ಬೆಳಗಾವಿಯ ಕೆಪಿಟಿಸಿಎಲ್ ಹಾಲನಲ್ಲಿ ಬೆಳಗಾವಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಕೋರ್ ಕಮಿಟಿ ಅಧ್ಯಕ್ಷ ಶಾಸಕ ಜಿ ಟಿ ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮ ಜರುಗಿತು
ಮುಂಬರುವ ಲೋಕಸಭಾ ಕ್ಷೇತ್ರದ ಚುನಾವಣೆ ನಿಮಿತ್ಯ ರಾಜ್ಯದಲ್ಲಿ ಪಕ್ಷದ ಮುಖಂಡರು ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ ಜೆಡಿಎಸ್ ಹಾಗು ಬಿಜೆಪಿ ಮೈತ್ರಿ ಆಗಿ ತಿಂಗಳಷ್ಟೇ ಕಳೆದಿಲ್ಲ ಮುಖಂಡರು ಪ್ರಚಾರ ಭರ್ಜರಿಯಾಗಿ ನಡೆಸುತ್ತಿದ್ದಾರೆ
ಇವತ್ತು ಬೆಳಗಾವಿಯ ಕೆಪಿಟಿಸಿಎಲ್ ಹಾಲನಲ್ಲಿ ಬೆಳಗಾವಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಜೆಡಿಎಸ್ ಪುನಶ್ಚೇತನ ಪರ್ವ ಸಮಾವೇಶದಲ್ಲಿ ಮಾತನಾಡಿದ ಕೋರ್ ಕಮಿಟಿ ಅಧ್ಯಕ್ಷ ಶಾಸಕ ಜಿ ಟಿ ದೇವೇಗೌಡ ಬೆಳಗಾವಿ ಜನರು ಮಾತು ಕಡಿಮೆ ಕೆಲಸ ಹೆಚ್ಚು ಸಂಗೊಳ್ಳಿ ರಾಯಣ್ಣ ಕಿತ್ತೂರು ಚೆನ್ನಮ್ಮಾ ರಂತಹ ವೀರರು ಹುಟ್ಟಿರುವ ನಾಡಿನಲ್ಲಿ ಇರುವ ನೀವೆಲ್ಲರೂ ಪುಣ್ಯವಂತರು ಜೆಡಿಎಸ್ ಪಕ್ಷ ರೈತರ ಪಕ್ಷ ಇವತ್ತು ಸಾಕಷ್ಟು ರೈತರು ತಮ್ಮ ಅಳಲನ್ನು ನಮ್ಮ ಮುಂದೆ ತೊಡಿಗಿಕೊಂಡಿದ್ದಾರೆ ನಮಗೆ ಬೆಳೆ ಮಾಡಲು ಕರೆಂಟ್ ದೊರೆಯುತ್ತಿಲ್ಲ ಕಬ್ಬಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ .
ಕೇಂದ್ರ ಸರ್ಕಾರದಿಂದ ೬೦೦೦ ನಿಧಿ ಯಡಿಯೂರಪ್ಪನವರ ಅವಧಿಯಲ್ಲಿ ೪೦೦೦ ನೀಡಲಾಗುತ್ತಿತ್ತು ಆದರೆ ಕಾಂಗ್ರೆಸ ಸರಕಾರ ಬಂದಮೇಲೆ ರೈತರಿಗೆ ಯಾವುದೇ ಉಪಯೋಗವಿಲ್ಲ ಈ ಸರ್ಕಾರ ಬಂದಮೇಲೆ ಸರಿಯಾಗಿ ದುಡ್ಡು ನೀಡುತ್ತಿಲ್ಲ ವಿದ್ಯುತ ನೀಡುತ್ತಿಲ್ಲ ಈ ಹಿಂದೆ ೨೪೦೦೦ ಕೋಟಿ ಸಾಲವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮನ್ನಾ ಮಾಡಿದ್ದರು
ಒಟ್ಟಿನಲ್ಲಿ ಜೆಡಿಎಸ್ ಪಕ್ಷ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಪ್ರವಾಸ ಕೈಗೊಂಡು ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ಪಕ್ಷದ ಚಟುವಟಿಕೆ ಹಾಗೂ ಪಕ್ಷದ ಬಲವರ್ಧನ ಮತ್ತು ಸಂಘಟನೆ ಕೈಗೊಳ್ಳಲು ಚುರುಕುಗೊಳಿಸುತ್ತಿದೆ ಲೋಕ ಸಭಾ ಸಾರ್ವತ್ರಿಕ ಚುನಾವಣೆ -2024 ರಲಿ, ಪಕ್ಷದ ವತಿಯಿಂದ ಸ್ಪರ್ಧಿಸಬಹುದಾದ ಲೋಕಸಭಾ ಕ್ಷೇತ್ರಗಳನ್ನು ಗುರುತಿಸುತ್ತಿದೆ .
ಈ ಸಂದರ್ಭದಲ್ಲಿ ನಾಶಿರ ಭಾಗವಾನ ,ಶಂಕರಣ್ಣ ಮೂಡಲಗಿ ,ಕಲ್ಲಪ್ಪಣ್ಣ ಮರೆಣ್ಣವರ, ಸೌರಭ ಚೋಪ್ರಾ, ಮಾರುತಿ ಅಷ್ಟಗಿ,ಪ್ರದೀಪ ಮುಳಾಗಿ ,ಪಂಚನಗೌಡಾ ದ್ಯಾಮಣ್ಣಗೌಡ್ರ ,ಪ್ರಕಾಶ ಮುದೋಳ ,ಬಸವರಾಜ ರುದ್ರಗೌಡ್ರ ,ಮಲ್ಲಿಕಾರ್ಜುನ ಕಾಗವಾಡ ಸೇರಿದಂತೆ ಜೆಡಿಎಸ್ ಪಕ್ಷದ ಸದಸ್ಯರು ಉಪಸ್ಥಿತರಿದ್ದರು