Uncategorized

ಹನುಮಾನ ನಗರದ ಗ್ಲಾಸ್ ಹೌಸನಲ್ಲಿ ಗೃಹೋಪಯೋಗಿ ವಸ್ತುಗಳ ಪ್ರದರ್ಶನ

Share

ಬೆಳಗಾವಿಯ ಹನುಮಾನ ನಗರದ ಗ್ಲಾಸ್ ಹೌಸನಲ್ಲಿ ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಬನಹಟ್ಟಿ ಅವರ ವತಿಯಿಂದ ವಿವಿಧ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಬನಹಟ್ಟಿ ವತಿಯಿಂದ ಇಂದು ಮಕರ ಸಂಕ್ರಾಂತಿ ನಿಮಿತ್ತ ವಿಶಿಷ್ಟವಾದ ಸಾಮಾಜಿಕ ಚಟುವಟಿಕೆಯನ್ನು ಜಾರಿಗೊಳಿಸಲಾಯಿತು. ಕ್ಷೇತ್ರದ ನಾಗರಿಕರಿಗೆ ಲೇಕ್ ವ್ಯೂ ಆಸ್ಪತ್ರೆಯ ಸಹಕಾರದೊಂದಿದೆ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಡೆಸಲಾಯಿತು. ಹನುಮಾನ ನಗರ ಹಾಗೂ ಸುತ್ತಮುತ್ತಲಿನ ಅನೇಕ ನಾಗರಿಕರು ಶಿಬಿರದಲ್ಲಿ ಭಾಗಿಯಾಗಿದ್ದರು .ಪ್ಲೊ
ಇದೇ ವೇಳೆ ಹನುಮಾನ ನಗರ ಗ್ಲಾಸ್ ಹೌಸನಲ್ಲಿ ಜ್ಯೋತಿ ಬನಹಟ್ಟಿ ವತಿಯಿಂದ ವಿವಿಧ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನೂ ಏರ್ಪಡಿಸಲಾಗಿತ್ತು.

ಈ ಪ್ರದರ್ಶನದಲ್ಲಿ ಮಹಿಳೆಯರ ಮತ್ತು ಪುರುಷರ ಬಟ್ಟೆ, ಸ್ವೆಟರ್‌ಗಳು, ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ಚಟ್ನಿಗಳು, ಪಾಪಡ್‌ಗಳು, ಉಪ್ಪಿನಕಾಯಿ ಇತ್ಯಾದಿಗಳ ಮಳಿಗೆಗಳನ್ನು ಆಯೋಜನೆ ಮಾಡಲಾಗಿತ್ತು .

ಇದೇ ವೇಳೆ ವಸ್ತುಪ್ರದರ್ಶನದ ಕುರಿತು ಮಾಹಿತಿ ನೀಡಿದ ಮುತ್ತು , ನಮ್ಮಲ್ಲಿ ಹ್ಯಾಪಿ ಗ್ರೇನ್ ಎಂಬ ಸಂಸ್ಥೆ ಇದ್ದು, ಮಹಿಳೆಯರು ಉತ್ಪಾದಿಸುವ ವಸ್ತು ಮತ್ತು ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ದೊರಕಿಸಿ ಆರ್ಥಿಕವಾಗಿ ಸಬಲರಾಗಲು ಸಾಮಾಜಿಕ ಉದ್ದೇಶದಿಂದ ಇಂತಹ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು. ‘ಸ್ಪರ್ಶ್’ ಎಂಬ ಏನಜಿಓ ದ ಮಕ್ಕಳು ರಚಿಸಿದ ವಸ್ತುಗಳನ್ನು ಮಾರುತ್ತಿದ್ದೇವೆ ಎಂದರು ಅದೂ ಅಲ್ಲದೆ ಇಂದು ಹಿರಿಯ ನಾಗರಿಕರಿಗಾಗಿ ಲೇಕ್ ವ್ಯೂ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಅನೇಕ ಜನರು ಇದರ ಪ್ರಯೋಜನ ಪಡೆದರು. ನಾಳೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಸಲಿದ್ದಾರೆ ಎಂದರು.

ಇದೇ ವೇಳೆ ಜ್ಯೋತಿ ಬನಹಟ್ಟಿ ಅವರು ಆಯೋಜಿಸಿದ್ದ ಈ ಎರಡೂ ಚಟುವಟಿಕೆಗಳಿಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Tags: