ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಇವರ ಸಹಯೋಗದಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಅಸ್ಮಿತೆ ಕಾರ್ಯಕ್ರಮ ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಸಾವಿರಾರು ಸಾರ್ವಜನಿಕರು ಇಲ್ಲಿ ಭೇಟಿ ನೀಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ ಖುಷಿಪಡುತ್ತಿದ್ದಾರೆ
ಹೌದು ರಾಜ್ಯ ಜೀವನೋಪಾಯ ಇಲಾಖೆಯವರು ಮಹಿಳಾ ಸ್ವಸಹಾಯ ಸಂಘಗಳಿಗೆ ಮತ್ತು ಮಹಿಳೆಯರಿಗೆ ಜೀವನವನ್ನು ಮುನ್ನಡೆಸುವ ನಿಟ್ಟಿನಲ್ಲಿ ಅವರಿಗೆ ಒಳ್ಳೆಯ ಪ್ರೋತ್ಸಾಹ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ,ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಳಗಾವಿಯ ಸರ್ದಾರ ಮೈದಾನಕ್ಕೆ ಅನೇಕ ಸ್ವಸಹಾಯ ಸಂಸ್ಥೆಗಳು ತಮ್ಮ ಉತ್ಪಾದನೆ ಜೊತೆಗೆ ಮಾರಾಟ ಮಾಡಲು ಉತ್ಸಾಹದಿಂದ ಆಗಮಿಸಿದ್ದಾರೆ . ಗುರುವಾರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಚಾಲನೆ ನೀಡಿದರು ,ಇವತ್ತು ಎರಡನೇ ದಿನವೂ ಕೂಡಾ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ . ಬೆಳಗಾವಿ ಹಾಗು ಸುತ್ತಮುತ್ತಲಿನ ಸಾವಿರಾರು ಜನರು ಇಲ್ಲಿ ಆಗಮಿಸಿ ಮನೆಗೆ ಬೇಕಾದ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಹಾಗು ಶುಚಿ ರುಚಿ ಆಹಾರ ಸವಿಯುದರಲ್ಲಿ ಮಗ್ನರಾಗಿದ್ದರು
ಈ ಮೇಳದಲ್ಲಿ ರಾಜ್ಯದ 31 ಜಿಲ್ಲೆಗಳಿಂದಲೂ ಸಹ ಉತ್ಪಾದಿಸುತ್ತಿರುವಂತಹ ವಿವಿಧ ಗುಣಮಟ್ಟದ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಇಂದು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಫ್ಯಾಷನ್ ಶೋ, ಜನಪದ ನೃತ್ಯ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ದಿನಾಂಕ: 13/12/2023 ರ ವರೆಗೆ ನಡೆಯುವ ಈ ಮೇಳದಲ್ಲಿ ಪ್ರತಿದಿನ ಸಾಯಂಕಾಲ 6.30 ರಿಂದ ರಾತ್ರಿ 10.00 ಗಂಟೆಯ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ದಿನಾಂಕ: 09/12/2023 ರಂದು ಗುರು ಆರ್ಕೆಸ್ಟ್ರಾ ರವರಿಂದ ಸಂಗೀತ ರಸಮಂಜರಿ, ಸಂಗೀತಾ ರವೀಂದ್ರನಾಥ ರವರಿಂದ ಸೆಲೆಬ್ರಿಟಿ ಆರ್ಟಿಸ್ಟ್ ಕಾರ್ಯಕ್ರಮ ಜರುಗಲಿದ್ದು, ಬೆಳಗಾವಿಯ ಎಲ್ಲಾ ಸಾರ್ವಜನಿಕರು ಈ ಮೇಳದಲ್ಲಿ ಭಾಗವಹಿಸಿ ಸ್ವ-ಸಹಾಯ ಗುಂಪಿನಿಂದ ತಯಾರಿಸಿರುವ ಉತ್ಪನ್ನಗಳನ್ನು ಖರೀದಿಸಿ ಹಾಗೂ ವಿವಿಧ ಜಿಲ್ಲೆಗಳ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದು ಸ್ವ-ಸಹಾಯ ಗುಂಪಿನ ಸದಸ್ಯರುಗಳನ್ನು ಪ್ರೋತ್ಸಾಹಿಸುವಂತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರಾದ .ಪಿ. ಐ. ಶ್ರೀವಿದ್ಯಾ ರವರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ
ಮೈಸೂರು,ಉಡುಪಿ ,ವಿಜಯಪುರ,ಬಾಗಲಕೋಟ ,ಶಿವಮೊಗ್ಗ. ದಾವಣಗೆರೆ ,ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಿಹಿಸಿಹಿ ಪದಾರ್ಥ ,ಜೇನುತುಪ್ಪ ,ಖಾದಿ ಬಟ್ಟೆ ,ಮಹಿಳೆಯರಿಗಾಗಿ ವಿಶೇಷ ಸಾರಿಗಳು ,ಬಿದಿರಿನ ಕಲಾಕೃತಿಗಳು ,ಸುಮಾರು ೧೫೦ಕ್ಕೂ ಅಧಿಕ ಅಂಗಡಿಗಳಲ್ಲಿ ದೊರೆಯುತ್ತಿವೆ .
ಈ ಸಂದರ್ಭದಲ್ಲಿ ಮಹಾಂತೇಶ ನಗರ ನಿವಾಸಿ ಮಾತನಾಡುತ್ತಾ ನಿನ್ನೆ ದಿನಾ ಪತ್ರಿಕೆ ಹಾಗು ಮಾದ್ಯಮದಲ್ಲಿ ಮಾರಾಟ ಮೇಳದ ಬಗ್ಗೆ ವಿಷಯ ತಿಳಿಯಿತು ಇವತ್ತು ಕುಟುಂಬ ಸಮೇತ ಬಂದು ಭೇಟಿ ನೀಡಿದ್ದೇವೆ ಇಲ್ಲಿ ದಾವಣಗೆರೆ ತುಮುಕೂರು ಹಾಸನ ಅರಸೀಕೆರೆ ಸೇರಿದಂತೆ ಎಲ್ಲಾ ಕಡೆ ಬಂದಿದ್ದಾರೆ ಹ್ಯಾಂಡಮೇಡ ವಸ್ತುಗಳು ತುಂಬಾ ಅಲಂಕಾರಿಕ ರೀತಿಯಲ್ಲಿ ಇವೆ ಸೀರೆ ಬಾಸ್ಕೆಟಗಳು ಎಲ್ಲಾ ಇಲ್ಲಿ ದೊರೆಯುತ್ತಿವೆ ತುಂಬಾ ದೊಡ್ಡ ಮಟ್ಟದಲ್ಲಿ ಈ ಮೇಳ ನಡೆಯುತ್ತಿದೆ ಎಂದರು .
ಸ್ವಪ್ನಾ ಕುಲಕರ್ಣಿ ಮಾತನಾಡುತ್ತಾ ವಸ್ತು ಪ್ರದರ್ಶನಕ್ಕೆ ಭೇಟಿ ಕೊಟ್ಟಿದ್ದು ತುಂಬಾ ಖುಷಿಯಾಗಿದೆ ನಾವು ಹಾಗೆ ವೀಕ್ಷಣೆ ಮಾಡಲು ಬಂದರು ಕೂಡಾ ೩೦೦೦ ಬೆಲೆಯ ಸಾಮಗ್ರಿಗಳನ್ನು ಖರೀದಿ ಮಾಡಿದ್ದೇವೆ ಮನೆಗೆ ಬೇಕಾದ ಸಾಮಾಗ್ರಿಗಳು ದೊರೆಯುತ್ತಿವೆ ಅನೇಕ ಅಂಗವಿಕಲರು ಮಹಿಳೆಯರು ಇಲ್ಲಿ ಅಂಗಡಿ ಹಾಕಿದ್ದಾರೆ ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಎಲ್ಲರು ಖರೀದಿ ಮಾಡಬೇಕು ಎಂದರು .
ಬೆಂಗಳೂರಿನ ಸಾರ್ವಜನಿಕರು ಮಾತನಾಡಿ ಇವತ್ತು ಮೇಳದಲ್ಲಿ ನಾವು’ಜೇನುತುಪ್ಪ ಖರೀದಿ ಮಾಡಿದ್ದೇವೆ ಅದರಲ್ಲೂ ಕಾಡು ಜೇನು ಸಿಕ್ಕಿರುವುದು ಖುಷಿಯಾಗಿದೆ ಸಾಮಾನ್ಯವಾಗಿ ಈ ಜೇನುತುಪ್ಪ ಎಲ್ಲಿಯೂ ದೊರೆಯುವುದಿಲ್ಲ ೭೫೦ ಬೆಲೆಯ ತುಪ್ಪವನ್ನ ೬೫೦ ರೂಪಾಯಿಗೆ ಖರೀದಿ ಮಾಡಿದ್ದೇವೆ ನಮ್ಮ ದೇಶಿಯ ಸಾಮಗ್ರಿ ಇಲ್ಲಿ ಇವೆ ಉತ್ತರ ಕನ್ನಡ ಉಡುಪಿ ,ಕಾರವಾರ ಸೇರಿದಂತೆ ಎಲ್ಲಾ ಕಡೆಯವರು ಇಲ್ಲಿ ಆಗಮಿಸಿದ್ದಾರೆ.
ಬಾಗಲಕೋಟಯ ವಿದ್ಯಾರ್ಥಿ ಮಂಜುನಾಥ ಮಾತನಾಡಿ ಈ ಮೇಳದಲ್ಲಿ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯ ವಿವಿಧ ರೀತಿ ತಿಂಡಿ ತಿನಿಸುಗಳು ವಸ್ತುಗಳು ಬಂದಿದ್ದಾವೆ ನಮಗೆ ಅತೀವ ಸಂತಸವಾಗಿದೆ ಎಲ್ಲಾ ರೀತಿ ವಸ್ತುಗಳು ಒಂದೇ ಕಡೆ ದೊರೆಯುತ್ತಿರುವುದು ನಮಗೆ ಲಾಭವಾಗಿದೆ ಎಂದರು .
ಈ ನಿಟ್ಟಿನಲ್ಲಿ ಐಎನ್ ನ್ಯೂಸ್ ಜೊತೆ ಮಾತನಾಡಿದ ಗ್ರಾಹಕರೊಬ್ಬರು, ಮಹಿಳಾ ಉಳಿತಾಯ ಸ್ವಸಹಾಯ ಸಂಘಗಳನ್ನು ಪ್ರೋತ್ಸಾಹಿಸಲು ಸರ್ಕಾರ ಹಮ್ಮಿಕೊಂಡಿರುವ ‘ಅಸ್ಮಿತಾ’ ಮೇಳ ಶ್ಲಾಘನೀಯ. ಇದು ಮಹಿಳಾ ಸ್ವಸಹಾಯ ಸಂಘಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ಮಾರುಕಟ್ಟೆಯನ್ನು ನೀಡುತ್ತದೆ. ಇದಲ್ಲದೆ ಒಂದೇ ಸೂರಿನಡಿ ಎಲ್ಲ ವಸ್ತುಗಳು ಸಿಗುವುದರಿಂದ ಗ್ರಾಹಕರಿಗೂ ಅನುಕೂಲವಾಗುತ್ತದೆ.ಎಂದರು .
ಈ ಮೇಳದಲ್ಲಿ ದಿನಾಲೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ ಬೆಳಗಾವಿಯ ಸಾರ್ವಜನಿಕರು ಒಮ್ಮೆ ಭೇಟಿ ನೀಡಿ ಸ್ವಸಹಾಯ ಸಂಘಗಳಿಗೆ ಸಹಕರಿಸಿ ಎನ್ನುವುದೇ ನಮ್ಮ ಆಶಯ