Uncategorized

ಬಸವನಾಡಿನಲ್ಲಿ ಕಣ್ಮನ ಸೆಳೆಯುತ್ತಿವೆ ದಸರಾ ಬೊಂಬೆಗಳು

Share

ನವರಾತ್ರಿ ಅಥವಾ ದಸರಾ ಹಬ್ಬದ ವೇಳೆ ಮನೆಯಲ್ಲಿ ಗೊಂಬೆ ಕೂರಿಸುವ ಪದ್ದತಿ ಇದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಈ ಸಂಪ್ರದಾಯ ಹೆಚ್ಚು ಜನಪ್ರಿಯ. ಅದ್ರೆ ಇಂತಹ ಆಚರಣೆ ಬಸವನಾಡು ವಿಜಯಪುರ ನಗರದಲ್ಲಿ ಆಚರಿಸ ಲಾಗುತ್ತಿದೆ. ಮೈಸೂರಿನ ಚಾಮುಂಡಿ ಬೆಟ್ಟ, ಮಹಿಷಾಸುರ, ಜಂಬೂ ಸವಾರಿ ಸೇರಿದಂತೆ ಮೈಸೂರು ಅರಮನೆ, ರಾಮಾಯಣ, ದೇವಲೋಕ, ಸತ್ಪುರುಷರ ಕುರಿತು ಕಥೆ ಹೇಳುತ್ತಿವೆ. ಅಷ್ಟೇ ಅಲ್ಲದೇ ಆಧುನಿಕ ಲೋಕವನ್ನು ಬಿಂಬಿಸುತ್ತಿವೆ. 3 ಥೀಮ್‌ಗಳನ್ನು ಗೊಂಬೆಗಳ ಮೂಲಕ ತಯಾರಿಸಲಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ನವರಾತ್ರಿ ಹಬ್ಬವೆಂದರೆ ಗೊಂಬೆಗಳ ಹಬ್ಬ ಅಂತಲೂ ಕರೆಯುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಗೊಂಬೆ ಪೂಜೆ ಸಾಮಾನ್ಯವಾಗಿ ಮಾಡಲಾಗುತ್ತದೆ. ಆದ್ರೆ ಬಸವನಾಡು ವಿಜಯಪುರ ನಗರದ ಸಂಗಮೇಶ್ವರ ಕಾಲನಿಯಲ್ಲಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ಮಹಾಲಿಂಗಪ್ಪ ಜತ್ತಿಯವರ ಮನೆಯಲ್ಲಿ ನವರಾತ್ರಿ ಹಬ್ಬದ ನಿಮಿತ್ತವಾಗಿ 300 ಕ್ಕೂ ಹೆಚ್ಚು ಗೊಂಬೆಗಳನ್ನು ಬಳಸಿ ಮೈಸೂರು, ರಾಮಾಯಣ ಹಾಗೂ 5 ಸ್ಥರಗಳಲ್ಲಿ ದೇವಲೋಕ, ಸತ್ಪುರುಷರು, ಹಳ್ಳಿ ಸೊಗಡು ಹೀಗೆ ಒಂದು ಗೊಂಬೆ ಲೋಕವನ್ನೆ ಸೃಷ್ಟಿಸಲಾಗಿದೆ. ಮಹಾಲಿಂಗಪ್ಪ ಇವರ ಪತ್ನಿ ವಿಜಯಾ ಇವರು ಈ ಗೊಂಬೆಗಳನ್ನು ಮೈಸೂರು ಮತ್ತಿತರೆಡೆ ಖರೀದಿಸಿ ಅವುಗಳನ್ನು ಕಥೆಯ ಸಿಕ್ವೆನ್ಸ್ ತಕ್ಕ ಹಾಗೆ ಜೋಡಿಸಿದ್ದು ಇವರ ಮನೆಗೆ ಆಗಮಿಸುವ ಗೊಂಬೆ ಪ್ರೀಯರಿಗೆ ಮನ ಮುಟ್ಟುವಂತೆ ಕಥೆ ಹೇಳುತ್ತಿವೆ. ಸೀತಾರಾಮರ ಕಲ್ಯಾಣ, ಬಿಂಬಿಸುವ ಥೀಮ್, ಲವಕುಶರ ತೊಟ್ಟಿಲು ಶಾಸ್ತ್ರ, ರಾವಣ, ಕುಂಭಕರ್ಣ ಕಥೆಯನ್ನು ಗೊಂಬೆಗಳ ಮೂಲಕ ಹೊರತಂದಿದ್ದಾರೆ.

ಇನ್ನೂ ಮೈಸೂರು ನಗರ ಹಾಗೂ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮವನ್ನು ಗೊಂಬೆಗಳ ಮೂಲಕ ಹೊರತರಲಾಗಿದೆ. ಗೊಂಬೆಗಳ ಅಲಂಕಾರವಲ್ಲದೇ ಘಟಸ್ಥಾಪನೆಯಿಂದ ವಿಜಯದಶಮಿ ಯವರೆಗೆ ಇವರ ಮನೆಯಲ್ಲಿ ಪಾರಾಯಣ ನಡೆಯುತ್ತದೆ. ಇನ್ನೂ ಗೊಂಬೆಗಳ ಅಲಂಕಾರ ವೀಕ್ಷಿಸಲು ಅಗಮಿಸುವ ಮಹಿಳೆಯರು ವಿಜಯಾ ಇವರು ಸಂಯೋಜಿಸಿ ರುವ ಗೊಂಬೆಗಳನ್ನು ಕಣ್ತುಂಬಿ ಕೊಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಒಟ್ನಲ್ಲಿ ದಸರಾ ಹಬ್ಬದ ಅಂದವನ್ನು ಈ ಗೊಂಬೆಗಳ ಅಲಂಕಾರ ಮತ್ತಷ್ಟು ಹೆಚ್ಚಿಸಿದ್ದು ವೀಕ್ಷಕರ ಕಣ್ಮನ ಸೊರೆಗೊಳಿಸಿದ್ದಲ್ಲದೇ ಮೋಡಿ ಮಾಡಹತ್ತಿವೆ.

ವಿಜಯಕುಮಾರ ಸಾರವಾಡ,
ಇನ್ ನ್ಯೂಜ್
ವಿಜಯಪುರ.

Tags: