Uncategorized

ಮಹಿಳೆ ಅರೆಬೆತ್ತಲೆ ಮಾಡಿದ ಪ್ರಕರಣ ಸತ್ಯಕ್ಕೆ ದೂರವಾಗಿದೆ: ಎಸ್ಪಿ

Share

ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಮಹಿಳೆಯೋರ್ವಳನ್ನು ಒಂದು ಗುಂಪಿನವರು ಅರೆಬೆತ್ತಲೆ ಮೆರವಣಿಗೆ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಮಹಿಳೆ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕಂಡು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಹೇಳಿದರು.

ಬುಧವಾರ ಬೆಳಗಾವಿಯ ಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರೋಪ ಮಾಡಿದ ಮಹಿಳೆ ತಾನೇ ಗ್ರಾಪಂಗೆ ಹೋಗಿರುವ ಕುರಿತು ಬಲವಾಗಿ ಸಾಕ್ಷಿಗಳು ಸಿಕ್ಕಿವೆ. ಬಲವಂತವಾಗಿ ಯಾರೂ ಆಕೆಯನ್ನು ಕರೆದುಕೊಂಡು ಹೋಗಿಲ್ಲ ಎನ್ನುವುದು ಸಾಭಿತಾದ ಮೇಲೆ ಒಳಗಡೆ ಏನು ನಡೆದಿದೆ ಎನ್ನುವುದನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ ಎಂದರು.ಈ ಘಟನೆ ನಡೆದಿದೆ ಎಂದು ಮಹಿಳೆ ಆರೋಪ ಮಾಡಿದ ವೇಳೆ ಅಲ್ಲಿ ಮಹಿಳಾ ಅಧಿಕಾರಿಯೂ ಇದ್ದರು. ಆ ಅಧಿಕಾರಿ ಆರೋಪಿಸಿದ ಮಹಿಳೆ ಹೇಳಿದ ಹಾಗೆ ಯಾವೂದು ನಡೆದಿಲ್ಲ ಎಂದು ತನಿಖೆಯಲ್ಲಿ ತಿಳಿಸಿದ್ದಾರೆ. ಮೇಲ್ನೊಟ್ಟಕ್ಕೆ ಆಸ್ತಿ ವಿವಾದದ ಕುರಿತು ಪಂಚಾಯತಿ ಹೋದ ಸಂದರ್ಭದಲ್ಲಿ ದೂರು ನೀಡಿದ್ದರು. ಅದು ಸತ್ಯವಾಗಿದೆ. ಆದರೆ ಮಹಿಳೆ ಮಾಡಿರುವ ಆರೋಪದ ಬಗ್ಗೆ ಪೂರಕವಾದ ಸಾಕ್ಷಿಗಳನ್ನು ಅವರು ನೀಡಿಲ್ಲ. ಆದರೆ ನಮಗೆ ಸ್ವತಂತ್ರö್ಯ ಸಾಕ್ಷಿದಾರರು ನೀಡಿದ ಪ್ರಕಾರ ಆ ರೀತಿ ಘಟನೆ ತಿಗಡಿಯಲ್ಲಿ ನಡೆದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಹಾಡಹಗಲೇ ಅಧಿಕಾರಿಯ ಮುಂದೆಯೇ ಇಂಥ ಕೃತ್ಯ ಆಗುತ್ತದೆ ಎನ್ನುವುದು ಊಹಿಸುವುದು ಕೂಡ ಕಷ್ಟ. ಕಳೆದ ನ.21 ರಂದು ಬೈಲಹೊಂಗಲ ಪೊಲೀಸ್ ಠಾಣೆಗೆ ಬೀಮ್ಸ್ ಆಸ್ಪತ್ರೆಯಿಂದ ಎಂಎಲ್ಸಿ ವರದಿ ಬರುತ್ತದೆ. ನಮ್ಮ ಸಿಬ್ಬಂದಿಗಳು ಆಸ್ಪತ್ರೆಗೆ ತೆರಳಿದಾಗ ಮಹಿಳೆ ಆಸ್ಪತ್ರೆಯಲ್ಲಿಯೇ ಇರಲಿಲ್ಲ. ಡಾಕ್ಟರ್ ನೀಡಿರುವ ವರದಿ ಪ್ರಕಾರ ಆ ಮಹಿಳೆಗೆ ಯಾವುದೇ ರೀತಿಯ ಗಾಯವಾಗಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Tags: