಲಿದ್ದರು. ಆದರೆ ಈ ವಾರ ತುಕಾಲಿ ಸಂತೂ ನಾಮಿನೇಟ್ ಆಗಿಲ್ಲ. ಮೂಲಗಳ ಪ್ರಕಾರ, ತನಿಷಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.

Tags: