Uncategorized

ಚಕಡಿ ಗಾಡಿ ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿದ ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್ ಪವಾರ್

Share

ಖಾನಾಪೂರ ತಾಲೂಕಿನ ಐತಿಹಾಸಿಕ ಪುಣ್ಯ ಸ್ಥಳವಾದ ನಂದಗಡದಲ್ಲಿ ನಾಡಹಬ್ಬದ ನಿಮಿತ್ಯ ಖಾಲಿ ಚಕಡಿ ಗಾಡಿ ಎಳೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಈ ಖಾಲಿ ಚಕಡಿ ಗಾಡಿ ಎಳೆಯುವ ಸ್ಪರ್ಧೆಗೆ ನಂದಗಡ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರದೀಪ್ ಚಂದ್ರಕಾಂತ ಪವಾರ್ ಅವರು ರಿಬ್ಬನ್ ಕಟ್ ಮಾಡಿ ತಾವೇ ಸ್ವತಃ ಖಾಲಿ ಚಕಡಿ ಗಾಡಿ ಎಳೆಯುವ ಮೂಲಕ ಈ ಸ್ಪರ್ಧೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಡಹಬ್ಬ ದಸರಾ ನಿಮಿತ್ಯ ಪ್ರತಿವರ್ಷವೂ ಈ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ ಖಾಲಿ ಚಕಡಿ ಎಳೆದು ತಮ್ಮ ಕಲೆಯನ್ನು ಬಹು ಉತ್ಸಾಹದಿಂದ ಸದರ ಪಡಿಸಲು ನಮ್ಮ ಗ್ರಾಮೀಣ ಭಾಗದ ಯುವಕರಿಗೆ ಪ್ರೇರಣೆಯಾಗಿದೆ ಎಂದರು.ಈ ಸಂದರ್ಭದಲ್ಲಿ ಬಹುಸಂಖ್ಯೆಯಲ್ಲಿ ಸ್ಪರ್ಧಾಳುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಲ್ತಾಫ್ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags: