Uncategorized

ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಫಲಿತಾಂಶ ಪ್ರಕಟ

Share

ಅವಿಭಜಿತ ಧಾರವಾಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಧಾರವಾಡ ಮುರುಘಾಮಠದ ಶ್ರೀ ಮೃತ್ಯುಂಜಯ ಪ್ರೌಢಶಾಲೆಯ ಆವರಣದಲ್ಲಿ ನಡೆದ ಚುನಾವಣೆಯಲ್ಲಿ 11 ಕ್ಷೇತ್ರದ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಲಯದ ಕಲಘಟಗಿ, ಗದಗ, ನರಗುಂದ, ಶಿರಹಟ್ಟಿ ತಾಲೂಕಿನ ಕ್ಷೇತ್ರಗಳು, ತಾಲೂಕಾ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ ಮತ್ತು ಇತರೆ ಸಹಕಾರ ಕ್ಷೇತ್ರ ಸೇರಿದಂತೆ ಒಟ್ಟು 6 ಕ್ಷೇತ್ರಗಳ ಕುರಿತು ನ್ಯಾಯಾಲಯದಲ್ಲಿ ಪ್ರಕರಣಗಳಿವೆ. ಹೀಗಾಗಿ ಇಂದು ಆರು ಕ್ಷೇತ್ರಗಳನ್ನು ಹೊರತುಪಡಿಸಿ 11 ಕ್ಷೇತ್ರಗಳ ಫಲಿತಾಂಶವನ್ನು ಮಾತ್ರ ಚುನಾವಣಾಧಿಕಾರಿ ಘೋಷಿಸಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಧಾರವಾಡ ಕ್ಷೇತ್ರದಿಂದ ಸಿದ್ದಪ್ಪ ಸಪೂರಿ, ರೋಣ ಜಿ.ಪಿ.ಪಾಟೀಲ, ಹಿರೇಕೆರೂರದಿಂದ ಲಿಂಗರಾಜ ಚಪ್ಪರದಹಳ್ಳಿ, ನವಲಗುಂದ ನಾಗಪ್ಪ ಸಂಕದ, ಹಾವೇರಿ ಕೊಟ್ರೇಶಪ್ಪ ಬಸೇಗಣ್ಣಿ, ರಾಣೆಬೆನ್ನೂರ ಮಳ್ಳಪ್ಪ ನಿಂಗಜ್ಜನವರ, ಸವಣೂರ ಸುಭಾಸ ಗಡಪ್ಪನವರ, ಬ್ಯಾಡಗಿ ಚನ್ನಬಸಪ್ಪ ಹುಲ್ಲತ್ತಿ, ಹಾನಗಲ್ಲ ಸದಾನಂದ ಮೆಳ್ಳಿಹಳ್ಳಿ, ಶಿಗ್ಗಾಂವ ಸಂಗಮೇಶ ಕಂಬಾಳಿಮಠ, ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ ನಿಂಗನಗೌಡ ಮರಿಗೌಡ್ರ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಮೂರು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು ಮುಂಡರಗಿ ಶಿವಕುಮಾರಗೌಡ ಪಾಟೀಲ, ಹುಬ್ಬಳ್ಳಿ ಮಲ್ಲಿಕಾರ್ಜುನ ಹೊರಕೇರಿ, ಕುಂದಗೋಳ ಯಲ್ಲಪ್ಪ ಹೆಬಸೂರ ಜಯಶಾಲಿಯಾಗಿದ್ದಾರೆ.

Tags: