ಪರಶಿಷ್ಟ ಜಾತಿ ಮತ್ತು ಪಂಗಡದವರ ರಾಷ್ಟ್ರೀಕೃತ ಬ್ಯಾಂಕಿಗೆ ಸಂಭದಿಸಿದ ಕುಂದು ಕೊರತೆ ಸಭೆ ಜರುಗಿತು.
ತಾಲೂಲಾ ಆಡಳಿತ , ಸಮಾಜ ಕಲ್ಯಾಣ ಇಲಾಖೆ ಮತ್ತು ಪರಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಗಳ ಆಶ್ರಯದಲ್ಲಿ ತಹಸಿಲ್ದಾರ ಮಂಜುಳಾ ನಾಯಿಕ ಅದ್ಯಕ್ಷತೆಯಲ್ಲಿ ಹುಕ್ಕೇರಿ ತಾಲೂಕಿನಲ್ಲಿ ಪರಶಿಷ್ಟ ಜಾತಿ ಮತ್ತು ಪಂಗಡದವರ ಬ್ಯಾಂಕಿಗೆ ಸಂಬಂಧ ಪಟ್ಟಂತೆ ಜರುಗಿದ ಕುಂದು ಕೊರತೆ ಸಭೆಯಲ್ಲಿ ವಿವಿಧ ದಲಿತ ಫಲಾನುಭವಿಗಳು ಸರ್ಕಾರದ ವಿವಿಧ ಯೋಜನೆಗಳ ಸಾಲ ಮತ್ತು ಸಬ್ಸಿಡಿಗಳ ನಿಡುವಲ್ಲಿ ತಾರತಮ್ಯ ಮಾಡುತ್ತಿದ್ದು ಮತ್ತು ಬ್ಯಾಂಕಗಳ ಅಧಿಕಾರಿಗಳಿಗೆ ಕನ್ನಡ ಮಾತನಾಡದೆ ಭಾಷಾ ಕೋರತೆಯಿಂದ ಗ್ರಾಮಿಣ ಭಾಗದ ಜನರಿಗೆ ತೊಂದರೆ ಯಾಗುತ್ತಿದೆ ಎಂದು ದೂರಿದರು.
ವೇದಿಕೆ ಮೇಲೆ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಎಚ್ ಎ ಮಾಹುತ, ಪರಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಭಜಂತ್ರಿ, ದೌರ್ಜನ್ಯ ಸಮಿತಿ ಜಿಲ್ಲಾ ಸದಸ್ಯ ಕರೆಪ್ಪಾ ಗುಡೆನ್ನವರ, ವಿಭಾಗಿಯ ಸದಸ್ಯ ರಮೇಶ ಹುಂಜಿ, ಸಿ ಡಿ ಪಿ ಓ ಹೋಳೆಪ್ಪಾ ಎಚ್, ಲೀಡ ಬ್ಯಾಂಕ ವ್ಯವಸ್ಥಾಪಕ ಸಾಗರ ವಾನಕಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಉದಯ ಹುಕ್ಕೇರಿ, ಮಲ್ಲಿಕಾರ್ಜುನ ರಾಶಿಂಗೆ ಬಾಹು ಪಾಂಡ್ರೆ, ಕೆ ವೆಂಕಟೇಶ, ದೀಪಕ ವೀರಮುಖ, ಅಕ್ಷಯ ವೀರಮುಖ, ಕೀರಣ ಕಾಂಬಳೆ, ಮಹಾದೇವ ಶಿರಗಾಂವಕರ,ರವೀಂದ್ರ ಕಾಂಬಳೆ, ಬಾಬಾಸಾಹೇಬ ಕಾಂಬಳೆ ಮತ್ತು ವಿವಿಧ ರಾಷ್ಟ್ರಿಕೃತ ಬ್ಯಾಂಕ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ದಲಿತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯಲ್ಲಿ ಗೊಂದಲ ಗೂಡಾಗಿ ಯಾವದೆ ಸಮಸ್ಯೆಗೆ ಪರಿಹಾರ ಸಿಗದೆ ಸಭೆ ಮುಕ್ತಾಯಗೊಂಡಿತು.