Uncategorized

ಕಾಟಕರ ತೋಟದ ಪಪ್ಪಾಯಿಯಲ್ಲಿ ಗಣೇಶ..!

Share

ಶಿರಗುಪ್ಪಿ ಗ್ರಾಮದ ಬಾಳಾಸಾಬ ಕಾಟಕರ ಅವರು ತಮ್ಮ ಹೊಲದಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದು, ಪಪ್ಪಾಯಿಯಲ್ಲಿಯೇ ಗಣೇಶನ ಆಕೃತಿ ಮೂಡಿದ್ದು, ಅವರು ಅದನ್ನು ಮನೆಯಲ್ಲಿ ಪೂಜೆ ಮಾಡಿ, ಭಕ್ತಿ ಮೆರೆದಿದ್ದಾರೆ.

ಗ್ರಾಮದ ಪ್ರಗತಿಪರ ರೈತರಾಗಿರುವ ಬಾಳಾಸಾಬ ಕಾಟಕರ ಅವರು ತಮ್ಮ ಹೊಲದಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದಾರೆ. ಹೀಗಿರುವಾಗಿ ಗಣೇಶ ಚತುರ್ಥಿಯ ವೇಳೆಯಲ್ಲಿಯೇ ಗಣೇಶನ ಆಗಮನದ ಸಮಯದಲ್ಲಿ ಅವರ ತೋಟದ ಪಪ್ಪಾಯಿ ಗಿಡದಲ್ಲಿ ಗಣೇಶನ ಆಕೃತಿಯ ಪಪ್ಪಾಯಿ ಹಣ್ಣು ಬಂದಿದ್ದು, ವಿಸ್ಮಯಕ್ಕೆ ಕಾರಣವಾಗಿದೆ. ಗಣೇಶ ಹಬ್ಬದ ವೇಳೆಗೆ ಇಂತಹ ವಿಸ್ಮಯ ಕಂಡ ಬಾಳಾಸಾಬ ಕಾಟಕರ ಅವರು ಅದನ್ನು ತಮ್ಮ ಮನೆಗೆ ತಂದು, ಗಣೇಶನ ಜೊತೆಗೆ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿ, ಭಕ್ತಿ ಮೆರೆದಿದ್ದಾರೆ.
ಈ ಗಣೇಶ ಆಕಾರದ ಪಪ್ಪಾಯಿಯು ಗಣೇಶ ಹೊಲುವಂತೆ ಸೊಂಡಿಲು ಹೊರ ಬಂದಿದ್ದು, ಈ ವಿಸ್ಮಯ ನೋಡಲು ಅನೇಕ ಜನರು ಕಾಟಕರ ಅವರ ಮನೆಗೆ ಭೇಟ್ಟಿ ನೀಡಿ, ಅದರ ದರ್ಶನ ಪಡೆದು, ಅದನ್ನು ಮುಟ್ಟಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಶಿರಗುಪ್ಪಿ ಗ್ರಾಮದ ದಂತ ವೈದ್ಯರು, ಅಮೋಲ ಜನಕಲ್ಯಾಣ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ಅಮೋಲ ಸರಡೆ ಅವರು ತಮ್ಮ ಕುಟುಂಬದೊಂದಿಗೆ ಬಾಳಾಸಾಬ ಕಾಟಕರ ಅವರ ಮನೆಗೆ ಭೇಟ್ಟಿ ನೀಡಿ, ಪಪ್ಪಾಯಿ ಗಣೇಶನ ದರ್ಶನ ಪಡೆದುಕೊಂಡು, ವಿಸ್ಮಯದೊಂದಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಬಂದಿದ್ದಾರೆ.
ಒಟ್ಟಿನಲ್ಲಿ ಗಣೇಶ ಹಬ್ಬದಲ್ಲಿಯೇ ಇಂತಹ ವಿಸ್ಮಯ ಪಪ್ಪಾಯಿಲ್ಲಿ ಮೂಡಿರುವುದು ಶಿರಗುಪ್ಪಿ ಗ್ರಾಮಸ್ಥರನ್ನು ವಿಸ್ಮಯಗೊಳಿಸಿದ್ದು, ಗ್ರಾಮಸ್ಥರು ಕಾಟಕರ ಅವರ ಮನೆಗೆ ಭೇಟ್ಟಿ ನೀಡಿ, ಗಣೇಶ ಆಕೃತಿಯ ಪಪ್ಪಾಯಿ ದರ್ಶನ ಪಡೆದುಕೊಂಡು ಬರುತ್ತಿದ್ದಾರೆ.

Tags: