Uncategorized

ಯುವ ಪೀಳಿಗೆ ಹಾಗೂ ಮಾನವ ಕುಲದ ಹಿತಕ್ಕಾಗಿ ಮಕ್ಕಳಿಗೆ ಶಿಕ್ಷಣದ ಜೋತೆ ಸಂಸ್ಕಾರ ಅಗತ್ಯ : ಶ್ರೀ ಮಾಳಿಂಗೇಶ್ವರ ಸ್ವಾಮಿಜಿ

Share

ಇಂದಿನ ಯುವಕರಲ್ಲಿ ಸಂಸ್ಕಾರ ಕಡಿಮೆ ಯಾಗುತ್ತಿರುವುದರಿಂದ ಶಿಕ್ಷಕರು ಹಾಗೂ ಪಾಲಕರು ಎಚ್ಚೆತ್ತಕೊಂಡು ಮಕ್ಕಳಿಗೆ ಶಿಕ್ಷಣದ ಜೋತೆಗೆ ಉತ್ತಮ ಸಂಸ್ಕಾರ ನೀಡುವದು ಅತಿ ಅವಶ್ಯ ಎಂದು ಶ್ರೀ ಮಾಳಿಂಗೇಶ್ವರ ಸ್ವಾಮಿಜಿ ಹೇಳಿದರು


ಅವರು ಅಳಗವಾಡಿ ಗ್ರಾಮದ ದಿಗಂಬರಶ್ವೇರ ಮಠದ ಆವರಣದಲ್ಲಿ ಶುಕ್ರವಾರ ನಡೆದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಅಂಗವಾಗಿ ದಿವ್ಯ ಸಾನಿದ್ಯವಹಿಸಿ ಮಾತನಾಡಿ ರಾಯಣ್ಣನ ಆದರ್ಶ ಗುಣಗಳನ್ನು ಮಕ್ಕಳಲ್ಲಿ ಬಾಲ್ಯದಿಂದಲೆ ಬೆಳಿಸಿದಾಗ ಮಾತ್ರ ದೇಶವು ಸಂಸ್ಕಾರಯುತವಾಗಿರುದು ಎಂದು ತಿಳಿಸಿದರು.

ಜಕನೂರಿನ ಮಾದನಮದಗೋಂಡೆಶ್ವರ ಸಿದ್ದಾಶ್ರಮದ ಡಾ. ಮಾದುಲಿಂಗ ಮಹಾರಾಜರು ಮಾತನಾಡಿ ಬುದ್ದ,ಬಸವ ರಾಯಣ್ಣ ವಿವೇಕಾನಂದ ಅಂಬೇಡ್ಕರ, ಮಹಾತ್ಮಾ ಗಾಂಧಿ ಮುಂತಾದವರು ತಮ್ಮ ಜೀವನ ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದಾರೆ ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಫಿಸಿ ಬದುಕಿದರು ಯಾರು ಸಮಾಜಕ್ಕೆ ತಮ್ಮ ಜೀವನವನ್ನು ಮೂಡುಪಾಗಿಡತ್ತಾರೋ ಅವರು ಮಾತ್ರ ಅಜರಾಮರಾಗಿರಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಧೀಪ್ ಹಾಲ್ಗೂಣಿ, ಮಾಜಿ ಜಿ.ಪಂ ಸದಸ್ಯ ಮಹಾದೇವ ಶಿರಗೂರೆ, ಶಿವಾನಂದ ಬನಶಂಕರಿ, ಮಲಕಾರಿ ಸಪ್ತಸಾಗರೆ, ಮಾರುತಿ ಬನಶಂಕರಿ, ಮುತ್ತಪ್ಪ ಡಾಂಗೆ ಭರತೇಶ ಸಿಂಗಾಡಿ, ಗೋಪಾಲ ಹಂಜೆ ಕರೇಪ್ಪ ಲಠ್ಠೆ ಮಹೇಶ ಗಡ್ಡೆ ಮುಂತಾದವರು ಇದ್ದರು ಶಿಕ್ಷಕ ಶಿವಾನಂದ ಹುಲಗಬಳ್ಳಿ ಸ್ವಾಗತಿಸಿದರು, ಶಿಕ್ಷಕ ಬಿ.ಎಲ್ ಗಂಟಿ ನಿರೂಪಿಸಿ ವಂದಿಸಿದರು.

Tags: