ಕಳೆದ 15 ವರ್ಷಗಳಿಂದ ಉಗಾರರ ಖುರ್ದ ಪಟ್ಟಣದಲ್ಲಿ ದುರ್ಗಾಮಾತಾ ದೌಡ ಕಾರ್ಯಕ್ರಮ ಅದ್ದೂರಿಯಾಗಿ ಜರುಗುತ್ತಿದೆ.
ಉಗಾರದಲ್ಲಿ ಮರಾಠಾ ಸಮಾಜದ ಎಲ್ಲಾ ಪ್ರಮುಖ ಯುವಕರು, ಹಿರಿಯರು ಮಹಿಳೆಯರು ಒಂದುಗೂಡಿ ದುರ್ಗಾಮಾತಾ ದೌಡದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು, ಇದರಲ್ಲಿ ಶಿವ ಪ್ರತಿಷ್ಠಾನ ಹಿಂದುಸ್ತಾನ ಸಂಘ ಉಗಾರ, ಧರ್ಮವೀರ ಛತ್ರಪತಿ ಶಿವಾಜಿ ಮಹಾರಾಜ್ ಯುವಕ ಮಂಡಳ, ಸಕಲ ಮರಾಠಾ ಸಮಾಜ, ಶಿವ ,ಶಂಭು ಪ್ರೇಮಿ ಯುವಕ ಮಂಡಳ ಸೇರಿದಂತೆ ಇನ್ನಿತರ ಯುವಕ ಮಂಡಲದ ಕಾರ್ಯಕರ್ತರು ದೌಡದಲ್ಲಿ ಭಾಗಿಯಾಗಿದ್ದರು .
ಮರಾಠಾ ಸಮಾಜದ ಯುವ ಮುಖಂಡ ವಿಕ್ರಂ ಭೋಸ್ಲೆ ಮಾತನಾಡಿ ದುರ್ಗಾಮಾತಾ ದೌಡದಲ್ಲಿ ಈ ವರ್ಷ ಅಧಿಕ ಪ್ರಮಾಣದಲ್ಲಿ ಯುವಕರು, ಪಾಲ್ಗೊಂಡಿದ್ದಾರೆ, ಛತ್ರಪತಿ ಶಿವಾಜಿ ಮಹಾರಾಜ್, ಜಿಜಾವು ಮಾತಾ, ಸಂಭಾಜಿ ಮಹಾರಾಜ್ ಮುಂತಾದ ಮರಾಠಾ ಸಮಾಜದ ಯುಗಪುರುಷರ ಬಗ್ಗೆ ಮಾಹಿತಿ ನೀಡುವುದು,ಧರ್ಮ ಜಾಗೃತಿ ಮೂಡಿಸುವ ಉದ್ದೇಶವಾಗಿದೆ ಯುವಕರಲ್ಲಿ ಯುಗಪುರುಷರ ಬಗ್ಗೆ ಆಧಾರ ಭಾವನೆ ನಿರ್ಮಾಣಗೊಂಡು ಹಿಂದೂ ಸಮಾಜದ ಬಗ್ಗೆ ಜಾಗೃತಿ ಭಾವನೆ ನಿರ್ಮಾಣಗೊಳ್ಳಲಿ ಎಂದು ಎಲ್ಲರನ್ನು ಒಂದುಗೂಡಿಸಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.