Uncategorized

ಕಮತಗಾ ಗ್ರಾಮ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಗಜರಾಯನ ದರ್ಬಾರು

Share

ಹೌದು ಖಾನಾಪೂರ ತಾಲೂಕಿನ ಪಶ್ಚಿಮ ಭಾಗದಲ್ಲಿನ ಕಮತಗಾ,ಸಾತನಾಳ್ಳಿ,ಮಾಂಜರಪೈ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಗಜರಾಯನು ತನ್ನ ದರ್ಬಾರು ನಡೆಸುತ್ತಿರುವ ದೃಶ್ಯ ಸೆರೆಹಿಡಿದಿದ್ದು ಅಲ್ಲಿನ ರೈತ ಕೃಷ್ಣಾ ಖಾಡೇಕರ ಅವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಈ ಗ್ರಾಮಗಳಲ್ಲಿನ ಹೊಲಗಳಲ್ಲಿ ಇರುವ ಭತ್ತದ ಬೆಳೆ ತಿಂದು ನಾಶ ಮಾಡುವ ದರ್ಬಾರು ಸೆರೆ ಹಿಡಿದಿದ್ದಾರೆ ವರ್ಷವಿಡಿ ರೈತ ತನ್ನ ಹೊಲದಲ್ಲಿ ದುಡಿದು ದುಡಿದು,ಕೈ ಸೇರುವ ಮುನ್ನವೇ ನಿರಾಸೆ ಮೂಡಿಸಿದೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬತೆಯಾಗಿದೆ ಇದರ ಕಡೆ ಸಂಭಂದಪಟ್ಟ ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಆಗಿರುವ ನಷ್ಟಕ್ಕೆ ಪರಿಹಾರ ಒದಗಿಸಲು ಕೋರಲಾಗಿದೆ.

ಅಲ್ತಾಫ್.ಎಂ.ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags: