ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಸಚಿವಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಪತ್ರಕರ್ತರಿಗೆ ತಿಳಿಸಿದ್ದಾರೆ
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಪಂಚಮಸಾಲಿ ಸಮಾಜ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.
ಪಂಚಮಸಾಲಿ ಸಮುದಾಯವನ್ನು ಹೊಸದಾಗಿ 2ಎ ಹಾಗೂ 2ಡಿ ಎಂದು ಕ್ಯಾಟಗರಿ ಮಾಡಲಾಗಿದ್ದು, ಒಕ್ಕಲಿಗರಿಗೆ 2ಸಿ ಕ್ಯಾಟಗರಿ ಮಾಡಲಾಗಿದೆ. ಅಂದರೆ ಲಿಂಗಾಯಿತ, ಒಕ್ಕಲಿಗರಿಗೆಂದೇ ಪ್ರತ್ಯೇಕ ಕ್ಯಾಟಗರಿ ಮಾಡಲಾಗಿದೆ. ಮೀಸಲಾತಿ ಎಷ್ಟು ಪ್ರಮಾಣ ಎಂಬುದನ್ನು ನಂತರ ಘೋಷಿಸಲಾಗುವುದು ಎಂದು ಹೇಳಿದರು.
3Bನಲ್ಲಿದ್ದ ಲಿಂಗಾಯಿತರಿಗೆ 2D ಕ್ಯಾಟಗರಿ, 3Aನಲ್ಲಿದ್ದ ಒಕ್ಕಲಿಗರಿಗೆ 2C ಕ್ಯಾಟಗರಿ ರಚಿಸಬೇಕು ಎಂದು ತೀರ್ಮಾನಿಸಲಾಗಿದೆ. 2A, 2B ಕ್ಯಾಟಗರಿಯ ಮೀಸಲಾತಿ ಬದಲಾಗಲ್ಲ ಎಂದು ಹೇಳಿದರು.
ಪಂಚಮಸಾಲಿ ಸಮಾಜದವರು ಮೀಸಲಾತಿಗಾಗಿ ಕಳೆದ 2 ವರ್ಷದಿಂದ ಭಾರಿ ಹೋರಾಟ ನಡೆಸಿದ್ದರು. ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆದಿತ್ತು