Uncategorized

ಡಿಸಿಎಂ ಡಿಕೆಶಿ ವಿರುದ್ಧ ಬಾಯಿ ಬಾಯಿ ಬಡಿದುಕೊಂಡು ರೈತರ ಆಕ್ರೋಶ

Share

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ವಿವಿಧ ಕಾಮಗಾರಿಗಳ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸಭೆ ನಡೆಯಿತು.

ವಿಜಯಪುರ ಜಿಲ್ಲೆಯ ಆಲಮಟ್ಟಿಯ ವ್ಯವಸ್ಥಾಪಕರ ಕಚೇರಿಯಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ರೈತರನ್ನು ಹೊರಗಡೆ ಇಟ್ಟು ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ ಘಟನೆ ನಡೆಯಿತು. ರಾಜ್ಯದಲ್ಲಿ ಬರಗಾಲ ಇದೆ, ತಿನ್ನೊಕ್ಕೆ ಕುಳಿಲ್ಲ, ಉದ್ಯೋಗ ಇಲ್ಲ ಎಂದು ರೈತರು ಕಿಡಿಕಾರಿದರು. ಈ ವೇಳೆ ರೈತರು ಸರ್ಕಾರಕ್ಕೆ ನಾವು ಭೂಮಿ ನೀಡಿದ್ದೇವೆ, ಹಂಗ್ ಭಿಕ್ಷೆ ಬೇಡೋಕೆ ಬಂದಿಲ್ಲ ಎಂದು ರೈತರ ವಾಗ್ದಾಳಿ ನಡೆಸಿದರು. ಭೂಮಿ ನೀಡಿದ ರೈತರಿಗೆ ಹಣ ನೀಡಿಲ್ಲ, ಮೂವರು ರೈತರು ಸಾವನ್ನಪ್ಪಿದ್ದಾರೆ ಎಂದು ಕಿಡಿಕಾರಿದರು. ಸಭೆ ಮುಗಿಸಿ ಹೊರಟ ಬಳಿಕವೂ ನೀರಾವರಿ ವಿಚಾರ‌ ಕುರಿತು ಡಿಕೆಶಿಗೆ ರೈತರು ಹಾಗೂ ರೈತ ಸಂಘಟನೆಯವರು ಮನವಿ ಸಲ್ಲಿಸಲು ಅವಕಾಶ ನೀಡದ ಹಿನ್ನಲೆ ಆಕ್ರೋಶ ಹೊರ ಹಾಕಿದರು. ಈ ವೇಳೆ ರೈತರು ಧಿಕ್ಕಾರ ಕೂಗಿ ಬಾಯಿ ಬಾಯಿ ಬಡಿದುಕೊಂಡರು. ಪೊಲೀಸ್ ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರ ಹಾಕಿದರು. ಮನವಿ ಸ್ವೀಕರಿಸದೇ ಹೋದ ಕಾರಣ ಡಿಸಿಎಂ ವಿರುದ್ದವೂ ಆಕ್ರೋಶ ಹೊರ ಹಾಕಿದರು.

Tags: