ರೋಟರಿ ಕ್ಲಬ್ ಬೆಳಗಾವಿಯಿಂದ ಮಕ್ಕಳ ಮಾನಸಿಕ ದೃಢತೆ ಹೆಚ್ಚಿಸುವ ಸಲುವಾಗಿ ಹೋಪ್ & ಹೆಲಿಂಗ್ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ರೋಟರಿ ಗವರ್ನರ ನಾಶಿರ ಬೋರ್ಸದ್ವಾಲ ಹೇಳಿದರು
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಗವರ್ನರ: ನಾಶಿರ ಬೋರ್ಸದ್ವಾಲ ರೋಟರಿ ಕ್ಲಬ್ ಬೆಳಗಾವಿಯಿಂದ ಇಂತಹ ಕಾರ್ಯಕ್ರಮಗಳು ಮಾಡುತ್ತಿರುವುದು ಖುಷಿ ವಿಚಾರ
ಎಲ್ಲಾ ಮಕ್ಕಳಲ್ಲಿ ಮೊದಲು ಓದುವ ಸಾಮರ್ಥ್ಯ ವಿರಬೇಕು ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲಗೆ ಮೊರೆ ಹೋಗುತ್ತಿದ್ದಾರೆ ,ಓದುವ ಹವ್ಯಾಸವನ್ನು ಕಳೆದುಕೊಂಡಿದ್ದಾರೆ ಇಂದಿನ ಯುವ ಪೀಳಿಗೆ ಕೇವ ಮೊಬೈಲ್ ಗೇಮಗಳನ್ನು ಆಡುತ್ತಿದ್ದಾರೆ ಯುವಜನತೆ ಈ ವಯಸ್ಸಿನಲ್ಲಿ ಮಾನಸಿಕ ದೈಹಿಕ ವಾಗಿ ಗಟ್ಟಿಯಾಗಬೇಕು ಎಂದರು .
ಸ್ಫೂರ್ತಿ ಮಾಸ್ತಿಹೊಳಿ ಮಾತನಾಡುತ್ತಾ ಮಕ್ಕಳಲ್ಲಿ ಮಾನಸಿಕ ಸ್ಥಿತಿ ಗತಿ ಬಗ್ಗೆ ಅರಿವನ್ನು ಶಿಕ್ಷಕರೊಂದಿಗೆ ಪಾಲಕರು ಮೂಡಿಸಬೇಕು ಇವತ್ತಿನ ಮಕ್ಕಳು ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ ರೋಟರಿ ಕ್ಲಬ್ ನವರು ಹೋಪ್ &ಹೆಲಿಂಗ್ ಘಟಕ ಸ್ಥಾಪಿಸಿದ್ದು ತುಂಬಾ ಮಕ್ಕಳಿಗೆ ಅನಕೂಲವಾಗಿದೆ ಮಕ್ಕಳು ಶಿಕ್ಷಕರನ್ನು ಗೌರವಿಸುತ್ತಾರೆ ಆದರೆ ತಂದೆ ತಾಯಿಗಳನ್ನು ಪ್ರೀತಿಸುತ್ತಾರೆ ಹಾಗಾಗಿ ಮಕ್ಕಳನ್ನು ತಿದ್ದಿ ತಿಡುವಲ್ಲಿ ಪಾಲಕರು ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ರೋಟರಿ ದರ್ಪಣ ಅಧ್ಯಕ್ಷ ಕೋಮಲ್ ಕೋಳಿಮಠ ವಕೀಲ ವಿಜಯಲಕ್ಷಿ ,ಮಹೇಶ ಕಿವಡಸಣ್ಣವರ ,ಉದಯ ಇಡ್ಗಲ್ಲ ಉಮೇರ ಪಟೇಲ ಓಂಕಾರ ಕೆಲಕಾರ ಉಪಸ್ಥಿತರಿದ್ದರು