ಕಾಂಗ್ರೆಸ್ ಸರ್ಕಾರ ತಮ್ಮ ಹಿತಾಸಕ್ತಿಗೆ ರಾಜ್ಯವನ್ನ ಬಲಿ ಕೊಟ್ಟಿದೆ. ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲ. ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಗೊಬೆ ಕುರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜೆಡಿಎಸ್ ನಾಯಕ ಜಿ ಟಿ ದೇವೇಗೌಡ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, ವಿದ್ಯುತ್ ಹಾಗೂ ಇತರ ಅಭಿವೃದ್ಧಿ ಕಾಮಗಾರಿ ಗಳಿಗೆ ಬಜೆಟ್ ನಲ್ಲಿ ಎಷ್ಟು ಹಣ ಇಟ್ಟಿರಿ.
ಐದು ಗ್ಯಾರಂಟಿ ಅಂತಾ ಹೊರಟಿರಿ.
ಈ ಗ್ಯಾರಂಟಿಗಳ ಮೇಲೆ 29ಪಕ್ಷ ಕಟ್ಟಿಕೊಂಡು ಲೋಕಸಭಾ ಚುನಾವಣೆಗೆ ಹೊರಟಿರಿ. ಲೋಕಸಭಾ ಚುನಾವಣೆಯಯ 20 ಸ್ಥಾನ ಪಡೆಯಲು ಉದ್ದೇಶ ನಿಮ್ಮದು. ಅನ್ನಭಾಗ್ಯ ಯೋಜನೆಯಲ್ಲಿ ಒಂದು ಕಾಳು ಕೊಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಐದು ಕೆಜಿ ಕೊಡತಾ ಇದ್ದಾರೆ ಎಂದರು.
ಕಾವೇರಿ ಹಾಗೂ ಬರದ ವಿಚಾರದಲ್ಲಿ ಸರ್ಕಾರ ಬಳಿ ಸುಳ್ಳು ಹೇಳತಾ ಇದೆ.
ಅವರು ಎಲ್ಲಿ ಫೇಲಾದರು. ಭೀಕರವಾದ ಬರಗಾಲ ಇದೆ.
ಈಗ ನವೆಂಬರ್ ಬಂದಿದೆ ಏನು ಕೆಲಸ ಮಾಡಿಲ್ಲ .ಯಾವುದೇ ಬರ ಕಾಮಗಾರಿ ಆಗಿಲ್ಲ. ಈಗ ಹೇಳತಾ ಇದ್ದಾರೆ 40 ಲಕ್ಷ ಕೋಟಿ ಬೆಳೆ ಹಾಗೂ 48000 ಕೋಟಿ ಬೆಳೆ ಹಾನಿಯಾಗಿದೆ ಅಂತಾ. ಇದುವರೆಗೆ ಒಂದು ರೂಪಾಯಿ ಸಹ ಕೊಟ್ಟಿಲ್ಲ . ಯಾವುದೇ ಬರ ಕಾಮಗಾರಿ ಮಾಡಿಲ್ಲ. ರೈತರ ಪರಿಸ್ಥಿತಿ ಏನಾಗಬಾರದು. ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲ.
ನಾವು ದಿನಕ್ಕೆ ಏಳು ಗಂಟೆಗಳ ಕಾಲ ಸತತವಾಗಿ ವಿದ್ಯುತ್ ಸರಬರಾಜು ಮಾಡಿದವು. ಈಗಿನ ಸರ್ಕಾರ ಮೂರು ಅಲ್ಲ ಒಂದು ತಾಸು ಮಾಡತಾ ಇಲ್ಲ ಎಂದರು.