ಮಹಿಳಾ ಮತ್ತು ಮಕ್ಕಳ ಖಾತೆಯ ಸಚಿವೆ ಲಕ್ಷಿ ಹೆಬ್ಬಾಳ್ಕರ್ (Lakshmi Hebbalkar) ಮತ್ತು ಲೋಕೋಪಯೋಗಿ ಇಲಾಖೆ ಖಾತೆಯ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಧ್ಯೆ ಭಿನ್ನಾಭಿಪ್ರಾಯ ಈಗ ಕಾಂಗ್ರೆಸ್‌ನಲ್ಲಿ (Congress) ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡ್ತಿದೆ.
ಸ್ಥಳೀಯ ನಿಗಮಗಳ ಅಧ್ಯಕ್ಷರ ನೇಮಕ ವಿಷಯಕ್ಕೆ ಇಬ್ಬರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ತಮ್ಮವರೇ ಅಧ್ಯಕ್ಷರಾಗಬೇಕೆಂದು ಇಬ್ಬರು ಸಚಿವರ ಬಿಗಿ ಪಟ್ಟು ಇಷ್ಟಕ್ಕೆಲ್ಲ ಕಾರಣ ಎನ್ನಲಾಗ್ತಿದೆ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಘಟಪ್ರಭಾ ಮತ್ತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳ ಪ್ರಾಧಿಕಾರ ನಿಗಮಗಳಿಗೆ ಅಧ್ಯಕ್ಷರ ನಾಮಕರಣಕ್ಕೆ ಸಚಿವರಿಬ್ಬರ ಮಧ್ಯೆ ಮುಸುಕಿನ ಸಂಘರ್ಷ ನಡೆಯುತ್ತಿದೆ ಎನ್ನುವುದು ಸದ್ಯದ ಮಾಹಿತಿ.
ತಮ್ಮ ಬೆಂಬಲಿಗರಿಗೆ ಅಧ್ಯಕ್ಷ ಪದವಿ ಕೊಡಿಸಲು ಪಟ್ಟು ಹಿಡಿದಿದ್ದು, ಹೈಕಮಾಂಡ್ ಮಧ್ಯ ಪ್ರವೇಶಕ್ಕೆ ಕಾದು ನೋಡುವ ತಂತ್ರಕ್ಕೆ ಸಚಿವರು ಮೊರೆಹೋಗಿದ್ದಾರೆ ಎನ್ನಲಾಗಿದೆ. ಸಮಾಧಾನ ಸೂತ್ರ ರಚಿಸದಿದ್ದರೆ ಸರ್ಕಾರಕ್ಕೆ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ಇದೆ.