Uncategorized

ಪ್ರಾಥಮಿಕ ಹಂತದಲ್ಲೆ ರೋಗ ಪತ್ತೆ ಹಚ್ಚಿದ್ದಲ್ಲಿ ಗಂಭೀರತೆಯಿಂದ ಪಾರಾಗಬಹುದು ಹಮೀದಿನ ರೋಹಿಲೆ

Share

ಇವತ್ತಿನ ದಿನಮಾನದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ.ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಹಮೀದಿನ ರೋಹಿಲೆ ಹೇಳಿದರು


ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹಳೆ ಪುರಸಭೆ ಕಾರ್ಯಾಲಯದಲ್ಲಿ ಕಾರ್ಮಿಕ ಇಲಾಖೆಯಡಿ ಕಾರ್ಮಿಕರಿಗೆ ಹಮ್ಮಿಕೊಂಡ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತಿನ ದಿನಮಾನದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಯಾವುದೇ ರೋಗವು ಗಂಭೀರತೆಗೆ ಹೋದ ಮೇಲೆ ಚಿಂತಿಸುವ ಬದಲು ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಒಳಪಟ್ಟು ರೋಗವನ್ನು ಪ್ರಾಥಮಿಕ ಹಂತದಲ್ಲೆ ಗುರುತಿಸಿ ಚಿಕಿತ್ಸೆ ಪಡೆದಲ್ಲಿ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ ಜೊತೆಗೆ ಪ್ರಾಣಾಪಾಯದಿಂದ ಬದುಕುಳಿಬಹುದಾಗಿದೆ ಎಂದು ಹೇಳುತ್ತಾ ಕುಡಚಿ ಪಟ್ಟಣದಲ್ಲಿ ಕಾರ್ಮಿಕರು ಹೆಚ್ಚಾಗಿ ಅಶಿಕ್ಷಿತರಿದ್ದು ಯಾವುದೇ ಭಯಮುಕ್ತವಾಗಿ ತಪಾಸಣೆಗೆ ಒಳಪಡಿಸುವಂತೆ ಅಭಯ ನೀಡಿದರು.

ನಂತರ ಡಾ. ಮಂಜುನಾಥ್ ಮಾತನಾಡಿ ಈ ಶಿಬಿರದಲ್ಲಿ ಬಿಪಿ, ಶುಗರ, ಹಾರ್ಟ್, ಸ್ಥೂಲಕಾಯ, ಕಣ್ಣು ಸೇರಿದಂತೆ ಸುಮಾರು 19 ಕಾಯಿಲೆಗಳನ್ನು ಪರೀಕ್ಷಿಸಲಾಗುವುದು ವರದಿ ಬಂದ ನಂತರ ಆಯಾ ಕಾಯಿಲೆಗೆ ತಕ್ಕಂತೆ ರಿಯಾಯಿತಿ ದರದಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಹಮೀದಿನ ರೋಹಿಲೆ, ಅಮೀನ್ ವಾಟೆ, ಸಾದಿಕ್ ರೋಹಿಲೆ, ಅಬ್ದುಲಖಾದರ ರೋಹಿಲೆ, ಬಾಬಾಜಾನ ಕಾಲೆಮುಂಡಾಸೈ, ಡಾ.ಶಿವಕುಮಾರ ಅಂಗಡಿ, ಕಾರ್ಮಿಕ ಇಲ್ಲಾಖೆಯ ರಾಯಬಾಗ ತಾಲೂಕ ಅಧ್ಯಕ್ಷ ಅಬುಬಕರ ವಾಟೆ, ನಿಯಾಜ ಜಾಂಗೀರ, ರಯೀಸ ಸಂದರವಾಲೆ , ಇಸ್ಮಾಯಿಲಮಗದುವ ,ರಾಜು ವಡ್ಡರ, ಡಾ. ಅನುರಾಧ ಸಂಗ್ಯೆನೆವರ, ರಂಜಿತಾ ಭಜಂತ್ರಿ , ಪ್ರಸಾದ ಪಾಟೀಲ, ಅಭಿಶೇಕ ಪಾಟೀಲ, ಗೌಸಲಾಜಮ ನವಾಜ್ ಇತರರು ಉಪಸ್ಥಿತರಿದ್ದರು.

Tags: