Uncategorized

ಡೆಂಗ್ಯೂ ಹೆಚ್ಚುವ ಸಾಧ್ಯತೆ ಇದೆ ರೋಗದ ಬಗ್ಗೆ ಕಾಳಜಿ ವಹಿಸಿ :ಆರೋಗ್ಯ ಸಚಿವ ದಿನೇಶ ಗುಂಡುರಾವ್

Share

ಪ್ರತಿಯೊಂದು ಮನೆಯನ್ನು ಸರ್ವೇ ಮಾಡಿ ಅವರ ಆರೋಗ್ಯ ಪರಿಶೀಲನೆ ಮಾಡಲಾಗುವುದು ಕರ್ನಾಟಕ ರಾಜ್ಯದಲ್ಲಿ ಡೆಂಗ್ಯೂ ಹೆಚ್ಚುವ ಸಾಧ್ಯತೆ ಇದೆ ಹಾಗಾಗಿ ಡೆಂಗ್ಯೂ ರೋಗದ ಬಗ್ಗೆ ಕಾಳಜಿ ವಹಿಸುವಂತೆ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಅರೋಗ್ಯ ಸಚಿವ ದಿನೇಶ ಗುಂಡುರಾವ್ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಯೊಂದು ಮನೆಯನ್ನು ಸರ್ವೇ ಮಾಡಿ ಅವರ ಅರೋಗ್ಯ ಪರಿಶೀಲನೆ ಮಾಡಲಾಗುವುದು ಮದುಮೆಯ ಹಾಗು ಡೆಂಗ್ಯೂ ರೋಗದ ಬಗ್ಗೆ ಕಾಳಜಿ ವಹಿಸುವಂತೆ ಇಲಾಖೆಗೆ ಸೂಚನೆ ನೀಡಿದ್ದೇನೆ ಕರ್ನಾಟಕ ರಾಜ್ಯದಲ್ಲಿ ಈ ವರ್ಷ ೮ ಜಿಲ್ಲೆಗಳಲ್ಲಿ ಅರೋಗ್ಯ ಪರಿಶೀಲನೆ ಮಾಡಲಾಗುವುದು .
ಸರ್ಕಾರೀ ಆಸ್ಪತ್ರೆಯಲ್ಲಿ ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುವವರು ಕೆಲಸದ ಅವಧಿ ಮುಗಿದಮೇಲೆ ಬೇರೆ ಕಡೆ ಕೆಲಸ ಮಾಡಬಹುದು ನಮ್ಮ ಸಮಯದಲ್ಲಿ ಮಾತ್ರ ಅವರು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದರು .

ನಮ್ಮ ಸರ್ಕಾರ ಭಾರಿ ಬಹುಮತದಲ್ಲಿದ್ದು ಜನರಿಗೆ ಉತ್ತಮ ಆಡಳಿತ ನೀಡುತ್ತಿದೆ ಬಿಜೆಯವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ನಮ್ಮ ಸರ್ಕಾರ ಸುಭ್ರದವಾಗಿರುತ್ತದೆ
ಬಿಜೆಪಿ ಅವರು ನಮ್ಮ ಸರ್ಕಾರ ಬೀಳಿಸುತ್ತೇನೆ ಎಂದು ಹುಚ್ಚರಸಂತೆಯಲ್ಲಿ ಮಾತನಾಡಿದ ತರಾ ಮಾತನಾಡುತ್ತಿದ್ದಾರೆ ನಮ್ಮ ಸರ್ಕಾರ ಭಾರಿ ಬಹುಮತದಲ್ಲಿದ್ದು ಜನರಿಗೆ ಉತ್ತಮ ಆಡಳಿತ ನೀಡುತ್ತಿದೆ ಬಿಜೆಯವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ .

ಬೆಳಗಾವಿ ಜಿಲ್ಲೆ ಗೋಕಾಕನಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿರೋ ಆರೋಗ್ಯ ಇಲಾಖೆ ತಜ್ಞ ವೈದ್ಯ ಡಾ.ಜಗದೀಶ್ ಜಿಂಗೆ ಸದ್ಯ ಬೆಳಗಾವಿ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ ಆದರೆ ಇ ವೈದ್ಯ ಸರ್ಕಾರಿ ವ್ಯವಸ್ಥೆ ಯನ್ನ ದುರುಪಯೋಗ ಮಾಡಿಕೊಂಡು ಸರ್ಕಾರಿ ವಾಹನದಲ್ಲಿಯೇ ತಮ್ಮ ಗೋಕಾಕನ ಖಾಸಗಿಆಸ್ಪತ್ರೆಗೆ ಹೋಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಅದರ ಬಗ್ಗೆ ಪರಿಶೀಲನೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು .

ಈ ಸಂದರ್ಭದಲ್ಲಿ ಅರೋಗ್ಯ ಅದಿಕಾರಿಳು ಉಪಸ್ಥಿತರಿದ್ದರು

Tags: