Uncategorized

ಆಟೋದಲ್ಲಿ ಬಿಟ್ಟು ಹೋಗಿದ್ದ ನಗದು, ದಾಖಲೆಗಳನ್ನು ಹಿಂದುರಿಗಿಸಿದ ಪ್ರಾಮಾಣಿಕ ಆಟೋ ಚಾಲಕ

Share

ಆಟೋದಲ್ಲಿ ಬಿಟ್ಟು ಹೋಗಿದ್ದ ನಗದು ಹಾಗೂ ಪರ್ಸ್‌ವನ್ನು ಆಟೋ ಚಾಲಕನೋರ್ವ ಪೊಲೀಸರಿಗೆ ಒಪ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ವಿಜಯಪುರ ನಗರದ ಗಾಂಧಿಚೌಕ್ ನಲ್ಲಿ ರವಿವಾರ ನಡೆದಿದೆ.

ಹಾಜಿ ಮಲಂಗ್ ಮಾನವೀಯತೆ ಮೆರೆದಿರುವ ಆಟೋ ಚಾಲಕ. ಇನ್ನು ಆಟೋದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಪರ್ಸ್‌ ಬಿಟ್ಟು ಹೋಗಿದ್ದಾರೆ. ಅದರಲ್ಲಿ 1800ಕ್ಕೂ ಹೆಚ್ಚು ನಗದು ಇದೆ. ಅದಕ್ಕಾಗಿ ಪರ್ಸ್‌ ಹಾಗೂ ನಗದನ್ನು ಸಂಚಾರಿ ಪೊಲೀಸ ಠಾಣಾ ಎಎಸ್‌ಐ ಆರ್‌ ಎಚ್. ಕೇಶ್ವಾಪುರಗೆ ನೀಡಿದ್ದಾರೆ. ಅದಕ್ಕಾಗಿ ಸಂಬಂಧಪಟ್ಟವರು ಸಂಚಾರಿ ಠಾಣೆಗೆ ಆಗಮಿಸಿ ಹಣ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Tags: