ಸರ್ವೋದಯ ಸ್ವಯಂ ಸೇವಾ ಸಂಘ ಕನ್ನಡಪರ ಸಂಘಟಣೆ ವತಿಯಿಂದ : ಬೆಳಗಾವಿ ಸುವರ್ಣಸೌಧ ಪ್ರವೇಶ ದ್ವಾರದ ಮುಂದೆ ನಾಡ ದೇವತೆ “ಭುವನೇಶ್ವರಿ” ಕಂಚಿನ ಪ್ರತಿಮೆ ಸ್ಥಾಪಿಸುವಂತೆ ಸಿಎಂ ಸಿದ್ದರಾಮಯ್ಯ ನವರಿಗೆ ಮನವಿ ಶ್ರೀನಿವಾಸ ತಾಳೂಕರ ಮನವಿ ಸಲ್ಲಿಸಿದರು
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಘೋಷ ವಾಕ್ಯದೊಂದಿಗೆ ಸರಕಾರವು ಕರ್ನಾಟಕ ನಾಮಕರಣದ ಸುವರ್ಣ ಮಹೊತ್ಸವ ಕಾರ್ಯಕ್ರಮವನ್ನು ವರ್ಷವಿಡಿ ಆಚರಿಸುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯವಾಗಿದೆ. ಬೆಳಗಾವಿಯಲ್ಲಿ ಈಗ ಚಳಿಗಾಲ ಅಧಿವೇಶನ ನಡೆಯುತ್ತಿದ್ದು ಹಿಂದಿನ ಸರಕಾರ ಸುವರ್ಣಸೌಧದ ಮುಂಬಾಗದಲ್ಲಿ ಬಾಬಾ ಸಾಹೇಬ ಅಂಬೇಡ್ಕರ, ರಾಣಿ ಚನ್ನಮ್ಮ ಹಾಗೂ ಶೂರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಿರುವದು ಗೌರವದ ಸಂಕೇತವಾಗಿದೆ. ಈಗ ಕಾಂಗ್ರೆಸ ಸರ್ಕಾರ ಮಹಾತ್ಮ ಗಾಂಧೀಜಿಯವರ ಪುತ್ತಳಿ ಸ್ಥಾಪನೆ ಮಾಡಲು ನಿರ್ಧರಿಸುವುದು ಹೆಮ್ಮೆಯ ವಿಷಯವಾಗಿದೆ. ಅದೂ ಅಲ್ಲದೇ ತಮ್ಮ ಸರಕಾರವು ಬೆಂಗಳೂರಿನಲ್ಲಿ ನಾಡದೇವತೆ “ಭುವನೇಶ್ವರಿಯ ಪ್ರತಿಮೆ ಸ್ಥಾಪಿಸಲು ನಿರ್ಧರಿಸಿರುವದು ಸಂತೋಷದ ವಿಷಯವಾಗಿದೆ. ಸುವರ್ಣ ವಿಧಾನಸೌಧ ಕಟ್ಟಡವು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದು ಲಕ್ಷಾಂತರ ಜನರ ಗಮನ ಸೆಳೆಯುತ್ತಿದೆ ಸುವರ್ಣ ಮಹೋತ್ಸದ ಸವಿನೆನಪಿಗಾಗಿ ಸುವರ್ಣಸೌಧದ ಪ್ರವೇಶ ದ್ವಾರದ ಬಲಬದಿಯಲ್ಲಿ 50 ಅಡಿ ಎತ್ತರದ ತಾಯಿ ಭುವನೇಶ್ವರಿಯ ಕಂಚಿನ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ನಾಡಿನ ಸಮಸ್ತ ಕನ್ನಡಿಗರ ‘ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದರು
ಈ ಸಂದರ್ಭದಲ್ಲಿ ಸರ್ವೋದಯ ಸ್ವಯಂ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ ಅವರ ಮನವಿ ಸಿಎಂ ಸಿದ್ದರಾಮಯ್ಯ ಅವರು ಸ್ವೀಕರಿಸಿದರು