Uncategorized

ಹಬ್ಬಕ್ಕೆ ಫುಲ್ ಆದ ಬಸ್‌ಗಳು-“ಶಕ್ತಿ” ಪ್ರದರ್ಶಿಸಿದ ಮಹಿಳಾಮಣಿಗಳು

Share

ಧಾರವಾಡ: ನಾಳೆಯಿಂದ ಎರಡು ದಿನಗಳ ಕಾಲ ವಿಜಯದಶಮಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಈ ಹಬ್ಬಕ್ಕೆ ಸರ್ಕಾರಿ ರಜೆಗಳು ಕೂಡ ಇದ್ದು, ಎಲ್ಲ ಸಾರಿಗೆ ಬಸ್ಸುಗಳು ಸಾರ್ವಜನಿಕರಿಂದ ಕಿಕ್ಕಿರಿದು ತುಂಬಿಕೊಂಡೇ ಹೋಗುತ್ತಿವೆ.

ಬಹುತೇಕ ಬಸ್‌ಗಳಲ್ಲಿ ಮಹಿಳಾ ಮಣಿಗಳೇ ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಇದನ್ನು ನೋಡಿದರೆ ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಮಹಿಳೆಯರು ಶಕ್ತಿ ತುಂಬಿದಂತೆ ಕಾಣುತ್ತಿದೆ.

ಧಾರವಾಡದ ಹೊಸ ಬಸ್ ನಿಲ್ದಾಣದಿಂದ ಬೇರೆ ಬೇರೆ ಊರುಗಳಿಗೆ ಹೋಗುವ ಬಸ್ಸುಗಳು ಮಹಿಳೆಯರಿಂದಲೇ ತುಂಬಿಕೊಂಡಿದ್ದವು. ಪ್ರಯಾಣಿಕರು ಸೀಟು ಹಿಡಿಯಲು ಪರದಾಡುವಂತಾಯಿತು. ಕೆಲವರಂತೂ ಸೀಟು ಹಿಡಿದುಕೊಳ್ಳಲು ತಮ್ಮ ಮಕ್ಕಳನ್ನು ಬಸ್ಸಿನ ಕಿಟಕಿಯಲ್ಲಿ ಹತ್ತಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ದಸರಾ ಹಬ್ಬಕ್ಕೆಂದು ಊರಿಗೆ ಹೋಗುತ್ತಿದ್ದ ಪ್ರಯಾಣಿಕರು ಒದ್ದಾಡಿ ಬಿದ್ದಾಡಿ ಬಸ್ಸು ಹಿಡಿದು, ಕೊನೆಗೆ ಸೀಟು ಸಿಕ್ಕರೂ ಸಿಗದಿದ್ದರೂ ನಿಂತು ಪ್ರಯಾಣಿಸಿ ತಮ್ಮ ಊರು ಮುಟ್ಟಿದ್ದಂತೂ ಸುಳ್ಳಲ್ಲ.

Tags: