Uncategorized

ಬಿ.ಜಿ.ಬೆಲ್ಲದ ಶಿಕ್ಷಣ, ಸಮಾಜ ಸೇವಾ ಸಂಸ್ಥೆಯಿಂದ ಸರಕಾರಿ ,ಖಾಸಗಿ ಶಾಲೆಗಳಿ 25 ಇಂಟರಾಕ್ಟಿವ್ ಬೋರ್ಡ್ ವಿತರಣೆ

Share

ಚಿಕ್ಕೋಡಿ- ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಂತ್ರಜ್ಞಾನ ಮೂಲಕ ಶಿಕ್ಷಣ ನೀಡಬೇಕಿದೆ. ತಂತ್ರಜ್ಞಾನದಿಂದ ಮಕ್ಕಳಲ್ಲಿ ಜ್ಞಾನ ಹೆಚ್ಚುತ್ತದೆ” ಎಂದು ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮಿಜಿ ಹೇಳಿದರು.

ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದ ಓಂ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆ ಯಿಂದ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ 2ನೇ ಕಂತಿನ 25 ಇಂಟರಾಕ್ಟಿವ್ ಬೋರ್ಡ್ ವಿತರಣಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, “ಗಳಿಸಿದ ಸಂಪತ್ತಿನಲ್ಲಿ ಸಮಾಜಮುಖಿ ಕಾರ್ಯಗಳಿಗೆ ದಾನ ಮಾಡಬೇಕು. ಉದ್ಯಮಿ ಮಹೇಶ ಬೆಲ್ಲದ ಅವರು ಇಂತಹ ಕಾರ್ಯಗಳನ್ನು ಮಾಡುತ್ತಿದ್ದು ಲಕ್ಷಾಂತರ ರೂ. ಬೆಲೆ ಬಾಳುವ ಇಂಟರ್ಯಾಕ್ಟ್ ಬೋರ್ಡ್ ಗಳನ್ನು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ದೇಣಿಗೆ ನೀಡಿದ ಕಾರ್ಯ ಸ್ತುತ್ಯಾರ್ಹವಾಗಿದೆ” ಎಂದರು.

ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಮಹೇಶ ಬೆಲ್ಲದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, “ಗುರುಗಳು ಹಾಗೂ ನನ್ನ ನಡುವೆ ಅವಿನಾಭಾವ ಸಂಬಂಧವಿದೆ. ಎಲ್ಲಾ ಕ್ಷೇತ್ರಗಳು ಡಿಜಟಲೀಕರಣ ಆಗುತ್ತಿದೆ. ಅದಕ್ಕಾಗಿ ತಾನು ಗ್ರಾಮೀಣ ಮಕ್ಕಳಿಗೆ ತಂತ್ರಜ್ಞಾನ ನೀಡುವದಕ್ಕಾಗಿ ಇಂಟರಾಕ್ಟಿವ್ ಬೋರ್ಡ ನೀಡಲು ನಿರ್ಧಾರ ಮಾಡಿದ್ದೇನೆ. ಭಾರತ ದೇಶದಲ್ಲಿ ಮೊದಲ ಬಾರಿಗೆ ತುಮಕೂರಿನಲ್ಲಿ ಇಂಟರಾಕ್ಟಿವ್ ಬೋರ್ಡ ನಿರ್ಮಾಣದ ಘಟಕವನ್ನು ಎಪ್ರಿಲ್ ಅಥವಾ ಮೇ ನಲ್ಲಿ ಪ್ರಾರಂಭಿಸಲಾಗುವುದು” ಎಂದರು.

ಬಿ ಆರ್ ಸಿ ಬಸವರಾಜ ಕಾಂಬಳೆ ಸೇರಿದಂತೆ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಮಾತನಾಡಿದರು. ಪ್ರಾಚಾರ್ಯ ಡಾ.ಮಹೇಂದ್ರ ಕೆ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹೀರಾ ಶುಗರ್ಸ್ ನಿರ್ದೆಶಕ ಸುರೇಶ ಬೆಲ್ಲದ, ಡಾ.ಪ್ರಕಾಶ ಬೆಲ್ಲದ, ರಮೇಶ ಬೆಲ್ಲದ,ಶಿವಪ್ಪಾ ಹುದ್ದಾರ, ಮಹಾಲಿಂಗ ಹಂಜಿ, ಜಿ.ಬಿ.ಸಂಗಟೆ, ಬಿ.ಎಸ್.ಕಾಡೇಶಗೋಳ, ಎಸ್.ಕೆ.ಕಾಮಗೌಡ, ರಮೇಶ ಬಸ್ತವಾಡೆ, ಮಹೇಶ ಗೋಜಗೋಜಿ, ಕಲ್ಲಪ್ಪ ಕರಗಾಂವ, ಎಸ್.ಐ.ಹೊನ್ನಾಳಿ , ಎಸ್.ಬಿ.ಮುನ್ನೋಳಿ, ಎಸ್.ಆರ್.ಡೊಂಗರೆ , ಬಿ.ಎಮ್.ಅಮ್ಮಣಗಿ, ಹಾಗೂ ಸುತ್ತಮುತ್ತಲಿನ ಶಾಲೆಗಳ ಮುಖ್ಯೋಪಾದ್ಯಯರು ಶಿಕ್ಷಕರು ಎಸ್ ಡಿಎಂಸಿ ಅದ್ಯಕ್ಷರು ಆಡಳಿತ ಮಂಡಳಿಯರು ಉಪಸ್ಥಿತರಿದ್ದರು.
ಉಪ ಪ್ರಾಚಾರ್ಯ ರಾಜು ಮಹಿಪತಿ ನಿರೂಪಿಸಿ, ಸಿದ್ದಪ್ಪ ಮೂರಚಟ್ಟಿ ವಂದಿಸಿದರು.

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags: