ಬೆಳಗಾವಿ ಸರ್ದಾರ್ ಮೈದಾನದಲ್ಲಿ ಶನಿವಾರ ಸಂಜೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಬೆಳಗಾವಿ ಜಿಲ್ಲಾಧ್ಯಕ್ಷ ಅರ ಅಭಿಲಾಷ್ ಸಾರಥ್ಯದಲ್ಲಿ ಅದ್ದೂರಿ ಗಡಿನಾಡ ಹಬ್ಬ ಜರುಗಿತು
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಅವರು ಮಾತನಾಡುತ್ತಾ ಆರ್ ಅಭಿಲಾಷ ಅವರು ವರ್ಷದಿಂದ ವರ್ಷಕ್ಕೆ ಗಡಿನಾಡ ಕನ್ನಡ ರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬರುತ್ತಿದ್ದಾರೆ ಅಭಿಲಾಷ ವಿದ್ಯಾರ್ಥಿ ಇದ್ದಾಗ ನಮ್ಮ ಕನ್ನಡ ಸಂಘಟನೆಗೆ ಸೇರಿದ್ದರು ಇವತ್ತು ಜಿಲ್ಲಾಧ್ಯಕ್ಷನಾಗಿ ಚಿತ್ರರಂಗದಲ್ಲಿ ಮಿಂಚಿನಂತೆ ಸಂಚರಿಸುತ್ತಿದ್ದಾರೆ ಗರುಡ ರಾಮ ಅವರು ದಿಗ್ಗಜ ನಟರಾಗಿದ್ದಾರೆ ಸಜ್ಜನ ನಟರಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಕನ್ನಡದ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದಾರೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡವೇ ದೇವರು ,ಕನ್ನಡವೇ ಜಾತಿ ,ಕನ್ನಡವೇ ಎಲ್ಲಾ ಎಂದು ದೇಯ ವ್ಯಾಖ್ಯೆಯಿಂದ ಕರ್ನಾಟಕದ ಮೂಲೆಮೂಲೆಗಳಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ ಅನೇಕ ಹೋರಾಟಗಳನ್ನ ನಾವು ಮಾಡಿದ್ದೇವೆ ಬೆಳಗಾವಿಯಲ್ಲಿ ಕನ್ನಡ ಉಳಿಸುವ ಕೆಲಸ ಎಲ್ಲರು ಮಾಡೋಣಾ ಎಂಇ ಸಿ ಹಾಗು ಶಿವಸೇನೆ ಪುಂಡರು ಮಾಡುವ ದಾಳಿಯನ್ನ ನಾವು ಸಹಿಸುವುದಿಲ್ಲ ಕನ್ನಡಿಗರ ಮೇಲೆ ದಾಳಿಯನ್ನ ಕನ್ನಡ ರಕ್ಷಣಾ ವೇದಿಕೆ ಖಂಡಿಸುತ್ತದೆ ಎಂದರು .
ಚಲನಚಿತ್ರ ನಟ ಗರುಡ ರಾಮ ಅವರು ಮಾತನಾಡುತ್ತಾ ಬೆಳಗಾವಿಯಲ್ಲಿ ಅದ್ದೂರಿ ಗಡಿನಾಡ ರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ ಬೆಳಗಾವಿಗೆ ೮ ವರ್ಷದಿಂದ ನಂಟು ಇದೆ ಅರ ಅಭಿಲಾಷ ಅವರು ಈ ಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಯುವಕ ಒಳ್ಳೆ ಕೆಲಸ ಮಾಡುತ್ತಿದ್ದಾನೆ ನಾವೆಲ್ಲ ಕನ್ನಡ ಸಿನಿಮಾ ಮಾಡಿ ಕನ್ನಡದ ಕೆಲಸ ಮಾಡುತ್ತಿದ್ದೇವೆ ಕೆಜಿಎಫ್ ಚಿತ್ರದ ಮುಖಾಂತರ ಪ್ರಶಾಂತ್ ನಿಲ್ ಅವರು ನನ್ನನ್ನು ಸಿನಿಮಾ ರಂಗಕ್ಕೆ ಪರಿಚಯ ಮಾಡಿದ್ದಾರೆ ಎಲ್ಲರು ಸೇರಿ ಕನ್ನಡದ ಪರ ಕೆಲಸ ಮಾಡಿ ಕೆಜಿಎಫ್ ಚಿತ್ರ ಬಂದಮೇಲೆ ಎಲ್ಲಾ ಭಾಗಕ್ಕೂ ಕನ್ನಡದ ಶಕ್ತಿ ಗೊತ್ತಾಗಿದೆ ನಾನು ಯಾವುದೇ ಭಾಷೆಯಲ್ಲಿ ಚಿತ್ರ ಮಾಡಿದ್ರು ಕೂಡಾ ನಮ್ಮ ಕನ್ನಡ ಬಿಡಲ್ಲಾ ಎಂದರು .
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಬೆಂಗಳೂರಿನ ಅಧ್ಯಕ್ಷರಾದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ,ಮಹಾಂತೇಶ ಶಾಸ್ತ್ರೀ ,ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ ,ರಾಹುಲ ಜಾರಕಿಹೊಳಿ ,ಕಾಂಗ್ರೆಸ ಮುಖಂಡ ಕಿರಣ ಸಾದುನ್ನವರ ,ದಿಗ್ವಿಜಯ ಸಿದ್ನಾಳ ,ನಿರ್ಮಾಪಕ ಹರೀಶ ,ವಿರೇಶ ಕಿವಡಸಣ್ಣವರ ,ರವಿ ಪೂಜಾರಿ ,ಉಮೇಶ ಆಚಾರ್ಯ ಬಾಳಪ್ಪಾ ಉಡಗಟ್ಟಿ ,ಪ್ರೇಮಾ ಚೌಗಲಾ ,ಆಕಾಶ ,ರಮೇಶ ಛಾಯಾಗೋಳ ,ಶಿವಾನಂದ ಸೇರಿದಂತೆ ಇನ್ನು ಅನೇಕ ಕನ್ನಡ ಪ್ರೇಮಿಗಳು ಭಾಗಿಯಾಗಿದ್ದರು