Uncategorized

ಹುಕ್ಕೇರಿ ಹಿರೇಮಠದ ದಸರಾ ಉತ್ಸವಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ

Share

ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಇದೆ ತಿಂಗಳು ೧೫ ರಿಂದ ೨೪ ರ ವರೆಗೆ ವೈಶಿಷ್ಟ ಪೂರ್ಣವಾಗಿ ಜರಗುಗಲಿದೆ

ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ರಾಜ್ಯ ಹೊರರಾಜ್ಯ ಮತ್ತು ಹೊರದೇಶದ ಜನಾ ಈ ದಸರಾ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ ಅಕ್ಟೊಬರ ೧೮ ರಂದು ಜರಗುವ ನೊಣವಿನಕೇರಿ ಶ್ರೀ ಡಾಕ್ಟರ್ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ ರೇಣುಕ ಶ್ರೀ ಪ್ರಶಸ್ತಿ ಪ್ರಧಾನ ಜರುಗಲಿದೆ . ಈ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಅವರನ್ನು ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಹ್ವಾನಿಸಿದರು .
ಆಹ್ವಾನವನ್ನು ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಅವರು ಹುಕ್ಕೇರಿ ಹಿರೇಮಠದ ಬಗ್ಗೆ ನಾವು ತುಂಬಾ ಕೇಳಿದ್ದೇವೆ ಹಾಗೆಯೆ ಬೆಳಗಾವಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಗೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದವನ್ನ ಪಡೆದಿದ್ದೇವೆ ,ಈಗ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಭಾಗ್ಯ ನನಗೆ ಒದಗಿ ಬಂದಿದೆ ಅಷ್ಟೇ ಅಲ್ಲದೆ ನಾನು ಆರಾಧಿಸುವ ನೊಣವಿನಕೇರಿ ಶ್ರೀ ಡಾಕ್ಟರ್ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ ಪ್ರತಿಷ್ಠಿತ ರೇಣುಕ ಶ್ರೀ ಪ್ರಶಸ್ತಿ ನೀಡುತ್ತಿರುವುದುದು ಅತೀವ ಸಂತೋಷ ತಂದಿದೆ ಈ ಕಾರ್ಯಕ್ರಮದಲ್ಲಿ ನಾನು ಖಂಡಿತವಾಗಿ ಭಾಗಿಯಾಗುತ್ತೇನೆ ಎಂದರು .

ಈ ಸಂದರ್ಭದಲ್ಲಿ ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರು ,ನಿಪ್ಪಾಣಿಯ ಶಾಸಕಿ ಶಶಿಕಲಾ ಜೊಲ್ಲೆ ಅವರು, ಕಾಂಗ್ರೇಸ ದುರೀಣ ಆನಂದ ಗಡ್ಡದೇವರಮಠ ಅವರು ,ಹುಕ್ಕೇರಿ ಹಿರೇಮಠದ ಶಿಷ್ಯರಾದ ಶೀತಲ ಬ್ಯಾಳಿ ,ಸುರೇಶ ಜಿನರಾಳಿ ,ಚನ್ನಪ್ಪಾ ಗಜಬರ , ಉಪಸ್ಥಿತರಿದ್ದರು.

Tags:

Deputy Chief Minister DK Shivakumar for Dussehra festival of Hukkeri Hiremath