Uncategorized

ಚಿಕ್ಕೋಡಿಯಲ್ಲಿ ‌ಶಾಂತಿಯುತವಾಗಿ ಈದ್ ಮಿಲಾದ್ ಆಚರಣೆ

Share

ಈದ್ ಮಿಲಾದ್ ಹಬ್ಬವನ್ನು ಚಿಕ್ಕೋಡಿ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.

ಸೆ.28ರಂದು ಗಣೇಶ ವಿಸರ್ಜನೆ ಇದ್ದುದರಿಂದ ಈ ಬಾರಿ ಅ.1ರಂದು ಈದ ಮಿಲಾದ ಆಚರಣೆಗೆ ಮುಂದಾಗುವ ಮೂಲಕ ಧಾರ್ಮಿಕ ಸಾಮರಸ್ಯ ಮೆರೆದಿದ್ದರು.ಎಲ್ಲಾ ಮುಸ್ಲಿಂ ಬಾಂಧವರು ಒಂದು ಕಡೆ ಸೇರಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು, ಮೆರವಣಿಗೆಯಲ್ಲಿ ಧರ್ಮದ ಭಾವಚಿತ್ರ ಹಿಡಿದು ಎಲ್ಲರೂ ಒಟ್ಟಾಗಿ ಸಡಗರದಿಂದ ಮಿಲಾದ ಆಚರಿಸಿದರು.

ಪೊಲೀಸರು ಕೂಡ ಹೆಚ್ಚಿನ ಭದ್ರತೆ ಒದಗಿಸಿದ್ದರು. ಜಾರಿ ಗಲ್ಲಿಯಿಂದ ಮೆರವಣಿಗೆ ಮೂಲಕ ಹೊರಟು, ಸಯ್ಯದ ಗಲ್ಲಿ,ಅಂಕಲಿಕೂಟ ಸೇರಿದಂತೆ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಸಂಚರಿಸಿತು.ಈದ ವಿಲಾದ ಹಬ್ಬದ ಅಂಗವಾಗಿ ಪೊಲೀಸರು ಬಿಗಿ ಭದ್ರ ಒದಗಿಸಿದ್ದರು. ಯಾವುದೇ ಆಹಿತರಕರ ಘಟನೆ ನಡೆಯದಂತೆ ಪಿಎಸ್‌ಐ ಬಸವರಾಜ ನೇರ್ಲಿ ಅವರು ಹೆಚ್ಚಿನ ನಿಗಾ ವಹಿಸಿದ್ದರು. ಶಾಂತಿಯುತ ಮರವಣಿಗೆ ನಡೆಯಿತು.

Tags: