ಮತದಾನದ ಹಕ್ಕನ್ನು ಚಲಾಯಿಸುವುದು ಭಾರತ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ವಾಗಿದೆ ಎಂದು ಬೆಳಗಾವಿಯ ಭ್ರಷ್ಟಾಚಾರ ನಿರ್ಮೂಲನ ಪರಿವಾರದ ಅಧ್ಯಕ್ಷ ಸುಜಿತ್ ಮುಳಗುಂದ ಹೇಳಿದ್ದಾರೆ ನಗರ ಪ್ರದೇಶಗಳಲ್ಲಿನ ಜನರು ಇತ್ತ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಕರ್ತವ್ಯವನ್ನು ನಿಭಾಯಿಸಲು ಕೆಲಜನರು ಅಸಾಮರ್ಥರಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ಮಹಾನಗರ ಪಾಲಿಕೆ ಚುನಾವಣೆ ನಡೆದಾಗ, ಒಂದೇ ಕುಟುಂಬದಲ್ಲಿ ಇರುವಂತಹ ಮತದಾರರನ್ನು ಬೇರೆ ಬೇರೆ ವಾರ್ಡುಗಳಿಗೆ ಸೇರಿಸಿದ್ದು ಕಂಡು ಬಂದಿದೆ.
ಮಹಾನಗರ ಪಾಲಿಕೆ ಚುನಾವಣೆ ವಾರ್ಡುಗಳ ರಚನೆ ಸಂಧರ್ಭದಲ್ಲಿ ಮತದಾರರಪಟ್ಟಿ ವಿಭಾಜನೆಯಾಯಿತು. ಇದ್ರಲ್ಲಿ ಅನೇಕ ಜನರ ಹೆಸರುಗಳು ಕಾಣೆಯಾಗಿದ್ದವು. ಚುನಾವಣೆ ಆಯೋಗವು ಮಾಡಿದ ತಪ್ಪಿಗೆ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಬೇಕಾಯಿತು. ಒಂದೇ ಕುಟುಂಬದವರ ಹೆಸರು ಬೇರೆ ಬೇರೆ ವಾರ್ಡಗಳಲ್ಲಿಯೂ ಬಂದಿದ್ದಿದುಂಟು.
ಈಗ ಭ್ರಷ್ಟಾಚಾರ ನಿರ್ಮೂಲನೆ ಪರಿವಾರದ ಅಧ್ಯಕ್ಷ ಸುಜಿತ್ ಮುಳಗುಂದ ಅವರು ನಗರವಾಸಿಗಳಲ್ಲಿ ಆಹ್ವಾನ ಮಾಡಿ ಪ್ರಕಟಣೆ ನೀಡಿದ್ದಾರೆ. ಈಗಾಗಲೇ ಅನೇಕ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ನಿರ್ಲಕ್ಷ ತೋರಿದ್ದಾರೆ. ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಯ ಅಂಗವಾಗಿ ಮತದಾರರಪಟ್ಟಿಯನ್ನು ಆಧಾರಗೆ ಲಿಂಕ್ ಮಾಡುವುದು, ಹೊಸ ಮತದಾರರ ಹೆಸರುಗಳನ್ನು ದಾಖಲಿಸುವುದು. ನಿಧನರಾಧವರ ಹೆಸರುಗಳನ್ನು ತೆರವುಗೊಳಿಸುವುದು. ಮತದಾರರ ಹೆಸರುಗಳ ಪರಿಷ್ಕೃರಿಸುವುದು ಇಂತಹ ಅನೇಕ ಪ್ರಕ್ರಿಯೆಗಳು ನಡೆಯುತ್ತಿವೆ.
ಬೆಳಗಾವಿ ಮಹಾನಗರ ಪಾಲಿಕೆ ನಗರ ವ್ಯಾಪ್ತಿಯಲ್ಲಿ ಬರುವಂತಹ ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳ ಮಹಾನಗರ ಪಾಲಿಕೆಯ ಮುಖ್ಯ ಕಾರ್ಯಾಲಯದಲ್ಲಿ ಸ್ಥಳಾಂತರವಾದ ಚುನಾವಣಾ ವಿಭಾಗದಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಈ ಮೊದಲು ಬೆಳಗಾವಿ ನಗರದ ಹೃದಯಭಾಗದಲ್ಲಿ ಪಾಲಿಕೆ ಕಾರ್ಯಾಲಯವಿದ್ದಾಗ ಜನತೆಗೆ ಅನುಕೂಲವಾಗುತ್ತಿತ್ತು. ಆದ್ರೆ, ಈಗ ಪಾಲಿಕೆಯ ನೂತನ ಕಾರ್ಯಾಲಯದ ಎರಡನೇ ಮಹಡಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದ್ದು, ಜನತೆಗೆ ಇದರ ಯೋಗ್ಯ ಮಾಹಿತಿ ಸಿಗುತ್ತಿಲ್ಲ. ಅಲ್ಲದೆ ವಯಸ್ಸಾದವರಿಗೆ ಮಹಡಿ ಹತ್ತಿ ಹೋಗಲು ತೊಂದರೆಯಾಗುತ್ತಿದೆ.
ಡಿಸೆಂಬರ್ 8 ರಂದು ಅಂತಿಮ ದಿನಾಂಕ ಅರ್ಜಿಗಳನ್ನು ಸ್ವೀಕರಿಸಲು ನಿರ್ಧರಿಸಲಾಗಿದ್ದು ಅದರ ಮೊದಲೇ ತಮ್ಮ ಜಾಗೃತ ನಾಗರಿಕರು ಮತದಾನದ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರೀಕ್ಷಿಸುವುದು ಅನಿವಾರ್ಯವಾಗಿದೆ. ಒಂದು ವೇಳೆ ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ ಅರ್ಜಿ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ.ಪ್ರಜಾಪ್ರಭುತ್ವದ ಆಧಾರದ ಮೇಲೆ ಈ ಚುನಾವಣೆ ನಡೆಯುತ್ತಿದ್ದು, ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಮತದಾನದ ಹಕ್ಕು ಚಲಾಯಿಸಲು ಅವಕಾಶವಿರುತ್ತದೆ.
ನೂತನ ವಿವಿಪ್ಯಾಟ್ ಮತ್ತು ಇವಿಎಂ ಮಷಿನ್ ಮೂಲಕ ಮತದಾನ ನಡೆಯುತ್ತಿದ್ದು ಚುನಾವಣೆ ವೇಳೆ ಅನೇಕ ಆರೋಪಗಳು ಮತ್ತು ಸಮಸ್ಯೆಗಳು ಕೇಳಿ ಬರುತ್ತಿವೆ. ಮತದಾರರಲ್ಲಿಯೂ ಕೂಡ ವಿಶ್ವಾಸ ಇಲ್ಲದಾಗಿದೆ. ಆಯೋಗದಿಂದ ಮತದಾರಸೇವೆಗೆ ಆನ್ಲೈನ್ ಸರ್ವಿಸ್ ಆರಂಭಿಸಿದ್ದು, ಇದರ ಸದುಪಯೋಗ ಮಾಡಿಕೊಂಡು ಮತದಾರರು ಮತದಾನಚೀಟಿಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ತಮ್ಮ ಹೆಸರು ವಿಳಾಸವನ್ನು ಪರಿಶೀಲಿಸಿಕೊಳ್ಲಬೇಕೆಂದು ಅವರು ಆಹ್ವಾನಿಸಿದ್ದಾರೆ.
ಸುಮಾರು ವರ್ಷಗಳಿಂದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಅದೇ ಅಧಿಕಾರಿಗಳು ಕಾಯಂ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಇದರಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಸರ್ಕಾರ ಇದನ್ನ ತಡೆಗಟ್ಟಲು ಮುರೂ ವರ್ಷಕ್ಕೊಮ್ಮೆ ಅವರ ವರ್ಗಾವಣೆ ಮಾಡುತ್ತಿದೆ ಆದರೇ ಮತ್ತೇ ಅದೇ ಅಧಿಕಾರಿಗಳಿಗೆ ಅವಕಾಶ ನೀಡಲಾಗುತ್ತಿದೆ. 3 ವರ್ಷ ಮೇಲ್ಪಟ್ಟ ಸೇವೆ ಸಲ್ಲಿಸಿದ ಎಲ್ಲಾ ಸರ್ಕಾರಿ ಇಲಾಖೆಯ ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾಯಿಸಬೇಕು. ಚುನಾವಣೆ ಪಾರದರ್ಶಕವಾಗಿರಬೇಕು ಹಾಗೆ ಚುನಾವಣೆ ಆಯೋಗ ನೋಡಿಕೊಳ್ಳಬೇಕು ಇದು ಎಲ್ಲ ರಹವಾಸಿಗಳ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ