ಪೌರಕಾರ್ಮಿಕರ ದಿನಾಚರಣೆ ನಿಮಿತ್ಯ ೨೦೨೩ನೇ ಸಾಲಿನ ಕ್ರೀಡಾಕೂಟವನ್ನು ಬೆಳಗಾವಿ ಸುಭಾಷ ನಗರದ ಪೊಲೀಸ ತರಬೇತಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಜಿಲ್ಲಾಡಳಿತ ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಹಯೋಗದಲ್ಲಿ ಪೌರಕಾರ್ಮಿಕರ ದಿನಾಚರಣೆ ನಿಮಿತ್ಯ ೨೦೨೩ನೇ ಸಾಲಿನ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜು ಸೇಠ್ ಪೌರ ಕಾರ್ಮಿಕರಿಗೆ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು
ಬೆಳ್ಳೆಗೆ 5 ಗಂಟೆಯಿಂದಲ್ಲೂ ಹಗಲು ಇರುಳು ಎನ್ನದೇ ನಮ್ಮಗೊಸ್ಕರ ಕೆಲಸ ಮಾಡುತ್ತೀದ್ದೀರಿ ಪೌರಕಾರ್ಮಿಕರ ಶ್ರಮದಿಂದ ಬೆಳಗಾವಿ ನಗರ ಸ್ಮಾಟ್ ಸಿಟಿಯಾಗಿ ಬದಲಾಗಿದೆ , ನಿಮ್ಮ ಸಮಸ್ಯೆಗಳು ಏನಾದರೂ ಇದ್ದರೆ ನಮ್ಮ ಆಫೀಸ್ ಮತ್ತು ಮನೆ ದಿನದ 24 ಗಂಟೆಯೂ ತೆರದಿರುತ್ತೇದೆ ನೀವು ಯಾವಾಗಾದರು ಬಂದು ಸಮಸ್ಯೆಗಳನ್ನು ಹೇಳಿಕೊಳ್ಳಬಹುದು
2013 ರಲ್ಲಿ ಫೀರೋಜ್ ಸೇಠ ಶಾಸಕರಾದಗ ಪೌರಕಾರ್ಮಿಕರಿಗೆ ಮನೆ ನೀಡುವ ಯೋಜನೆಗೆ ಚಾಲನೆ ನೀಡಿದ್ದರು ಅದು ಇವಾಗ ಸರ್ಕಾರದ ಸಹಕಾರದೊಂದಿಗೆ ಪೂರ್ಣಗೊಂಡಿದೆ ಶೀಘ್ರದಲ್ಲಿ ಮನೆ ಹಸ್ತಾಂತರ ಮಾಡುತ್ತೇವೆ , ನಿವು ಆರೋಗ್ಯ ವಿಮೆ ,ಸಂಬಳದ ಬಗ್ಗೆ ಯೋಚನೆ ಮಾಡಲು ಹೋಗಬೇಡಿ ನಾವೂ ಸದಾ ನಿಮ್ಮೊಂದಿಗೆ ಇರುತ್ತೇ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಕಳೆದ ವರ್ಷದಂತೆ ಈ ವರ್ಷವೂ ಪೌರ ಕಾರ್ಮಿಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಈ ಸಮಯದಲ್ಲಿ ಮಹಾನಗರ ಪಾಲಿಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಪೌರಕಾರ್ಮಿಕರಗಾಗಿ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೇವೆ ಬೆಳಗಾವಿ ನಗರ ಸುಂದರ ವಾಗಿರಲು ನಮ್ಮ ಪೌರಕಾರ್ಮಿಕರ ಶ್ರಮದಾನ ಮಹತ್ವವಾಗಿದೆ ಬೆಳಿಗ್ಗೆ ೫ ಗಂಟೆ ಅಸ್ಟೊತ್ತಿಗೆ ಬೀದಿಗಳಲ್ಲಿನ ಕಸವನ್ನು ಸ್ವಚ್ಛಗೊಳಿಸುತ್ತಾರೆ ಅಂತಹ ಕಾರ್ಮಿಕರನ್ನು ಖುಷಿಯಾಗಿ ನೋಡಿಕೊಳ್ಳುವುದು ನಮ್ಮಲ್ಲೆರ ಆದ್ಯ ಕರ್ತವ್ಯ ಆಗಿದೆ ಎಂದರು .
ಈ ಸಂದರ್ಭದಲ್ಲಿ ಉಪ ಮೇಯರ ರೇಷ್ಮಾ ಪಾಟೀಲ ಮಹಾನಗರ ಪಾಲಿಕೆ ಅಧಿಕಾರಿಗಳು ಪೌರಕಾರ್ಮಿಕರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು .