Uncategorized

ದೀಪಾವಳಿ ಲಕ್ಷ್ಮೀ ಪೂಜೆ ಖರೀದಿಗೆ ಬೆಳಗಾವಿ ಮಾರುಕಟ್ಟೆಯಲ್ಲಿ ಜನಜಂಗುಳಿ

Share

ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆ ಪೂಜೆಗೆ ಬೇಕಾದ ಹೂವು, ಮಾಲೆ, ಕಬ್ಬು, ಬಾಳೆ ಗಿಡಗಳ ಖರೀದಿಗೆ ಬೆಳಗಾವಿ ಜನತೆ ಮಾರುಕಟ್ಟೆಯಲ್ಲಿ ಉತ್ಸಾಹದಿಂದ ಖರೀದಿ ಮಾಡುತ್ತಿದ್ದಾರೆ

ಬೆಳಗಾವಿ ನಗರದ ಪ್ರಮುಖ ಮಾರುಕಟ್ಟೆಗಳಾದ ಗಣಪತ್ ಗಲ್ಲಿ, ನರಗುಂದಕರ್ ಭಾವೆ ಚೌಕ್, ಖಡೇ ಬಜಾರ್, ಪಾಂಗುಲ್ ಗಲಿ ಮತ್ತಿತರ ಕಡೆ ಲಕ್ಷ್ಮೀ ಪೂಜೆಗೆ ಬೇಕಾದ ಪೂಜಾ ಸಾಮಗ್ರಿಗಳು ಆಕರ್ಷಣೆಯಿಂದ ಕೂಡಿವೆ ಮಾರಿಗೋಲ್ಡ್ ಮತ್ತು ಶೇವಂತಿ ಹೂವುಗಳು, ಮಾರಿಗೋಲ್ಡ್ ಮಾಲೆಗಳು, ಮಾವಿನ ಎಲೆಗಳು, ಬಾಳೆ ಗಿಡಗಳು ಮತ್ತು ಮುಖ್ಯವಾಗಿ ಕಬ್ಬನ್ನು ಖರೀದಿಸಲು ಜನರು ಮುಗಿ ಬೀಳುತ್ತಾರೆ
ಈ ವರ್ಷ ದೀಪಾವಳಿ ಮತ್ತು ಲಕ್ಷ್ಮಿ ಪೂಜೆ ಒಂದೇ ದಿನ ಬಂದಿದೆ. ಹೀಗಾಗಿ ದೀಪಾವಳಿ ಸ್ನಾನ, ಪೂಜೆ ಮುಗಿಸಿ ಸಂಜೆ ಲಕ್ಷ್ಮಿ ಪೂಜೆಗೆ ಸಮಯ ಮೀಸಲಿಡಲು ಜನರು ಶಾಪಿಂಗ್‌ಗೆ ದವಾಡಯಿಸಿದ್ದಾರೆ . ವಿವಿಧ ಬಣ್ಣದ ರಂಗೋಲಿಗಳನ್ನೂ ಖರೀದಿಸಲಾಗುತ್ತಿದೆ. ಈ ವರ್ಷ ಬರಗಾಲವಿದ್ದರೂ ಹೂವಿನ ಬೆಲೆಯೂ ಕಡಿಮೆ ದರದಲ್ಲಿ ಜನರಿಗೆ ದೊರೆಯುತ್ತಿದೆ

Tags: